Home Local ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರ ಪರ ಪ್ರಚಾರಕ್ಕಿಳಿದ ಕಮಲಾಕರ ಮೇಸ್ತ: ಹಳದೀಪುರದಲ್ಲಿ ಮತ ಯಾಚನೆ

ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರ ಪರ ಪ್ರಚಾರಕ್ಕಿಳಿದ ಕಮಲಾಕರ ಮೇಸ್ತ: ಹಳದೀಪುರದಲ್ಲಿ ಮತ ಯಾಚನೆ

SHARE

ಹೊನ್ನಾವರ: ತಾಲೂಕಿನ ಹಳದಿಪುರ ಶಕ್ತಿ ಕೇಂದ್ರದ ಕೆರೆಗದ್ದೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ದಿನಕರ ಶೆಟ್ಟಿ ಅವರು ಬಿಜೆಪಿ ಪಕ್ಷಕ್ಕೆ ಮತ ನೀಡುವಂತೆ ಇಂದು ಹಳದಿಪುರ ಶಕ್ತಿ ಕೇಂದ್ರದ ಕೆರೆಗದ್ದೆಯಲ್ಲಿ ಜನತೆಗೆ ವಿನಂತಿ ಮಾಡಿದರು. ಈ ಸಂದರ್ಭದಲ್ಲಿ ಅವರು ಮೋದಿಯವರ ಸಾಧನೆಯ ಕುರಿತು ಮಾಹಿತಿ ನೀಡಿದರು.

ಪರೇಶ್ ಮೇಸ್ತಾ ಅವರ ತಂದೆ ಕಮಲಾಕರ ಮೇಸ್ತಾ ಹಾಗೂ ತಾಯಿ ರುಕ್ಮಾಬಾಯಿ ಇದೇ ಸಂದರ್ಭದಲ್ಲಿ ಹಾಜರಿದ್ದರು.

ಪರೇಶ್ ಮೇಸ್ತಾ ಅವರ ತಂದೆ ಮಾತನಾಡಿ ಕಾಂಗ್ರೆಸ್ ಸರ್ಕಾರ ನನ್ನ ಮಗನನ್ನು ಕೊಂದು ಕೌಯ೯ ಮೆರೆದಿದೆ.. ಕೇವಲ ಅಲ್ಪಸಂಖ್ಯಾತ ಸಮುದಾಯವನ್ನು ಓಲೈಸುವ ಕಾರಣಕ್ಕೆ ಹಿಂದೂಗಳ ಮಾರಣ ಹೋಮ ನಡೆಸುತ್ತಿದೆ. ಇಂದು ನನ್ನ ಮಗ ನನ್ನ ಬಳಿ ಇಲ್ಲಾ ಎಂದು ಬಾವುಕರಾದರು.

ಮತ್ತೆ ಮಾತು ಮುಂದುವರಿಸಿದ ಪರೇಶ್ ಮೇಸ್ತಾ ತಂದೆ ಹಿಂದೂಗಳ ರಕ್ಷಣೆ ಮಾಡುವದಿದ್ದರೆ ಅದು ಬಿಜೆಪಿ ಪಕ್ಷ ಮಾತ್ರ… ಮೋದಿಯವರು ನಿಣ೯ಯ ಮಾಡಿದ ಅಭ್ಯರ್ಥಿ ದಿನಕರ ಶೆಟ್ಟಿ ಹಾಗಾಗಿ ನಾವೆಲ್ಲ ದಿನಕರ್ ಶೆಟ್ಟಿಯವರನ್ನು ಈ ಬಾರಿ ಗೆಲ್ಲಿಸಿ ಕಾಂಗ್ರೆಸ್ ಪಕ್ಷಕ್ಕೆ ಸೋಲಿನ ರುಚಿ ಕಾಣಿಸಬೇಕು ಎಂದರು. ಅಲ್ಲದೆ ಹಿಂದೂ ಧರ್ಮದ ಹೆಸರಿನಲ್ಲಿ ಡೋಂಗಿ ರಾಜಕೀಯ ಮಾಡುವವರಿಗೆ ಮತ ಹಾಕಿ ನಿಮ್ಮ ಮತ ಹಾಳು ಮಾಡಿಕೊಳ್ಳಬೇಡಿ. ನಮಗೆ ಪಕ್ಷ ಮುಖ್ಯ ವ್ಯಕ್ತಿ ಅಲ್ಲಾ ಎಂದು ಕಮಲಾಕರ ಮೇಸ್ತಾ ನುಡಿದರು.

ನಿಮ್ಮ ಮನೆ ಮಗ ಪರೇಶ ಮೇಸ್ತಾ ಎಂದು ತಿಳಿದು ಈ ಬಾರಿ ಬಿಜೆಪಿ ದಿನಕರ್ ಶೆಟ್ಟಿ ಯವರಿಗೆ ಮತ ಹಾಕಿ. ಮತ ಹಾಕುವಾಗ ಅವಸರ ಮಾಡದೆ ಬಿಜೆಪಿಯ ಕಮಲದ ಗುರುತಿಗೆ ಮತ ಹಾಕಿ ಎಂದು ಕೈ ಮುಗಿದು ಮಾತುಮುಗಿಸಿದರು.

ಈ ಸಂದರ್ಭದಲ್ಲಿ ರತ್ನಾಕರ ವಿ ನಾಯ್ಕ, ಉಜ್ವಲ ನಾಯ್ಕ, ಶಿವಾನಂದ ನಾಯ್ಕ, ಗಣಪತಿ ನಾಯ್ಕ, ರಾಮಕೃಷ್ಣ ನಾಯ್ಕ, ಸುರೇಶ್ ನಾಯ್ಕ, ಗಣೇಶ ಪೈ, ಅಶೋಕ ನಾಯ್ಕ ಹಾಗೂ ಹಲವಾರು ಬಿಜೆಪಿ ಬೆಂಬಲಿಗರು ಹಾಜರಿದ್ದರು.