Home Local ಕಾಂಗ್ರೆಸ್ ಗೆ ಬಲನೀಡಲು ಒಂದಾಗಿ ಬಂದ ಯುವ ಪಡೆ: ಪ್ರೀತಿಯಿಂದ ಅವರನ್ನು ಬರಮಾಡಿಕೊಂಡ ರವಿಕುಮಾರ ಶೆಟ್ಟಿ.

ಕಾಂಗ್ರೆಸ್ ಗೆ ಬಲನೀಡಲು ಒಂದಾಗಿ ಬಂದ ಯುವ ಪಡೆ: ಪ್ರೀತಿಯಿಂದ ಅವರನ್ನು ಬರಮಾಡಿಕೊಂಡ ರವಿಕುಮಾರ ಶೆಟ್ಟಿ.

SHARE

ಕುಮಟಾ: ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರುತ್ತಿದ್ದು ಕಾಂಗ್ರೆಸ್ ಬಲ ಹೆಚ್ಚುತ್ತಿದೆ ಎಂಬ ಮಾತು ಕೇಳುತ್ತಿದೆ.

ಇಂದು ಬ್ಲಾಕ್ ಕಾಂಗ್ರೆಸ್ ಕುಮಟಾ ಇವರ ಕಚೇರಿಯಲ್ಲಿ ಮೊಸಳೆ ಸಾಲದ ಉತ್ಸಾಹಿ ಗ್ರಾಮ ಒಕ್ಕಲು ಯುವಕರನ್ನು ಯುವ ಮುಖಂಡರಾದ ಶ್ರೀಯುತ ರವಿಕುಮಾರ್ ಮೋಹನ್ ಶೆಟ್ಟಿ ಹಾಗೂ ಬ್ಲಾಕ್ ಅಧ್ಯಕ್ಷರಾದ ಶ್ರೀ ವಿ ಎಲ್ ನಾಯ್ಕ ಇವರು ಶಾಲು ಹೊದಿಸಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯರಾದ ರತ್ನಾಕರ ನಾಯ್ಕ, ಮುಖಂಡರಾದ ಜಗನ್ನಾಥ್ ನಾಯ್ಕ, ಗ್ರಾ ಪಂ ಅಧ್ಯಕ್ಷರಾದ ರಾಘವೇಂದ್ರ ಪಟಗಾರ ಹಾಗೂ ವಿಜಯ ಹೊಸ್ಕಟ್ಟಾ ಮುಂತಾದವರು ಉಪಸ್ಥಿತರಿದ್ದರು.


ಅದೇ ರೀತಿ ಮಾದನಗೇರಿ ಹರಿಕಂತ್ರ ಸಮಾಜದ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಯುವ ಮುಖಂಡರಾದ ಶ್ರೀಯುತ ರವಿಕುಮಾರ್ ಮೋಹನ್ ಶೆಟ್ಟಿಯವರ ಸಮ್ಮುಖದಲ್ಲಿ ಬೆಂಬಲ ಸೂಚಿಸಿದರು.