Home Local ಶಶಿಭೂಷಣ ಹೆಗಡೆಯವರಿಂದ ಕ್ಷೇತ್ರದಲ್ಲಿ ನಡೆದಿದೆ ಬಿರುಸಿನ ಪ್ರಚಾರ

ಶಶಿಭೂಷಣ ಹೆಗಡೆಯವರಿಂದ ಕ್ಷೇತ್ರದಲ್ಲಿ ನಡೆದಿದೆ ಬಿರುಸಿನ ಪ್ರಚಾರ

SHARE

ಶಶಿಭೂಷಣ ಹೆಗಡೆಯವರು ಸಿದ್ದಾಪುರದ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠಾಧೀಶ ಪೂಜ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ಒಡೆಯರ್ ಸ್ವಾಮೀಜಿಯವರ ದರ್ಶನ ಮಾಡಿ ಆಶೀರ್ವಾದ ಪಡೆದರು,

ನಂತರ ಶಿರಸಿ ಸಿದ್ಧಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಶಿಭೂಷಣ ಹೆಗಡೆಯವರು ಇಟ್ಗುಳಿ ಪಂಚಾಯತದ ಹುಳಸೇಹಳ್ಳಿ, ಇಡ್ತಳ್ಳಿ, ಕವಲದ್ದ ಭಾಗದಲ್ಲಿ ಹಾಗೂ ಸೋಣಗಿಮನೆ ಪಂಚಾಯತದ ಜಡ್ಡಿಗದ್ದೆ, ಮತ್ತು ವಾನಳ್ಳಿ, ಆರೇಕಟ್ಟು ವ್ಯಾಪ್ತಿಯಲ್ಲಿ ಮತ ಯಾಚಿಸಿದರು, ಈ ಸಂಧರ್ಭದಲ್ಲಿ ಯುವಜನತಾದಳದ ತಾಲ್ಲೂಕು ಅಧ್ಯಕ್ಷರಾದ ನರಸಿಂಹ ಅಬ್ರಿ, ಕಾನೂನು ಘಟಕದ ಅಧ್ಯಕ್ಷರಾದ ಪ್ರಮೋದ್ ಹೆಗಡೆ ಕಡಬಾಳ, ಸುಧೀಂದ್ರ ಹೆಗಡೆ ಕಡಬಾಳ, ಅನಿಲ ನೇತ್ರೆಕರ್, ಇಡ್ತಳ್ಳಿ ಘಟಕ ಅಧ್ಯಕ್ಷರಾದ ಸುಬ್ರಾಯ ನಾಯ್ಕ, ಸುಬ್ರಾಯ ಹೆಗಡೆ ಜಡ್ಡಿಗದ್ದೆ ಘಟಕ ಅಧ್ಯಕ್ಷರುಗಳು ಜೊತೆಯಲ್ಲಿ ಪಾಲ್ಗೊಂಡಿದ್ದರು,