Home Health ಸುಮಧುರ ಧ್ವನಿ ನಿಮ್ಮದಾಗಬೇಕೆ? ಇಲ್ಲಿವೆ ಟಿಪ್ಸ್ !

ಸುಮಧುರ ಧ್ವನಿ ನಿಮ್ಮದಾಗಬೇಕೆ? ಇಲ್ಲಿವೆ ಟಿಪ್ಸ್ !

SHARE

ಕೊಚ್ಚಿ: ಮಾನವನ ಧ್ವನಿ ವಿಕಸನದಲ್ಲೇ ಅತಿ ಹೆಚ್ಚು ಮೌಲ್ಯಯುತ ಉಡುಗೊರೆಯಾಗಿದೆ, ಇದು ನಮ್ಮ ಅರಿವಿಗೆ ಬಂದರೂ, ಬರದಿದ್ದರೂ, ಕೆಲವು ವೇಳೆ ನಮ್ಮ ಧ್ವನಿಯ ಗುಣಮಟ್ಟದಿಂದ ನಮ್ಮ ಬಗ್ಗೆ ಜಡ್ಜ್ ಮಾಡಲು ಸಾಧ್ಯವಾಗುತ್ತದೆ.

ಹಲವು ಬಾರಿ ಅವನು/ಅವಳು ಮಾತನಾಡುವುದನ್ನು ನಾವು ಕೇಳಿಸಿಕೊಳ್ಳುತ್ತೇವೆ, ಅವರ ಧ್ವನಿಯಿಂದಲೇ ಕೆಲವರು ತಮ್ಮ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿಸಿಕೊಳ್ಳುತ್ತಾರೆ, ಇದರ ಸರಳ ಸತ್ಯವೆಂದರೇ ಅವರು ಏನು ಮಾತನಾಡಿದರು ಎಂಬುದಕ್ಕಿಂತ ಹೇಗೆ ಮಾತನಾಡಿದರು ಎಂಬುದರ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ,

ಕೆಲವರ ವೃತ್ತಿ ಜೀವನಕ್ಕೆ ಧ್ವನಿ ಅತಿ ಪ್ರಾಮುಖ್ಯವಾಗಿರುತ್ತದೆ, ಗಾಯಕರು, ರೇಡಿಯೋ ಜಾಕಿಗಳು, ಶಿಕ್ಷಕರು, ಉಪನ್ಯಾಸಕರು, ವಕೀಲರು, ಧಾರ್ಮಿಕ ಮುಖಂಡರು, ರಾಜಕಾರಣಿಗಳು, ತರಬೇತುದಾರರಿಗೆ ಧ್ವನಿ ಪ್ರಮುಖವಾಗಿದೆ, ಅವರ ಧ್ವನಿಯಿಂದಲೇ ಅವರ ಗುರುತಿಸಿಕೊಳ್ಳುವಿಕೆ ಸಾಧ್ಯವಾಗುತ್ತದೆ.

ಉತ್ತಮ ಗುಣಮಟ್ಟದ ಧ್ವನಿ, ನಮ್ಮ ಉಸಿರಾಟ ಮತ್ತು ಬಾಯಿಯ ಮೂಲಕ ನಿರ್ಧರಿತವಾಗುತ್ತದೆ. ಸಮತೋಲನವಾದ ಧ್ವನಿ ನಮ್ಮದಾಗಲು ಭಾಷೆಯ ಚಿಕಿತ್ಸಕರಿಂದ ಸಾಧ್ಯಾವಾಗುತ್ತದೆ. ಗುಣಮಟ್ಟದ ಧ್ವನಿ ನಿಮ್ಮದಾಗಲು ಕೆಲವೊಂದು ಟಿಪ್ಸ್ ಅನುಸರಿಸಿ.ಮೊದಲು ನಿಮ್ಮ ಧ್ವನಿ ತುಂಬಾ ಕಠಿಣವಾಗಿಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ, ನಿಮ್ಮ ಧ್ವನಿ ಹೈ ಪಿಚ್ ನಲ್ಲಿ ಹಾಡಲು ಸಹಾಯ ಮಾಡುತ್ತಿಲ್ಲವೇ, ಗಂಟಲು ಒಣಗಿದಂತೆ ಆಗುತ್ತಿದೆಯೇ ಎಂಬದನ್ನು ಪರೀಕ್ಷಿಸಿಕೊಳ್ಳಿ.

ಮೊದಲಿಗೆ ಪ್ರತಿನಿತ್ಯ 7 ರಿಂದ 9 ಲೋಟ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ, ಇದರಿಂದ ಧ್ವನಿ ಪೆಟ್ಟಿಗೆ ಮೃದುವಾಗಿ ಧ್ವನಿ ಮಧುರವಾಗುತ್ತದೆ.

ಮಾತನಾಡುವ ವೇಳೆ ಧ್ವನಿಯಲ್ಲಿ ಆರ್ದ್ರತೆ ಕಾಪಾಡಿಕೊಳ್ಳಿ, ಒಣಗಿದ ಪರಿಸರ ನಮ್ಮ ಧ್ವನಿ ಪೆಟ್ಟಿಗೆಯನ್ನು ಮತ್ತಷ್ಟು ಒಣಗಿಸುತ್ತದೆ.
ತುಂಬಾ ಜನ ಸೇರಿರುವ ಕಡೆ ಮಾತನಾಡಲು ಮೈಕ್ ಬಳಸಿ, ಉತ್ತಮ ಭಾಷಾ ಚಿಕಿತ್ಸಕರ ಬಳಿ ಟ್ರೀಟ್ ಮೆಂಟ್ ಪಡೆಯಿರಿ, ಉತ್ತಮವಾಗಿ ಉಸಿರಾಟವಾಡುವ ತಂತ್ರಗಳನ್ನು ಅನುಸರಿಸಿ, ಸುಮಾರು 45 ನಿಮಿಷಗಳ ಕಾಲ ಸತತವಾಗಿ ಮಾತನಾಡುತ್ತೀರಿ ಎಂದಾದರೇ ಮದ್ಯದಲ್ಲಿ ಐದು ನಿಮಿಷಗಳ ವಿಶ್ರಾಂತಿ ಪಡೆಯಿರಿ.

ಇವುಗಳನ್ನು ಮಾಡಬೇಡಿ

ಕೆಮ್ಮು ಇದ್ದಾಗ ಹೆಚ್ಚು ಮಾತನಾಡಬೇಡಿ, ಬಾಯಿಯ ಮೂಲಕ ಉಸಿರಾಟ ನಡೆಸಬಾರದು, ಧೂಮಪಾನ ಉತ್ತಮ ಧ್ವನಿಗೆ ಮಾರಕ, ಹೆಚ್ಚಿನ ಮಟ್ಟದಲ್ಲಿ ಖಾರ ತಿನಿಸುಗಳನ್ನು ತಿನ್ನುವುದರಿಂದ. ಹೊಟ್ಟೆಯಲ್ಲಿ ಸಮಸ್ಯೆಯಾಗಿ ಗಂಟಲಿಗೂ ಕಿರಿಕಿರಿ ಉಂಟು ಮಾಡುತ್ತದೆ.
ಸರಿಯಾದ ತರಬೇತಿಯಿಲ್ಲದೇ ಧೀರ್ಘ ಸಮಯ ಮಾತನಾಡುವುದು ಸರಿಯಲ್ಲ, ಮೌತ್ ವಾಶ್ ಬಳಸುವುದರಿಂದ ಗಂಟಲು ಒಣಗಿ ಧ್ವನಿ ಹಾಳಾಗುತ್ತದೆ.

ಕೂಗುವುದು ಕಿರುಚಾಡುವುದನ್ನು ನಿಲ್ಲಿಸಿ, ಹೆಚ್ಚು ಮಾತನಾಡುವಾಗ ಕಡಿಮೆ ದ್ವನಿಯಲ್ಲಿ ಮಾತನಾಡಿ,
ಕೂಗುವುದು ಕಿರುಚಾಡುವುದನ್ನು ಬಿಟ್ಟು ಪಿಸುದನಿಯಲ್ಲಿ ಮಾತನಾಡಿ, ಯಾರದಾದರೂ ಗಮನ ಸೆಳೆಯಬೇಕೇಂದು ಬಂದಾಗ, ಸಣ್ಣದಾಗಿ ಆಕರ್ಷಣೀಯವಾಗಿ ಮಾತನಾಡಿ ಎಂದು ಪಳಾರಿವಟ್ಟಾಂ ನ ಹೆಸ್ಟೀಯಾ ಆಸ್ಪತ್ರೆ ಭಾಷಾ ಥೆರಪಿಸ್ಟ್ ಸಿಯಾನಾ ಮರಿಯಾ ಪೌಲ್ ತಿಳಿಸಿದ್ದಾರೆ.