Home Local ಒಂದೆಡೆ ಪ್ರಚಾರ ಭರಾಟೆ, ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ಸೇರ್ಪಡೆ: ಕುಮಟಾದಲ್ಲಿ ಬಲಗೊಳ್ಳುತ್ತಿದೆ ಕಾಂಗ್ರೆಸ್

ಒಂದೆಡೆ ಪ್ರಚಾರ ಭರಾಟೆ, ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ಸೇರ್ಪಡೆ: ಕುಮಟಾದಲ್ಲಿ ಬಲಗೊಳ್ಳುತ್ತಿದೆ ಕಾಂಗ್ರೆಸ್

SHARE

ಕುಮಟಾ:ಬ್ಲಾಕ್ ಕಾಂಗ್ರೆಸ್ ಕುಮಟಾ ವತಿಯಿಂದ ಒಂದು ಕಡೆ ಕುಮಟಾ/ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರ ಬಿರುಸಿನ ಪ್ರಚಾರದ ನಡುವೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಯುವಕರ ಸಂಖ್ಯೆ ಹೆಚ್ಚುತ್ತಿದೆ.

ಅಳಕೋಡ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಹೊಳೆಬೈಲ್, ಮುತ್ತಳ್ಳಿ,ಬಂಡಿವಾಳ,ಜನತಾ ಕಾಲಿನಿ, ಹೆಬೈಲ್, ಉಪ್ಪಿನ ಪಟ್ಟಣ ಗೌಡರಕೇರಿ ಹಾಗೂ ಎಸ್ ಸಿ ಕೇರಿಯಲ್ಲಿ ಕಾರ್ಯಕರ್ತರೊಡನೆ ಚರ್ಚಿಸಿದರು.

ನಾನು ಶಾಸಕರಾಗಿದ್ದಾಗ ಈ ಭಾಗದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಪೂರ್ತಿಗೊಳಿಸಿದ್ದು ತಾವು ನನಗೆ ಅತಿ ಹೆಚ್ಚಿನ ಮತ ನೀಡಿ ಬಹುಮತದಿಂದ ಆರಿಸಿ ತರಬೇಕೆಂದು ವಿನಂತಿಸಿದರು.

ಅದರಂತೆ ಶಾಸಕರ ಸಮ್ಮುಖದಲ್ಲಿ ಹೊಸಹೆರವಟ್ಟಾದ ಹಲವು ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ವಿ ಎಲ್ ನಾಯ್ಕ, ತಾರಾ ಗೌಡ, ಸುರೇಖಾ ವಾರೀಕರ್, ಕೃಷ್ಣಾನಂದ ವೆರ್ಣೇಕರ್, ಎಸ್. ಎಂ.ಭಟ್, ಶಿವಶಂಕರ್, ಸುಲೋಚನಾ ಮುಕ್ರಿ, ಗೌರಿ ಪಟಗಾರ, ದೇವು ಗೌಡ ಮುಂತಾದವರು