Home Local ಜೆಡಿಎಸ್ ನ ಪ್ರದೀಪ ನಾಯಕರವರಿಂದ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ: ನಡೆಯುತ್ತಿದೆ ಮತ ಬೇಟೆ.

ಜೆಡಿಎಸ್ ನ ಪ್ರದೀಪ ನಾಯಕರವರಿಂದ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ: ನಡೆಯುತ್ತಿದೆ ಮತ ಬೇಟೆ.

SHARE

ಕುಮಟಾ: ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮಿಂಚಿನ ಸಂಚಲನ ನಡೆಸುತ್ತಿದೆ.

ಬರ್ಗಿ ಮತ್ತು ವಾಲಗಳ್ಳಿ ಯಲ್ಲಿ ನಡೆದ ಎರಡು ಪ್ರತ್ಯೇಕ ಪ್ರಚಾರಕಾರ್ಯದಲ್ಲಿ ಕುಮಟಾ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರದೀಪ್ ನಾಯಕ್ ದೇವರಬಾವಿ ಅವರು ಮತ ಯಾಚಿಸಿದರು.

ಮುಂಬರುವ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪಕ್ಷ ಹೇಗೆ ಕೆಲಸ ಮಾಡಲಿದೆ, ಮತ್ತು ಪಕ್ಷದ ಜನಪರ ಯೋಜನೆಯನ್ನು ವಿವರಿಸಿ, ಜನರ ಕುಂದು ಕೊರತೆಗಳನ್ನು ವಿಚಾರಿಸಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.

ಜೆಡಿಎಸ್ ಬೆಂಬಲಿಸಿ ಅಭಿವೃದ್ಧಿಯ ಪಥದಲ್ಲಿ ಸಾಗೋಣ ಎಂದು ಕರೆನೀಡಿದ ಅವರು ಬಹುಮತದಿಂದ ತನ್ನನ್ನು ಆರಿಸುವಂತೆ ಜನರಲ್ಲಿ ವಿನಂತಿ ಮಾಡಿದರು.