Home Local ಶಾರದಾ ಶೆಟ್ಟಿಯವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ಮರಾಠಿ ಸಮಾಜದ ಪ್ರಮುಖರು.

ಶಾರದಾ ಶೆಟ್ಟಿಯವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ಮರಾಠಿ ಸಮಾಜದ ಪ್ರಮುಖರು.

SHARE

ಹೊನ್ನಾವರ: ಚುನಾವಣಾ ಕಣ ರಂಗೇರುತ್ತಿರುವಂತೆಯೇ ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ಕಾಂಗ್ರೆಸ್ ಸೇರ್ಪಡೆ ಕಾರ್ಯವೂ ನಡೆಯುತ್ತಿದೆ.

ಸಾಲ್ಕೋಡ ಪಂಚಾಯತ್ ವ್ಯಾಪ್ತಿಯ ಪ್ರಬಲ ಬಿಜೆಪಿ ಮುಖಂಡರು ಮತ್ತು ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಜಿ ಎಸ್ ಹೆಗಡೆ ನೇತೃತ್ವದಲ್ಲಿ ಹಲವಾರು ಕಾರ್ಯಕರ್ತರು ಹಾಗೂ ತೊಳ್ಸಾಣಿ ಭಾಗದ ಮರಾಠಿ ಸಮಾಜದ ಪ್ರಮುಖರು ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಜನಾನುರಾಗಿ ಹಾಗೂ ಉತ್ತಮ ಆಡಳಿತ ನೀಡಿದ ಕಾಂಗ್ರೆಸ್ ಸರಕಾರದ ಕಾರ್ಯಗಳನ್ನು ಮೆಚ್ಚಿ ನಾವು ಪಕ್ಷ ಸೇರ್ಪಡೆ ನಡೆದಿದೆ ಎಂದು ಕಾರ್ಯಕರ್ತರು ಅಭಿಪ್ರಾಯಪಟ್ಟರು.