Home Local ಸೂರಜ್ ನಾಯ್ಕ ಸೋನಿಯವರಿಂದ ಅಬ್ಬರದ ಪ್ರಚಾರ: ಎಲ್ಲೆಡೆ ಸಿಕ್ಕಿದೆ ಉತ್ತಮ ಸ್ಪಂದನೆ.

ಸೂರಜ್ ನಾಯ್ಕ ಸೋನಿಯವರಿಂದ ಅಬ್ಬರದ ಪ್ರಚಾರ: ಎಲ್ಲೆಡೆ ಸಿಕ್ಕಿದೆ ಉತ್ತಮ ಸ್ಪಂದನೆ.

SHARE

ಕುಮಟಾ : ಕುಮಟಾ ಹೊನ್ನಾವರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಸೂರಜ್ ನಾಯ್ಕ ಸೋನಿಯವರು ತಮ್ಮ ಮತ ಬೇಟೆ ಪ್ರಾರಂಭಿಸಿದ್ದು ಚುರುಕಿನ ಪ್ರಚಾರ ಕಾರ್ಯ ನಡೆಸಿದ್ದಾರೆ.

ಇಂದು ವಿವಿದೆಡೆ ಪ್ರಚಾರ ನಡೆಸಿದ ಅವರು ತಮ್ಮ ಬೆಂಬಲಿಗರೊಂದಿಗೆ ತಮ್ಮ ಚಿನ್ಹೆಯಾದ ರಿಕ್ಷಾದಲ್ಲಿಯೇ ತೆರಳಿ ಪ್ರಚಾರ ನಡೆಸಿದರು ಎನ್ನಲಾಗಿದೆ.

ಮಲ್ಲಾಪುರ ಗ್ರಾಮಕ್ಕೆ ಭೇಟಿನೀಡಿ ಗ್ರಾಮಸ್ಥರನ್ನ ಭೇಟಿ ಮಾಡಿ ಆಶೀರ್ವಾದ ಪಡೆದರು. ಅದೇ ರೀತಿ ಹೊನ್ನಾವರದ ದರ್ಬೆಜಡ್ಡಿ ಗೆ ಭೇಟಿನೀಡಿ ಜನರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಅದಷ್ಟೇ ಅಲ್ಲದೇ ಇನ್ನೂ ಅನೇಕ ಕಡೆಗಳಲ್ಲಿ ತಮ್ಮ ಪ್ರಚಾರ ಕಾರ್ಯ ನಡೆಸಿದ್ದು ಗೆಲುವಿನ ನಗೆ ಬೀರಲು ಶತಾಯ ಗತಾಯ ಶ್ರಮಿಸುತ್ತಿದ್ದಾರೆ ಎನ್ನಲಾಗಿದೆ.