Home Local ದಿನಕರ ಶೆಟ್ಟಿಯವರಿಂದ ಅಬ್ಬರದ ಪ್ರಚಾರ: ಹಲವೆಡೆ ಇಂದು ಪ್ರಚಾರ ಭರಾಟೆ.

ದಿನಕರ ಶೆಟ್ಟಿಯವರಿಂದ ಅಬ್ಬರದ ಪ್ರಚಾರ: ಹಲವೆಡೆ ಇಂದು ಪ್ರಚಾರ ಭರಾಟೆ.

SHARE

ಕುಮಟಾ: ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರು ಇಂದು ಚುನಾವಣಾ ಪ್ರಚಾರವನ್ನು ಬಿರುಸಿನಿಂದ ನಡೆಸಿದರು. ಮೂರೂರು ಶಕ್ತಿ ಕೇಂದ್ರಕ್ಕೆ ಬೇಟಿ ನೀಡಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಪ್ರಸನ್ನ ಡಿ ಹೆಗಡೆ, ಮದುಸೂಧನ ಹೆಗಡೆ, ಸಾವಿತ್ರಿ ಹೆಗಡೆ ಭಾರತಿ ಭಟ್, ರಮಾ ಭಟ, ಡಿ.ಸಿ. ಭಟ್, ದಿನೇಶ್ ಭಟ್, ಟಿ.ಎಸ್. ಭಟ್ ಗಜಾನನ ಭಟ್ ಹಾಗೂ ಹಲವಾರು ಕಾಯ೯ಕತ೯ರು ಹಾಜರಿದ್ದರು.

ಮೂರೂರ ಪಂಚಾಯಿತಿಯ ಎಲ್ಲಾ ಬೂತ್ ಗಳನ್ನೂ 70% ಲಿಡ್ ನಲ್ಲಿ ನಾವು ಮತ ಹಾಕಿ ನಿಮ್ಮನ್ನು ಗೆಲ್ಲಿಸುತ್ತೇವೆ ಎಂದು ಊರಿನ ಮುಖಂಡರೆಲ್ಲಾ ಆಶ್ವಾಸನೆಯನ್ನು ನೀಡಿದರು ಎಂದು ಹಾಗೂ ದಿನಕರ್ ಶೆಟ್ಟಿ ಯವರು ನಮಗೆ ಮೊದಲಿನಿಂದಲೂ ಚಿರಪರಿಚಿತರು ಈಗ ಬಿಜೆಪಿ ಪಕ್ಷದ ಅಭ್ಯರ್ಥಿ ಆದ್ದರಿಂದ ಇನ್ನೂ ಒಳ್ಳೆಯದೇ ಆಗಿದೆ ನಾವು 20 ವಷ೯ಗಳಿಂದ ಬಿಜೆಪಿ ಯ ಶಾಸಕರನ್ನು ನೋಡದೆ ಇದ್ದೇವೆ ಹಾಗಾಗಿ ಈ ಬಾರಿ ಬಿಜೆಪಿ ಶಾಸಕರನ್ನೆ ತರುತ್ತೆವೆ ಎಂಬ ಮಾತನ್ನು ಹೇಳಿದರು ಎಂದು ದಿನಕರ ಶೆಟ್ಟಿಯವರೇ ಸತ್ವಾಧಾರ ನ್ಯೂಸ್ ಗೆ ಮಾಹಿತಿ ನೀಡಿದರು.

ಪ್ರಚಾರ ಎಲ್ಲಿ?

ಅಲ್ವೇ ದಂಡೆಯಲ್ಲಿ ಇಂದು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ದಿನಕರ ಶೆಟ್ಟಿ ಅವರು ಪ್ರಚಾರ ಕಾರ್ಯ ಅಬ್ಬರದಿಂದ ನೆರವೇರಿಸಿದರು. ಜೊತೆಯಲ್ಲಿ ಗೌರೀಶ ಕುಬಲ್, ವಿಠೋಬಾ ಚೋಡನಕರ, ಅರುಣ್ ತಡದಿಕರ್, ರವಿ.ಪಿ.ಪಟಕುರೆ, ಪ್ರದೀಪ ಸುಡನಕರ್ ಹಾಗೂ ಮಂಜುನಾಥ ಕುಬಾಲ್ ಇದ್ದರು..

ಅದೇ ರೀತಿ ಇಂದು ಧಾರೇಶ್ವರದ ಹೊರಬಾಗದಲ್ಲಿ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಯವರು ಪ್ರಚಾರ ಮಾಡಿದರು ಈ ಸಂದರ್ಭದಲ್ಲಿ ಎಸ್.ಟಿ.ನಾಯ್ಕ, ಕೃಷ್ಣಾ ನಾಯ್ಕ, ದೇವೇಂದ್ರ ಶೇರುಗಾರ್, ಸುರೇಶ್ ಹರಿಕಾಂತ, ಮಾದೇವ ಶೇರುಗಾರ್, ಶಿವಾನಂದ ಹರಿಕಾಂತ, ಬಾಬಯ್ಯ ಹರಿಕಾಂತ, ಮದುಕರ ಜೆ ಹರಿಕಾಂತ, ವೆಂಕಟ್ರಮಣ ಹರಿಕಾಂತ, ಉಮೇಶ ಹರಿಕಾಂತ ಜೊತೆಗಿದ್ದರು.