Home Local ಶೇಕಡಾ 100 ಫಲಿತಾಂಶ ದಾಖಲಿಸಿ ಉತ್ತರ ಕನ್ನಡ ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಬೀನಾ ವೈದ್ಯ ಪದವಿ...

ಶೇಕಡಾ 100 ಫಲಿತಾಂಶ ದಾಖಲಿಸಿ ಉತ್ತರ ಕನ್ನಡ ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಬೀನಾ ವೈದ್ಯ ಪದವಿ ಪೂರ್ವ ಕಾಲೇಜು ಮುರ್ಡೇಶ್ವರ.

SHARE

ಪ್ರಸಕ್ತ ಸಾಲಿನ ದ್ವಿತೀಯ ಪಿ.ಯು.ಸಿ ಫಲಿತಾಂಶ ಪ್ರಕಟಗೊಂಡಿದ್ದು , ಮುರ್ಡೇಶ್ವರದ ಬೀನಾ ವೈದ್ಯ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಶೇಕಡಾ 100 ಫಲಿತಾಂಶ ದಾಖಲಿಸಿ ಕಾಲೇಜಿನ ಕೀರ್ತಿ ಹೆಚ್ಚಿಸಿರುತ್ತಾರೆ.

ಕುಮಾರ ನಾಗಾರ್ಜುನ ಭಟ್ಟ 94 % ಅಂಕ ಪಡೆದು ಪ್ರಥಮ ಸ್ಥಾನವನ್ನು,ಕುಮಾರಿ ಆಯುನಾ ಶೇಖ್ 88.16 %,ಕುಮಾರಿ ವಿದ್ಯಾ ಖಾರ್ವಿ 88.16 % ಅಂಕ ಪಡೆದು ದ್ವಿತೀಯ ಸ್ಥಾನವನ್ನು ,ಕುಮಾರಿ ಪವಿತ್ರಾ ಗೌಡ 86.60 % ಅಂಕ ಪಡೆದು ತೃತೀಯ ಸ್ಥಾನವನ್ನೂ ಪಡೆದಿರುತ್ತಾರೆ.

ವಿದ್ಯಾರ್ಥಿಗಳ ಈ ಅಮೋಘ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಂಕಾಳ ಎಸ್ ವೈದ್ಯ,ನಿರ್ದೇಶಕಿಯಾದ ಶ್ರೀಮತಿ ಪುಷ್ಪಲತಾ ಎಂ.ಎಸ್,ಪ್ರಾಂಶುಪಾಲರಾದ ಪ್ರಸಾದ ಮಹಾಲೆ,ಉಪ ಪ್ರಾಂಶುಪಾಲರಾದ ಮಹೇಶ ಹೆಗಡೆ ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.