Home Local ಕುಮಟಾದ ಬಾಡದಲ್ಲಿ ಶಾರದಾ ಶೆಟ್ಟಿ ಪರ ಪ್ರಚಾರ ನಡೆಸಿದ ಆರ್.ವಿ ದೇಶಪಾಂಡೆ.

ಕುಮಟಾದ ಬಾಡದಲ್ಲಿ ಶಾರದಾ ಶೆಟ್ಟಿ ಪರ ಪ್ರಚಾರ ನಡೆಸಿದ ಆರ್.ವಿ ದೇಶಪಾಂಡೆ.

SHARE

ಕುಮಟಾ: ತಾಲೂಕಿನ ಬಾಡದಲ್ಲಿ ಶ್ರೀ ಆರ್. ವಿ. ದೇಶಪಾಂಡೆಯವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ಶಾಸಕಿ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರ ಪರವಾಗಿ ಮತಯಾಚನೆ ಮಾಡಿದರು.

ಅತ್ಯುತ್ತಮ ಸದೃಢ ಸರಕಾರಕ್ಕಾಗಿ ಕಾಂಗ್ರೆಸ್ ಆರಿಸಿ, ಶಾರದಾ ಶೆಟ್ಟಿಯವರ ಜನಪರ ಕಾಳಜಿ ಹಾಗೂ ಅವರ ಈ ವರೆಗಿನ ಕಾರ್ಯಗಳನ್ನು ಅನೇಕ ಜನರು ನೋಡಿದ್ದೀರಿ ಈ ವರ್ಷ ಅವರನ್ನು ಆಯ್ಕೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ರತ್ನಾಕರ ನಾಯ್ಕ, ತಾಲೂಕು ಪಂಚಾಯತ್ ಸದಸ್ಯರುಗಳಾದ ಶ್ರೀ ಜಗ್ಗು ನಾಯ್ಕ, ಶ್ರೀಮತಿ ಯಶೋದಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ಎಲ್.ನಾಯ್ಕ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ತಾರಾ ಗೌಡ, ಸುರೇಖಾ ವಾರೀಕರ ಮುಂತಾದವರು ಹಾಜರಿದ್ದರು.