Home Local ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿಯವರಿಗೆ ಮಾತೃ ವಿಯೋಗ

ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿಯವರಿಗೆ ಮಾತೃ ವಿಯೋಗ

SHARE

ಕಸಾಪ ಜಿಲ್ಲಾಧ್ಯಕ್ಷ ಸಾಹಿತ್ಯದ ಹಣತೆ ಹಚ್ಚಿದ ಕಥೆಗಾರ ಅರವಿಂದ ಕರ್ಕಿಕೋಡಿಯವರ ತಾಯಿ ಮಹಾಲಕ್ಷ್ಮೀ ನಾಗೇಶ ನಾಯಕ ಅವರು ಇಂದು ಮಂಗಳವಾರ ಮಧ್ಯಾಹ್ನ 1.30 ರ ಸುಮಾರಿಗೆ ತಮ್ಮ ಸ್ವಗೃಹ ಕುಮಟಾದಲ್ಲಿ ಕೊನೆಉಸಿರೆಳೆದರು.
ಕರ್ಕಿಕೋಡಿಯವರ ತಾಯಿಗೆ ಎಂಬತ್ತು ವರ್ಷ ವಯಸ್ಸಾಗಿದ್ದು, ಕಳೆದೆರಡು ವರ್ಷದಿಂದ ಅನಾರೋಗ್ಯದಿಂದ ಸಾಕಷ್ಟು ಬಳಲಿದ್ದರು.

ಮಗನ ಎಲ್ಲಾ ಸಾಹಿತ್ಯ ಕಾರ್ಯದಲ್ಲಿ ಪ್ರಥಮ ಓದುಗರಾಗಿದ್ದ ವಿಮರ್ಶಕರಾಗಿದ್ದ ಮಹಾಲಕ್ಷ್ಮೀ ನಾಯಕ ಇಂದು ಪತಿ ನಾಗೇಶ ನಾಯಕ, ಮಕ್ಕಳಾದ ದಯಾನಂದ ನಾಯಕ, ಅರವಿಂದ ಕರ್ಕಿಕೋಡಿ ಮಗಳು ಅನ್ನಪೂರ್ಣ ನಾಯಕ, ಸೊಸೆಯಂದಿರು, ಅಳಿಯ ಮೊಮ್ಮಕ್ಕಳು ಮತ್ತು ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ. ಇಂದು ಅವರ ಮೂಲ ಮನೆ ಕರ್ಕಿಕೋಡಿಯಲ್ಲಿ ನಡೆದ ಅಂತ್ಯ ಸಂಸ್ಕಾರದ ವೇಳೆ ಸೇರಿದ್ದ ಜನಸಾಗರ ಅವರ ಪ್ರೀತಿ ವಾತ್ಸಲ್ಯಕ್ಕೆ ಸಾಕ್ಷಿಯಾಗಿತ್ತು.