Home Local ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರಿಂದ ಚುರುಕಾಗಿ ಸಾಗಿದೆ ಚುನಾವಣಾ ಪ್ರಚಾರ.

ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರಿಂದ ಚುರುಕಾಗಿ ಸಾಗಿದೆ ಚುನಾವಣಾ ಪ್ರಚಾರ.

SHARE

ಹೊನ್ನಾವರ: ಎಲ್ಲೆಡೆ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಅವರ ಪರವಾಗಿ ಪ್ರಚಾರ ಭರಾಟೆ ಜೋರಾಗಿದೆ .ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿದಿನ ಸಭೆ ಹಾಗೂ ಮನೆ ಮನೆ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ . ದಿನಕರ ಶೆಟ್ಟಿ ಸ್ವತಃ ತಾವೂ ಚುರುಕಿನ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ.

ಶತಾಯಗತಾಯ ಪ್ರಯತ್ನ ಮಾಡಿ ಈ ವರ್ಷ ಬಿಜೆಪಿಯನ್ನು ಗೆಲ್ಲಿಸಲೇಬೇಕು ಎಂದು ಪಣ ತೊಟ್ಟಿರುವ ಕಾರ್ಯಕರ್ತರು ಸಂಪೂರ್ಣ ಕ್ರಿಯಾಶೀಲರಾಗಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಕಂಡುಬಂದಿದೆ .

ಅದೇ ರೀತಿ ಮುಗ್ವಾ ಕವಲಕ್ಕಿ ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಅವರ ಪರವಾಗಿ ಭಾರೀ ಬೆಂಬಲ ವ್ಯಕ್ತವಾಗಿದೆ .ದಿನಕರ ಶೆಟ್ಟಿ ಅವರ ಪರವಾಗಿ ಮತಯಾಚನೆಗೆ ಶ್ರೀಕಲಾ ಶಾಸ್ತ್ರಿ ಮತ್ತು ಸುಬ್ರಹ್ಮಣ್ಯ ಶಾಸ್ತ್ರಿ ದಂಪತಿಗಳು ತಮ್ಮನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದಾರೆ. ಹನ್ನೆರಡು ಸಭೆಗಳನ್ನು ನಡೆಸಿ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಅವರ ಪರವಾಗಿ ಹಾಗೂ ಬಿಜೆಪಿ ಆಡಳಿತದ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಕುರಿತಾಗಿ ಜನತೆಗೆ ಅರಿವು ಮೂಡಿಸುವ ಕಾರ್ಯವನ್ನು ಕೈಗೊಂಡರು .

ಚುನಾವಣಾ ದಿನಾಂಕ ಸಮೀಪಿಸುತ್ತಿದ್ದು ಎಲ್ಲ ಪಕ್ಷಗಳ ಕಾರ್ಯ ಚಟುವಟಿಕೆ ಚುರುಕುಗೊಂಡಿದೆ .ಅದೇ ರೀತಿಯಲ್ಲಿ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರ ಪ್ರಚಾರ ಕಾರ್ಯವೂ ಭರದಿಂದ ಸಾಗಿದೆ .