Home Article ಕನ್ನಡವು , ಪ್ರಚಾರದ ಭಾಷಣಕ್ಕಿಂತ , ಆಚಾರಕ್ಕೇ ಬರಲಿ.

ಕನ್ನಡವು , ಪ್ರಚಾರದ ಭಾಷಣಕ್ಕಿಂತ , ಆಚಾರಕ್ಕೇ ಬರಲಿ.

SHARE

ಲೇಖಕರು -ಸಚಿನ ಹಳದೀಪುರ

1947ರ ಪೂರ್ವದಲ್ಲಿ ಭಾರತ ಆಂಗ್ಲರ ಭಾರತವಾಗಿತ್ತು.ಆದರೆ ಇಂದು ಆಂಗ್ಲ ಮಾಧ್ಯಮದ ಭಾರತವಾಗುವ ದಿಕ್ಕಿನಲ್ಲಿ ಸಾಗುತ್ತಿದೆ.ಸೂರ್ಯ ಮುಳುಗದ ನಾಡಿನಲ್ಲಿ ಹುಟ್ಟಿದ ಭಾಷೆ ಕಲಿತರೆ ಬದುಕಿಗೆ ಮುಳುಗಡೆವಿಲ್ಲಾ ಎನ್ನುವ ಮೂಡನಂಬಿಕೆಯೇ ಇದಕ್ಕೆ ಕಾರಣವಿರಬಹುದೇನೋ ತಿಳಿದಿಲ್ಲ.ಅದಕ್ಕೆ  ಕಾರಣವೇನು ಎಂಬುದು ಕಾರಣ ತಿಳಿದವರಿಗೆ  ಮಾತ್ರ ಗೊತ್ತು.ಇಂಗ್ಲೀಷ ಎಲ್ಲರಿಗೂ ಜೀವನದ ಭಾಷೆ ಎಂದು ನಂಬಲು ಸಾದ್ಯವಿಲ್ಲ.ಯಾಕಂದರೆ ಕನ್ನಡ ಮಾಧ್ಯಮದಲ್ಲಿಯು ಕಲಿತು ಸಾಧಿಸಬೇಕು ಎಂಬ ಹಂಬಲವರುವವರು ಮತ್ತು ಸಾಧಿಸಿದವರು ಅನೇಕರಿದ್ದಾರೆ.

                ಹಳದೀಪುರದ ಕ್ರಾಸನಿಂದ ಸ್ವಲ್ಪವೇ  ದೂರದಲ್ಲಿ ಪ್ರತ್ವಿಕ  ಎಂಬ ಹುಡುಗನಿದ್ದಾನೆ.ಪಿ ಯು ಸಿ ಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡು ಎಸ್ ಡಿ ಎಮ್ ನಲ್ಲಿ ಓದುತ್ತಿದ್ದಾನೆ.ಇವನು ತನ್ನ ಎಸ್ ಎಸ್ ಎಲ್ ಸಿಯನ್ನು ಹಳದೀಪುರದಲ್ಲಿ ಮುಗಿಸಿರುವುದು ವಿಶೇಷ.ಯಾಕಂದರೆ  ಕಳೆದ ಸಾಲಿನ(2015-2016 ರಲ್ಲಿ )ಎಸ್ ಎಸ್ ಎಲ್ ಸಿಯ ಫಲಿತಾಂಶದಲ್ಲಿ ಕಳಪೆ ಸಾಧನೆ  ಮಾಡಿ ಹಳದೀಪುರದ ಜನತೆಯ ಬಾಯಿಗೆ ಮಾತಾದ ಶಾಲೆಯಾಗಿತ್ತು..ಅದೇ ಸಮಯಕ್ಕೆ ಈತ 9ನೇ ತರಗತಿ ಮುಗಿಸಿ 10ನೇ ತರಗತಿಗೆ ಪ್ರವೇಶ ಪಡೆದು ,ಅದೇ ಶಾಲೆಯ ಶಿಕ್ಷಕರ ಮೇಲೆ ನಂಬಿಕೆಯನ್ನಿಟ್ಟು ಅಭ್ಯಾಸ ಮಾಡತೊಡಗಿದ.ಈ ಸಾಲಿನಲ್ಲಿ ಈತ ಕನ್ನಡದಲ್ಲಿ 117 ,ಇಂಗ್ಲಿಷನಲ್ಲಿ 90 ,ಸಮಾಜ ವಿಜ್ಞಾನದಲ್ಲಿ 99 ,ಹಿಂದಿ 96 ಅಂಕಗಳೊಂದಿಗೆ ಶೇ 89.92 ಅಂಕಗಳೊಂದಿಗೆ  ಶಾಲೆಗೆ ಪ್ರಥಮ ಬಂದಿರುವುದಲ್ಲದೇ ,ಶಾಲೆಯು ಸಹಿತ ಕಳೆದ ವರ್ಷಕ್ಕಿಂತ ಈ ವರ್ಷ ಬಹಳ ಚೇತರಿಕೆ ಪಡೆದುಕೊಂಡಿತು.ಯಾವುದೇ ಟ್ಯೂಷನಗೆ ಹೋಗದೆ ಈತ ಡಿಸ್ಟಿ0ಕ್ಷನ ಪಡೆದನು. ಈತನ ಈ ಸಾಧನೇ ಇಂದಿನ ಪೈಪೋಟಿ ಯುಗದಲ್ಲಿ ಆಂಗ್ಲ ಮಾಧ್ಯಮದವರಿಗೆ ಹೋಲಿಕೆ ಮಾಡಿದರೆ ಹೇಳಿಕೊಳ್ಳುವಂತಹ ಸಾಧನೇಯೇನು ಅಲ್ಲಾ.ಕನ್ನಡ ಮಾಧ್ಯಮದಲ್ಲಿಯೇ ಇತನಿಗಿಂತ ಹೆಚ್ಚು ಶೇಕಡವಾರು ಅಂಕ  ಪಡೆದವರು ತುಂಬಾ ಜನರು ಇರಬಹುದು.ಆದರು ನಾನು ಈತನ ಬಗ್ಗೆ ಬರೆಯಲು ಕಾರಣ ಒಂದದಿದೆ.ಆರ್ಥಿಕವಾಗಿ ಬಳಲಿದವರು ಮತ್ತು  ಸಾರಿಗೆ ಸಂಪರ್ಕದ ಕೊರತೆ ಇರುವವರು ಮಾತ್ರವೇ  ಸಾಮಾನ್ಯವಾಗಿ ಕನ್ನಡ ಮಾದ್ಯಮ ಸೇರುವರು ಎನ್ನುವ ಮಾತಿದೆ. ಆದರೆ ಇವನಿಗೆ ಅಂತಹ ಸಮಸ್ಯೆ ಏನು ಇಲ್ಲಾ.ಯಾಕಂದರೆ ಈತನ ತಾಯಿ ಸರ್ಕಾರಿ ಶಾಲೆಯ ಶಿಕ್ಷಕಿ ಎನ್ನುವುದೇ ನನ್ನ ಅಂಕಣದ ಮೂಲ ಉದ್ದೇಶ.ಒಂದೂ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಈತನ ತಾಯಿ ತನ್ನ ಮಗನನ್ನು ಕನ್ನಡ ಮಾಧ್ಯಮದಲ್ಲಿಯೇ ಓದಿಸುವುದು ನೋಡಿ ಆಶ್ಚರ್ಯವಾಗುತ್ತದೆ.

                              ಇಂದಿನ  ಆಂಗ್ಲ ಮಾಧ್ಯಮದ ಮಕ್ಕಳನ್ನು ಮತ್ತು ಶಾಲೆಯಲ್ಲಿನ ವ್ಯವಸ್ತೆ ನೋಡಿದರೆ  ,ಕನ್ನಡ ಮಾಧ್ಯಮಕ್ಕೆ ಏಕಾದರು ಹೋಗಬೇಕು ಅಂತಾ ಅನ್ನೀಸಬಹುದು.ಆದರೂ ಈತ ಆಂಗ್ಲ ಮಾಧ್ಯಮದ ಶಾಲೆಗೆ ಹೋಗಲಿಲ್ಲ.ಹಾಗಂತ ಹಳದೀಪುರಕ್ಕೇನು ಆಂಗ್ಲ ಮಾಧ್ಯಮದ ಶಾಲೆಗೆ ಬರಗಾಲ ಇದ್ದೀರಬಹುದು ಎಂಬ ಕಲ್ಪನೆ ನಿಮ್ಮಲ್ಲಿ ಇದ್ದರೆ ತಪ್ಪು .ಯಾಕಂದರೆ   ಹಳದೀಪುರದ 10km ಸುತ್ತಳತೆಯ ದೂರದಲ್ಲಿ ಕಡಿಮೆ ಅಂದರು 10ಕ್ಕಿಂತ ಅಧಿಕ  ಆಂಗ್ಲ ಮಾದ್ಯಮ ಶಾಲೆಗಳಿವೆ.ಕುಮಟಾ ಹೊನ್ನಾವರದ  ಮಧ್ಯದಲ್ಲಿರುವ ಹಳದೀಪುರಕ್ಕೇ 5ನಿಮಿಷಕ್ಕೆ ಒಂದರಂತೆ  ಟೆಂಪೋ ವ್ಯವಸ್ತೆ ಇದೆ. ಇದಲ್ಲದೆ ಸರಕಾರಿ ಬಸ ವ್ಯವಸ್ತೆ ಇದೆ. ಸಾಲದು ಅಂತಾ ಸ್ಕೂಲ ಬಸಗಳ ಹಾವಳಿಯು ಇದೆ. ಇಷ್ಟೆಲ್ಲ ಅನುಕೂಲಗಳಿದ್ದರು ಆಂಗ್ಲ ಮಾಧ್ಯಮಕ್ಕೆ ಸೇರದೆ ಇವನ ಮನಸ್ಸು ಕನ್ನಡ ಮಾದ್ಯಮದತ್ತ ಸಾಗಿರುವುದೆ  ಆಶ್ಚರ್ಯ. ಸರ್ಕಾರಿ ಶಾಲೆ ಬೇಡಾ ಆದರೆ ಸರ್ಕಾರಿ ಉದ್ಯೋಗ ಬೇಕು ಎನ್ನುವ ಸಮಾಜದಲ್ಲಿ ಈ ಹುಡುಗನ ಮತ್ತು ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಈತನ ತಾಯಿಯ ನಿರ್ಧಾರ ನನಗೆ ಬಲು ವಿಚಿತ್ರವಾಗಿ ಕಂಡಿತು.ಸರ್ಕಾರಿ ಶಾಲೆಯಲ್ಲಿ ದುಡಿಯುತ್ತಿರುವ ಎಷ್ಟೋ ಶಿಕ್ಷಕರ ಮಕ್ಕಳು ಸರ್ಕಾರಿ ಶಾಲೆಯಲ್ಲಿ  ಅಥವಾ ಕನ್ನಡ ಮಾಧ್ಯಮದಲ್ಲಿ ಓದುತ್ತಿಲ್ಲಾ.ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ  ಮಾಧ್ಯಮದಲ್ಲಿಯಾದರು ಹಾಕಿದ್ದಾರೆಯೇ ಎಂದು ದುರ್ಭಿನ ಹಿಡಿದು ಪಾಲಕರನ್ನು  ಹುಡುಕಿದರೂ ,ಸಿಗುವುದು ಕಷ್ಟ.

   ಕನ್ನಡ ರಾಜ್ಯೋತ್ಸವ ಬಂದಾಗ ಸಿದ್ದಪಡಿಸಿರುವ ವೇದಿಕೆಯ ಮೈಕನಲ್ಲಿ ಕನ್ನಡ ಮಾತಾಡಬೇಕು , ಕನ್ನಡ ಉಳಿಸಬೇಕು ,ಹೀಗೆ ಮಾಡಲು ಕನ್ನಡ ಮಾಧ್ಯಮದ ಶಾಲೆಯನ್ನು ಉಳಿಸಬೇಕು ಎಂಬ  ಭಾಷಣವನ್ನು ಮಾಡುವವರು ನಮ್ಮಲ್ಲಿ ಅನೇಕರಿದ್ದಾರೆ.ಆದರೆ  ಅವರ ಕನ್ನಡ  ಪ್ರೇಮ ಭಾಷಣಕ್ಕಿಂತ ಆಚಾರಕ್ಕೆ ಬಂದರೆ ಒಳ್ಳೆಯದಿತ್ತು.ಕನ್ನಡ ಉಳಿಯುವಿಕೆಯ ಬಗ್ಗೆ ಭಾಷಣದಲ್ಲಿ ಹೇಳುವವರೇ ವಿನಃ ಅದನ್ನು  ಪಾಲಿಸುವವರ್ ಸಂಖ್ಯೆ ಕಡಿಮೆಯೇ.ಕನ್ನಡ ಮಾಧ್ಯಮದ ಶಾಲೆಗಳಿಗೆ ಯಾರು ಬರುತ್ತಿಲ್ಲ ,ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿದೆ ಎನ್ನುವವರ ಮಕ್ಕಳೇ ಆಂಗ್ಲ ಮಾಧ್ಯಮದಲ್ಲಿ ಕಲಿತರೆ ಹೇಗೆ…? ಶಿಕ್ಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ  ಸೆರಿಸುವುದನ್ನು ನೋಡಿದರೆ ಕನ್ನಡ ಮಾಧ್ಯಮದಲ್ಲಿ ಕಲಿಸುತ್ತಿರುವ ಶಿಕ್ಷಕರಿಗೆ ತಮ್ಮ ಬೋಧನೆಯ ಮೇಲೆಯೇ  ನಂಬಿಕೆ ಇಲ್ಲವೇ…….? ಎನ್ನುವ ಪ್ರಶ್ನೆ ಕಾಡುತ್ತದೆ..ಕನ್ನಡ ಉಳಿಯುವಿಕೆಗಾಗಿ ಅನೇಕ ಸಂಘ ಸಂಸ್ಥೆಗಳು ಸಿದ್ಧವಾಗಿ ನಿಂತಿವೆ .ಆದರೆ ಸಂಘದ ಸದಸ್ಯರು ಮಾತ್ರ ಕನ್ನಡದ  ರಕ್ಷಣೆಗೆ ಕುಳಿತು   ಅವರ ಮಕ್ಕಳು ಆಂಗ್ಲ ಮಾಧ್ಯಮದ ಶಾಲೆಯಲ್ಲಿ ಕುಳಿತಿರುವುದು  ವಿಪರ್ಯಾಸ.

ಇನ್ನು ಸರ್ಕಾರದ ವಿಷಯಕ್ಕೆ ಬರುವುದಾದರೆ ಸುತ್ತೋಲೇಗಳ ಮೂಲಕ ,ಕನ್ನಡ ಸಾಹಿತ್ಯ ಪರಿಷದನ ಮೂಲಕ ಕನ್ನಡವನ್ನು ಉಳಿಸುವ ಪ್ರಯತ್ನ ಮಾಡುತ್ತಿದೆ.ಕನ್ನಡ ಶಾಲೆಗಳ ವಿಷಯದಲ್ಲಿ ಒಂದೇ ಒಂದೂ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಸರ್ಕಾರದ ಹೇಳಿಕೆ ನಮ್ಮ ಕಿವಿಯ ಮೇಲೆ ಬಿದ್ದ ಕ್ಷಣವೇ , 10 ವರ್ಷಗಳಲ್ಲಿ  10,560 ಶಾಲೆಗಳಿಗೆ ಬೀಗ ಹಾಕಿ  ಕೇವಲ 2 ವರ್ಷಗಳಲ್ಲಿ   10ಸಾವಿರ ಆಂಗ್ಲ ಶಾಲೆಗಳಿಗೆ  ಸಕ್ರಮವಾಗಿ ಅನುಮತಿ ನೀಡಿರುವ ವಿಷಯ ಪತ್ರಿಕೆಗಳಲ್ಲಿ ಬರುವುದನ್ನು ನೋಡಿದರೆ  ಮುಂದಿನ  ದಿನಗಳಲ್ಲಿ  ಕನ್ನಡದ ಪರಿಸ್ಥಿತಿ  ಹೇಗೆ ಇರಬಹುದು  ಎಂದು ಕಲ್ಪಿಸುವುದೆ ಕಷ್ಟವಾಗುತ್ತಿದೆ..ಕನ್ನಡ ಮಾಧ್ಯಮದದಲ್ಲಿ ಶಿಕ್ಷಕರ ಕೊರತೆ  ಇದೆಯೆಂದು ಅತಿಥಿ ಶಿಕ್ಷಕರ ನೇಮಕಾತಿಯನ್ನು ಜೂನ್-ಜುಲೈನಲ್ಲಿ ಆರಂಭಿಸಿ ,ಶಿಕ್ಷಕರು ಸೇರ್ಪಡೆಗೊಳ್ಳುವಾಗ ಸೆಪ್ಟೆಂಬರ ತಿಂಗಳು  ಬಂದಿರುತ್ತದೆ.ಇನ್ನೂ ಖಾಯಂ ಶಿಕ್ಷಕರ ನೇಮಕಾತಿ ಮಾಡಲಿದ್ದೇವೆ ಎನ್ನುತ್ತಾ ವರ್ಷದಿಂದ ವರ್ಷಕ್ಕೆ ಹೇಳುತ್ತಾ ಬರುವುದನ್ನು ಕೇಳಿ ಕೇಳಿ ಶಿಕ್ಷಕ ಅಭ್ಯರ್ಥಿಗಳ ವಯೋಮಿತಿ ಹೆಚ್ಚುವ  ಜೊತೆಯಲ್ಲಿ ,ಅವರ ದಕ್ಷತೆಯ ಮಟ್ಟವೂ ಕುಸಿಯುತ್ತಿದೆ.

    ಇನ್ನು ಕೆಲವು ಜನಸಾಮಾನ್ಯರಂತು  ತಮಿಳುನಾಡಿನಲ್ಲಿ ಜಾರಿಯಾದ ಪದ್ದತಿ ನಮ್ಮಲ್ಲಿ  ಬರಬೇಕು .ಇದು ನಮ್ಮ ರಾಜ್ಯಕ್ಕೆ ಮಾದರಿಯಾಗಬೇಕು .ಇಂತಹ ಯೋಜನೆಯನ್ನು ಬೆಂಬಲಿಸುವ ಆದಿ ಯೋಗಿತ್ಯನಾಥರು ನಮಗೆ ಸಿ. ಎಂ ಆಗಬೇಕು ಎನ್ನುತ್ತಾರೆ ವಿನಃ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಕ್ಕೆ ಸೇರಿಸುವುದಿಲ್ಲ.ಯಾವ ಕಾನೂನು ಬಂದರು ಏನು ಪ್ರಯೋಜನವಾಗಬಹುದು ಹೇಳಿ.ಕಳ್ಳತನ ,ಕೊಲೆ,ಭ್ರಷ್ಟಚಾರ ಮಾಡದಿರಲಿ ಅಂತಾ ಎಷ್ಟೋ ಕಾನೂನು ಜಾರಿ ಬಂದರು ,ಅವೆಲ್ಲವೂ ದಿನೇ ದಿನೇ ಹೆಚ್ಚುತ್ತಿರುವುದು ಪತ್ರಿಕೆಗಳಲ್ಲಿ ಉಲ್ಲೇಖವಾಗುತ್ತಿವೇ.ಕಪಾಟಿನಲ್ಲಿ ಕಂತು ಕಂತು ಆಗಿ ಕುಳಿತಿರುವ ಕಪ್ಪುಹಣವನ್ನು ಬಿಳಿಯ ಹಣವಾಗಿಸಲು 500,1000 ಮುಖಬೆಲೆಯ ಹಣ ಅಸ್ತಿತ್ವ ಕಳೆದುಕೊಳ್ಳುವಂತೆ ಮಾಡಿದಾಗಲೂ ಸಹಿತ ಕೆಲವು ಕಡೆ 2000 ಮುಖಬೆಲೆಯ ಕಂತುಗಳು ಸಿಕ್ಕಿರುವುದು ನಿಮ್ಮೆಲ್ಲರ ಗಮನಕ್ಕೆ ಬಂದಿರಬಹುದು .ಇದೇ ರೀತಿ ಕನ್ನಡವನ್ನು ಉಳಿಸುವಿಕೆಗೆ ಕಾನೂನು ತಂದರೂ  ಹಿಂದಿನ ವ್ಯವಸ್ಥೆಯ ಹಾದಿಯಲ್ಲೇ ಸಾಗುವುದಿಲ್ಲಾ ಎನ್ನುವುದು ಏನು ಗ್ಯಾರಂಟಿ.ಅದಕ್ಕಾಗಿಯೇ ಹೇಳೋದು ಸ್ವಯಂ ಪ್ರೇರಿತರಾಗಿ ಭಾಷಾ ಪ್ರೇಮ ಎನ್ನುವುದು ಹೃದಯದಿಂದ ಉಕ್ಕಬೇಕು .ಕನ್ನಡದ ಬಗ್ಗೆ ಕೇವಲ ಅಭಿಮಾನದ ಭಾಷಣ ಮಾಡುವ ಬದಲು ಅದನ್ನು ಕಾರ್ಯಗತಗೋಳಿಸಬೇಕು.ಬರಿಯ ಕನ್ನಡ ಉಳಿಯುವಿಕೆಗಾಗಿ ಅಂತಾ ಕನ್ನಡ ಸಮಿತಿಯ ರಚಿಸಿ ,ಫಲಕವನ್ನು ಕೈಯಲ್ಲಿ ಹಿಡಿದು ನಿಲ್ಲುವ ಬದಲು ಮಕ್ಕಳಿಗೆ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ನೀಡುತ್ತೇನೆ ಎಂಬ ಛಲವೂ ಪ್ರತಿಯೊಬ್ಬ ಕನ್ನಡಿಗನ ಅಂತರಂಗದಲ್ಲಿ ದೀರ್ಘಾಯುಷ್ಯವಾಗಿ ಛಾಪು ಮೂಡಬೇಕು.ಅತಿಥಿ ಶಿಕ್ಷಕರ ನೇಮಕಾತಿ ಎಂದು ಶಿಕ್ಷಕರನ್ನು ನೇಮಿಸಿಕೊಲ್ಲುವ ಬದಲು ಖಾಯಂ ಶಿಕ್ಷಕರನ್ನು ನೇಮಿಸಿಕೊಂಡು ಕನ್ನಡ ಮಾಧ್ಯಮವನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಮಾಡಬೇಕು.ಸರ್ಕಾರಿ ಉದ್ಯೋಗದಲ್ಲಿರುವ ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು.ಆಗ ಮಾತ್ರ ಕನ್ನಡ ಮಾಧ್ಯಮದ ಶಾಲೆಗಳು ಉಳಿಯುವಿಕೆಯ ಹಾದಿಯಲ್ಲಿ ಸಾಗಬಹುದು..

ಕೋನೆಯಲ್ಲಿ ಒಂದೂ ಮಾತು–ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ  ಅಂಕಗಳನ್ನು ಪಡೆದು ಮೆರಿಟ  ಆಧಾರದಲ್ಲಿ  ಸರ್ಕಾರಿ ಶಿಕ್ಷಕರಾಗಿ ಆಯ್ಕೆಯಾಗುವ ಕನ್ನಡ ಮಾಧ್ಯಮದ ಶಿಕ್ಷಕರಿಗೆ  ಸರಕಾರದ  ವಿವಿಧ ಯೋಜನೆಗಳ ಅಡಿಯಲ್ಲಿ ವಿಶೇಷ ತರಬೇತಿ ಪಡೆದಿರುತ್ತಾರೆ.ಇಂತಹ ಶಿಕ್ಷಕರ ಪ್ರಯತ್ನದ ಫಲವೇ ಕೆಲವು ಶಾಲೆಗಳು ಈಗಲೂ ತನ್ನ ವರ್ಚಸ್ಸನ್ನು ಉಳಿಸಿಕೊಂಡಿದೆ. ವಿಶೇಷವಾಗಿ ಹೊನ್ನಾವರದ ಒಂದೂ ಶಾಲೆಯಲ್ಲಿ ಒಂದೆ ಮಗುವಿದ್ದು ,ಆ ಕಾರಣದಿಂದ  ಶಾಲೆಯನ್ನು ನಡೆಸುತ್ತಿರುವ  ಶಿಕ್ಷಕರು ನಮ್ಮಲ್ಲಿ  ಇದ್ದಾರೆ.ಇಂದಿನ ಅಂಕಣದಲ್ಲಿ ಗುರುತಿಸಿರುವ ಹುಡುಗನ ಸಾಧನೆಗೆ  ಅವನ ಶಾಲೆಯ ಶಿಕ್ಷಕರ ಪ್ರಯತ್ನ ,ಪ್ರೋತ್ಸಾಹವೇ ಕಾರಣವೆಂದು ಈತನ ತಾಯಿ ಕನ್ನಡ ಶಾಲೆಯ ಶಿಕ್ಷಕಿಯಾಗಿರುವ  ಶ್ರೀಮತಿ ಚಂದ್ರಕಲಾ ರಾಯ್ಕರ ರೇ ಹೇಳುತ್ತಾರೆ.ಕನ್ನಡ ಮಾಧ್ಯಮದ ಶಾಲೆಯ ಶಿಕ್ಷಕರಿಗೆ  ಮಕ್ಕಳ ಶಿಕ್ಷಣದ ಗುಣಮಟ್ಟ ಅಭಿವೃದ್ದಿ ಪಡಿಸುವ  ಸಾಮರ್ಥ್ಯ  ಇದೇ. ಆದರೆ ಪಾಲಕರಿಗೆ ಅರ್ಥವಾಗದೇ ಇರುವುದರಿಂದ ಸರ್ಕಾರ  ಶಾಲೆ ಮುಚ್ಚುವ ಕೆಲಸ  ಮಾಡುತ್ತಿದೆ ಎಂಬುದು ಇವರ ಇನ್ನೊಂದು ಹೇಳಿಕೆಯಾಗಿದೆ. ಇವರಂತೆ ಇನ್ನೂ ಅನೇಕರು ಸರ್ಕಾರಿ ಹುದ್ದೆಯಲ್ಲಿದ್ದು ತಮ್ಮ ಮಕ್ಕಳನ್ನು ಕನ್ನಡ  ಮಾಧ್ಯಮದ ಶಾಲೆಯಲ್ಲಿ ಓದಿಸುತ್ತಿರುವವರು ತುಂಬಾ ಜನರು ಇರಬಹುದು.ಇನ್ನೂ ಕೆಲವು ಶಿಕ್ಷಕರು ತಮ್ಮ ಸಾಮರ್ಥ್ಯ ಮೀರಿ ಮಕ್ಕಳ ಭವಿಷ್ಯಕ್ಕಾಗಿ ಶ್ರಮಿಸುತ್ತಿರಬಹುದು.ಅಂತವರ ಕನ್ನಡ ಪ್ರೇಮವನ್ನು ಗೌರವಿಸುತ್ತಾ  , ಅವರ   ಕನ್ನಡ ಪ್ರೇಮವನ್ನು ಇಲ್ಲಿ ಉಲ್ಲೇಖಿಸಲು ಸಾದ್ಯವಾಗದಿರುವುದಕ್ಕೆ  ವಿಷಾದಿಸಿ ಕ್ಷಮೆ ಕೋರುತ್ತಾ  ಒಟ್ಟಾರೆ ಭಾಷಣಗಳಲ್ಲಿ ಕನ್ನಡವನ್ನು ಉಳಿಸಬೇಕು ಎಂಬ ಕೂಗು ಕೇಳಿ ಬರುವುದರ  ಜೊತೆಯಲ್ಲಿ ಹೃದಯದಲ್ಲಿಯೂ ಅದರ ಅಸ್ತಿತ್ವ ದೀರ್ಘಕಾಲ ಉಳಿಯಲಿ ಎಂಬುದು ನನ್ನ ಆಶಯ.