Home Local ಶಿರಸಿ ನಗರ ವ್ಯಾಪ್ತಿಯಲ್ಲಿ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ: ಶಶಿಭೂಷಣ ಹೆಗಡೆಯವರಿಗೆ ಇನ್ನಷ್ಟು ಬಲ.

ಶಿರಸಿ ನಗರ ವ್ಯಾಪ್ತಿಯಲ್ಲಿ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ: ಶಶಿಭೂಷಣ ಹೆಗಡೆಯವರಿಗೆ ಇನ್ನಷ್ಟು ಬಲ.

SHARE

ಶಿರಸಿ : ಡಾ.ಶಶಿಭೂಷಣ ಹೆಗಡೆಯವರ ಮರಾಠಿಕೊಪ್ಪದ ಮನೆಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ ನಗರ ಘಟಕ ಅಧ್ಯಕ್ಷರವರ ಸಹೋದರ ಜಗದೀಶ್ ಆನಂದ ಸಾಗರ್ ಅವರು ಬಿಜೆಪಿಯನ್ನು ತೊರೆದು ಜೆಡಿ ಎಸ್ ಸೇರ್ಪಡೆಯಾದರು, ಅದೇ ಸಂದರ್ಭದಲ್ಲಿ ಮಂಜುಳಾ ಎನ್ ಪಟಗಾರ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದು ಶಶಿಭೂಷಣ ಹೆಗಡೆಯವರ ನೇತ್ರತ್ವದಲ್ಲಿ ಜಾತ್ಯತೀತ ಜನತಾದಳವನ್ನು ಸೇರ್ಪಯಾದರು.

ಈ ಸಂಧರ್ಭದಲ್ಲಿ ಅವರುಗಳನ್ನು ಕ್ರಮವಾಗಿ ಸಂಘಟನಾ ಕಾರ್ಯದರ್ಶಿ ನಗರ ಜನತಾದಳ ಹಾಗೂ ಮಹಿಳಾ ವಿಭಾಗದ ಸಂಘಟನಾ ಕಾರ್ಯದರ್ಶಿ ಯನ್ನಾಗಿ ನೇಮಿಸಲಾಯಿತು,

ಗಣೇಶನಗರ ದ ಬಿಜೆಪಿ ಕಾರ್ಯಕರ್ತರಾದ ಉದಯ ಶೆಟ್ಟಿ ಅವರು ಸಹ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು, ಸಹ್ಯಾದ್ರಿತಗ್ಗಿನ ಲಲಿತಾ ನಾಯ್ಕ ಅವರು ತಮ್ಮ ಕಾರ್ಯಕರ್ತರ ಜೊತೆ ಇದೆ ಸಂದರ್ಭದಲ್ಲಿ ಪಕ್ಷವನ್ನು ಸೇರ್ಪಡೆಯಾದರು, ಇವರುಗಳನ್ನು ಡಾ.ಶಶಿಭೂಷಣ ಹೆಗಡೆಯವರು ಪಕ್ಷದ ಶಾಲನ್ನು ಹೊದೆಸಿ, ಧ್ವಜವನ್ನು ನೀಡುವದರ ಮುಖಾಂತರ ಪಕ್ಷಕ್ಕೆ ಬರಮಾಡಿಕೊಂಡರು,

ಈ ಸಂದರ್ಭದಲ್ಲಿ ಮಾತಾನಾಡಿದ ಅವರು ಶಿರಸಿ ನಗರಭಾಗದಲ್ಲಿ ರಾಷ್ಟ್ರೀಯ ಪಕ್ಷಗಳ ಇಷ್ಟು ವರ್ಷಗಳ ಆಡಳಿತದಿಂದ ಬೇಸತ್ತು ಜನತೆ ಸ್ವಯಂಪ್ರೇರಿತವಾಗಿ ನಮಗೆ ಬೆಂಬಲವನ್ನು ಸೂಚಿಸುತ್ತಿರುವದು ನಮ್ಮ ಕಾರ್ಯಕರ್ತರ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ ಎಂದರು, ಜನತಾದಳವನ್ನು ಗೆಲ್ಲಿಸಿ ಶಿರಸಿ ನಗರದ ಅಭಿವೃದ್ಧಿಗೆ ಹೊಸ ಅಧ್ಯಾಯವನ್ನು ಪ್ರಾರಂಭಿಸೋಣ ಎಂದರು, ಶಿರಸಿ ನಗರಕ್ಕೆ ಸೀಮಿತವಾದ ವಿಶೇಷ ಪ್ರಣಾಳಿಕೆಯನ್ನು ಹೊರತರಲಾಗುತ್ತಿದ್ದು, ಅದನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರದ್ದಾಗಿದ್ದು, ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ, ವಿಧವೆಯರ, ಹಿರಿಯನಾಗರಿಕರ ಹಾಗೂ ದಿವ್ಯಾಂಗರಿಗೆ ಕೊಡಮಾಡಿರುವ ಗೌರವಧನಗಳ ಬಗ್ಗೆ ತಿಳಿಹೇಳಿದರು, ಜನತಾದಳವು ಹಿಂದೆಂದಿಗಿಂತಲೂ ಅತೀ ಹೆಚ್ಚಿನ ಕಾರ್ಯಕರ್ತರ ಪಡೆಯನ್ನು ಹೊಂದಿದ್ದು ನಮಗೆ ಅನುಕೂಲಕರ ಎಂದರು,

ಈ ಸಂದರ್ಭದಲ್ಲಿ ಮುಖಂಡರಾದ ದೀಪಕ್ ರೆವಣಕರ್, ನಗರ ಜನತಾದಳದ ಘಟಕ ಅಧ್ಯಕ್ಷರಾದ ಸುಭಾಷ್ ಮಂಡುರ, ಕಾರ್ಯದರ್ಶಿ ಮೋಹನ್ ಅಚಾರಿ, ಸಯ್ಯದ್ ಮುಜಿಬ್, ಐಟಿ ವಿಂಗ ಜಿಲ್ಲಾಧ್ಯಕ್ಷರಾದ ಸಚಿನ್ ಶೆಟ್ಟಿ, ಶ್ರೀರಂಗ ಮಹಾಲಿಂಗಣ್ಣನವರ, ನರೇಂದ್ರ ನೆಜ್ಜುರ, ಅಕ್ತರ್ ಎಮ್ ಜಿ, ಅವರುಗಳು ಪಾಲ್ಗೊಂಡಿದ್ದರು.