Home Local ಗೋಕರ್ಣದಲ್ಲಿ ದಿನಕರ ಶೆಟ್ಟಿ ಪ್ರಚಾರ: ಜನತೆಯಿಂದ ಅತ್ಯುತ್ತಮ‌ ಸ್ಪಂದನೆ

ಗೋಕರ್ಣದಲ್ಲಿ ದಿನಕರ ಶೆಟ್ಟಿ ಪ್ರಚಾರ: ಜನತೆಯಿಂದ ಅತ್ಯುತ್ತಮ‌ ಸ್ಪಂದನೆ

SHARE

ಕುಮಟಾ: ಚುನಾವಣಾ ಕಣ ರಂಗೇರಿದೆ. ಪ್ರಚಾರದ ಭರಾಟಯೂ ಜೋರಾಗಿಯೇ ಇದೆ. ಕುಮಟಾ ಹೊನ್ನಾವರ ವಿಧಾನಸಭಾ ಕ್ಚೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರು ಪ್ರಚಾರದ ಭರಾಟೆಯಲ್ಲಿ ಇದ್ದಾರೆ. ಇಂದು ಗೋಕರ್ಣ ಭಾಗದಲ್ಲಿ ಅವರು ಸಭೆ ನಡೆಸಿ ಮತ ಯಾಚಿಸಿದರು.

ಗೋಕರ್ಣದಲ್ಲಿ ಸಭೆ

ಗೋಕರ್ಣದಲ್ಲಿ ಉತ್ತರ ಪ್ರದೇಶದ ಮಾನ್ಯ ಮಂತ್ರಿಗಳಾದ ಮಹೇಂದ್ರ ಸಿಂಗ್, ಎ.ಬಿ.ವಿ.ಪಿ. ಮುಕಂಡರಾದ ಸತೀಶ ಸಿಂಗ್, ಕುಮಟಾ ಹೊನ್ನಾವರ ತಾಲೂಕಿನ ಬಿಜೆಪಿ ಅಭ್ಯರ್ಥಿ ದಿನಕರ ಕೆ ಶೆಟ್ಟಿ, ಹಾಗೂ ನಾಗರಾಜ ನಾಯಕ ತೊಕೆ೯,ವಿನೋದ ಪ್ರಭು, ಕುಮಾರ ಮಾರ್ಕಂಡೇಯ,ಗಜಾನನ ಗುನಗಾ,ಮಂಜುನಾಥ ಜನ್ನು,ನಾಗವೇಣಿ ಹೆಗಡೆ, ದತ್ತು ನಾಯ್ಕ, ಎಂ.ಜಿ.ಭಟ್, ಮಹೇಶ ಶೆಟ್ಟಿ, ಚಂದ್ರಕಾಂತ ಶೆಟ್ಟಿ, ಜಯರಾಮ ಹೆಗಡೆ, ಕುಮಾರ ಕವರಿ,ನವೀನ ಕುಮಾರ,ಪ್ರಸಾದ ಭಟ್,ಸುಧಾ ಗೌಡ,ದಯಾನಂದ ನಾಯ್ಕ, ಇವರ ತಂಡವು ಗೋಕರ್ಣ ಮಂಡಲದ ಸಭೆಯಲ್ಲಿ ಹಾಜರಿದ್ದರು.

ಗೋಕರ್ಣ ಹಾಗೂ ಸುತ್ತಮುತ್ತಲಿನ ಜನರನ್ನು ಭೇಟಿ ಮಾಡಿದ ದಿನಕರ ಶೆಟ್ಟಿ ಮತ ಯಾಚಿಸಿದರು. ಜನತೆ ಅತ್ಯುತ್ತಮ ರೀತಿಯ ಸ್ಪಂದನೆ‌ ನೀಡಿದ್ದು ದಿನಕರ ಶೆಟ್ಟಿಯವರ ಜೊತೆಯಾದರು.

ಮಹಾಬಲೇಶ್ವರ ದರ್ಶನ

ಇಂದು ಕುಮಟಾ ಹೊನ್ನಾವರ ತಾಲೂಕಿನ ಬಿಜೆಪಿ ಅಭ್ಯರ್ಥಿ ದಿನಕರ ಕೆ ಶೆಟ್ಟಿಯವರು ಗೋಕರ್ಣದ ಮಹಾಗಣಪತಿ, ಮಹಾಬಲೇಶ್ವರ ಹಾಗೂ ತಾಮ್ರ ಗೌರಿ ದೇವಸ್ಥಾನಕ್ಕೆ ಬೇಟಿ ನೀಡಿ ದೇವರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮಾನ್ಯ ಮಂತ್ರಿಗಳಾದ ಮಹೇಂದ್ರ ಸಿಂಗ್, ಉತ್ತರ ಪ್ರದೇಶದ ಎ.ಬಿ.ವಿ.ಪಿ ಮುಕಂಡರಾದ ಸತೀಶ ಸಿಂಗ್, ನಾಗರಾಜ ನಾಯಕ ತೊಕೆ೯,ವಿನೋದ ಪ್ರಭು, ಕುಮಾರ ಮಾರ್ಕಂಡೇಯ,ಗಜಾನನ ಗುನಗಾ,ಮಂಜುನಾಥ ಜನ್ನು,ನಾಗವೇಣಿ ಹೆಗಡೆ, ದತ್ತು ನಾಯ್ಕ, ಎಂ.ಜಿ.ಭಟ್, ಮಹೇಶ ಶೆಟ್ಟಿ, ಚಂದ್ರಕಾಂತ ಶೆಟ್ಟಿ, ಜಯರಾಮ ಹೆಗಡೆ, ಕುಮಾರ ಕವರಿ,ನವೀನ ಕುಮಾರ,ಪ್ರಸಾದ ಭಟ್,ಸುಧಾ ಗೌಡ,ದಯಾನಂದ ನಾಯ್ಕ, ಇವರರು ಜೊತೆಗಿದ್ದರು.