Home Local ಶಿರಸಿಯ ಜೆಡಿಎಸ್ ಚುನಾವಣಾ ಕಛೇರಿ ಉದ್ಘಾಟನೆ ಹಾಗೂ ಶಿರಸಿ ನಗರ ಪ್ರಣಾಳಿಕೆ ಬಿಡುಗಡೆ

ಶಿರಸಿಯ ಜೆಡಿಎಸ್ ಚುನಾವಣಾ ಕಛೇರಿ ಉದ್ಘಾಟನೆ ಹಾಗೂ ಶಿರಸಿ ನಗರ ಪ್ರಣಾಳಿಕೆ ಬಿಡುಗಡೆ

SHARE

ಶಿರಸಿಯ ಅಶೋಕ ನಗರದಲ್ಲಿ ಜಾತ್ಯತೀತ ಜನತಾದಳದ ಚುನಾವಣಾ ಕಛೇರಿಯನ್ನು ಉದ್ಘಾಟಿಸಿ ಶಿರಸಿ ನಗರಕ್ಕೆ ವಿಶೇಷ ಚುನಾವಣಾ ಪ್ರಣಾಳಿಕೆಯನ್ನು ಶಿರಸಿ ಸಿದ್ದಾಪುರದ ಅಭ್ಯರ್ಥಿ ಶಶಿಭೂಷಣ ಹೆಗಡೆಯವರು ಬಹುಜನ್ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷರ ಸಮಕ್ಷಮದಲ್ಲಿ ಬಿಡುಗಡೆಗೊಳಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಅವರು ಜನತಾದಳ ಕ್ಕೆ ಸಿಗುತ್ತಿರುವ ಬೆಂಬಲಕ್ಕೆ ಸಂತಸ ವ್ಯಕ್ತಪಡಿಸುತ್ತಾ, ಕಾರ್ಯಕರ್ತರಿಗೆ ಪ್ರಣಾಳಿಕೆಯನ್ನು ನಗರದ ಜನತೆಗೆ ಮನವರಿಕೆ ಮಾಡಿಕೊಟ್ಟು ನಮ್ಮ ಪಕ್ಷಕ್ಕೆ ‌ಮತ ಚಲಾಯಿಸುವಂತೆ ಮಾಡುವ ಗುರುತರವಾದ ಜವಬ್ದಾರಿ ಇದೆ ಎಂದರು, ಶಿರಸಿ ನಗರವನ್ನು ಅಭಿವೃದ್ಧಿ ಪಡಿಸಲು ನಮ್ಮ ಪಕ್ಷವು ಅತ್ಯಂತ ಪ್ರಾಮಾಣಿಕವಾಗಿ ಅಧಿಕಾರ ನಡೆಸಲಿದೆ ಎಂದರು, ಕುಮಾರಸ್ವಾಮಿ ಯವರ ಆಡಳಿತ ವೈಖರಿ ಸರ್ವಜನರಿಗೆ ಮೆಚ್ಚುಗೆಗೆ ಪಾತ್ರವಾಗಿದ್ದು, ಮತ್ತೊಮ್ಮೆ ಕುಮಾರಸ್ವಾಮಿ ಅವರನ್ನು ಈ ರಾಜ್ಯದ ಮುಖ್ಯಮಂತ್ರಿಯನ್ನಾಗಿ ನೋಡಲು ಜನತೆ ಬಯಸುತ್ತಾ ಇದ್ದಾರೆ, ಪಕ್ಷ ಯಾವತ್ತು ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತು ಕೊಟ್ಟು ಕಾರ್ಯಕರ್ತರ ಕೈಗೆ ಅಧಿಕಾರ ಸಿಗುವಂತೆ ಮಾಡುವ ಪಕ್ಷವಾಗಿದ್ದು, ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುವಂತೆ ಕರೆ ನೀಡಿದರು.

ಈ ಸಂಧರ್ಭದಲ್ಲಿ ಬಿ,ಎಸ್,ಪಿ, ಜಿಲ್ಲಾಧ್ಯಕ್ಷರಾದ ಸುಧಾಕಯ ಜೋಗಳೆಕರ, ಜಾತ್ಯತೀತ ಜನತಾದಳದ ನಗರ ಘಟಕ ಅಧ್ಯಕ್ಷರಾದ ಸುಭಾಷ್ ಮಂಡುರ, ಕಾರ್ಯದರ್ಶಿ ಮೋಹನ್ ಆಚಾರಿ, ರಾಜ್ಯ ಕಾರ್ಯದರ್ಶಿ ಸಯ್ಯದ್ ‌ಮುಜಿಬ್, ವಾಮನ ಮಾಡಿಗೆರೆ, ನಾರಾಯಣ ನಾಯ್ಕ, ಸಚಿನ್‌ ಶೆಟ್ಟಿ, ಜಗದೀಶ್ ಸಾಗರ್, ಶ್ರೀರಂಗ ಮಹಾಲಿಂಗಣ್ಣನವರ,ರಾಘು ಬೈಲಪ್ಪ, ರೇವತಿ, ಮಂಜುಳಾ ಪಟಗಾರ, ನಿಖಿಲ್ ಶೆಟ್ಟಿ, ಸಮರ್ಥ ಗುಡಿಗಾರ, ಮುಂತಾದವರು ಇದ್ದರು.