Home Local ಊಹಾಪೋಹಕ್ಕೆ ತೆರೆ ಎಳೆದ ಸೂರಜ್ ನಾಯ್ಕ ಸೋನಿ: ಪ್ರಭಲ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಮುಂದುವರಿಕೆ.

ಊಹಾಪೋಹಕ್ಕೆ ತೆರೆ ಎಳೆದ ಸೂರಜ್ ನಾಯ್ಕ ಸೋನಿ: ಪ್ರಭಲ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಮುಂದುವರಿಕೆ.

SHARE

ಕುಮಟಾ: ಹೋರಾಟಗಾರ ಹಾಗೂ ಹಿಂದೂವಾದಿಯಾಗಿ ಅನೇಕ ಜನ ಅಭಿಮಾನಿಗಳನ್ನು ಹೊಂದಿರುವ ಕುಮಟಾ ಹೊನ್ನಾವರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ನಾಮಪತ್ರ ಹಿಂಪಡೆಯುತ್ತಾರೆ ಎಂಬ ಊಹಾ ಪೋಹಕ್ಕೆ ತೆರೆ ಎಳೆದಿದ್ದಾರೆ.

ನಾನು ಹೋರಾಟಗಾರನಾಗಿಯೇ ಗುರುತಿಸಿಕೊಂಡವನು ಹೊರಾಟ ನನ್ನ ರಕ್ತದಲ್ಲಿಯೇ ಇದೆ. ಬಿಜೆಪಿ ಟಿಕೆಟ್ ಕೈ ತಪ್ಪಿದ ಬಳಿಕ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ವಿಚಾರ ಎಲ್ಲರಿಗೂ ಗೊತ್ತು. ನಾನು ನಾಮಪತ್ರ ಹಿಂಪಡೆಯುತ್ತೇನೆ ಎಂದು ಅನೇಕರು ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾನು ನಾಮಪತ್ರ ಹಿಂಪಡೆಯುವುದಿಲ್ಲ. ನಾನು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಮುಂದುವರಿಯುತ್ತೇನೆ ಎಂದರು.

ನನ್ನ ಬೆಂಬಲಕ್ಕೆ ಹಿಂದೂ ಕಾರ್ಯಕರ್ತರು ಸಾತ್ ನೀಡುತ್ತಿದ್ದಾರೆ. ನನ್ನ ಇಷ್ಟು ವರ್ಷದ ಹೋರಾಟ ಈಗ ಫಲ‌ನೀಡಲಿದೆ‌ ಎಂಬ ವಿಶ್ವಾಸ ನನ್ನಲಿದೆ ಎಂದರು.