Home Local ಉಡುಪಿಯಲ್ಲಿ ಮೋದಿಯವರನ್ನು ಭೇಟಿಯಾದ ದಿನಕರ ಶೆಟ್ಟಿ: ಕುಮಟಾಕ್ಕೆ ಮೋದಿಯವರನ್ನು ಕರೆತರಲು ನಡೆದಿದೆ ಪ್ರಯತ್ನ!

ಉಡುಪಿಯಲ್ಲಿ ಮೋದಿಯವರನ್ನು ಭೇಟಿಯಾದ ದಿನಕರ ಶೆಟ್ಟಿ: ಕುಮಟಾಕ್ಕೆ ಮೋದಿಯವರನ್ನು ಕರೆತರಲು ನಡೆದಿದೆ ಪ್ರಯತ್ನ!

SHARE

ಉಡುಪಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದ ಪಡೆಯುವ ಸುವರ್ಣ ಅವಕಾಶ ದಿನಕರ ಶೆಟ್ಟಿಯವರಿಗೆ ದೊರೆಯಿತು.

ಈ ಸಂಧರ್ಭದಲ್ಲಿ ಕುಮಟಾಕೆ ಆಗಮಿಸುವಂತೆ ಮೋದಿಯವರಲ್ಲಿ ದಿನಕರ ಶೆಟ್ಟಿ ಯವರು ವಿನಂತಿಸಿದರು ಎನ್ನಲಾಗಿದೆ.

ಮೇ ೯ ಅಥವಾ ೧೦ ರಂದು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮವು ನಿಗದಿ ಆಗುವ ಸಾಧ್ಯತೆ ಇದ್ದು ಈ ಬಗ್ಗೆ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಓಂಪ್ರಕಾಶ್ ಮಾಥುರ್ ಅವರು ವಿಶೇಷ ಆಸಕ್ತಿ ವಹಿಸಿದ್ದು ಈ ಮೂಲಕ ಭಟ್ಕಳ, ಕುಮಟಾ ಹಾಗೂ ಕಾರವಾರ ಸೇರಿದಂತೆ ಉಳಿದಕ್ಷೇತ್ರಗಳಲ್ಲೂ ಪಕ್ಷ ಸುಲಭವಾಗಿ ಜಯಗಳಿಸಬಹುದು ಎಂಬುದು ಬಿಜೆಪಿ ಲೆಕ್ಕಾಚಾರವಾಗಿ.

ಈಗಾಗಲೇ ಮೋದಿಯವರು ಕುಮಟಾ ಆಗಮಿಸಲಿದ್ದಾರೆ ಎಂಬ ಸುದ್ದಿ ಅವರ ಅಭಿಮಾನಿಗಳಲ್ಲಿ ಮಿಂಚಿನ ಸಂಚಾರ ಉಂಟುಮಾಡಿದ್ದು ಮುಂದಿನ ದಿನಗಳಲ್ಲಿ ಕರಾವಳಿಯ ರಾಜಕೀಯ ರಂಗೇರುತ್ತಿದೆ‌