Home Local ಕುಮಟಾದ ಹಲವೆಡೆ ಶಾರದಾ ಶೆಟ್ಟಿಯವರಿಂದ ಬಿರುಸಿನ‌ ಪ್ರಚಾರ ಕಾರ್ಯ

ಕುಮಟಾದ ಹಲವೆಡೆ ಶಾರದಾ ಶೆಟ್ಟಿಯವರಿಂದ ಬಿರುಸಿನ‌ ಪ್ರಚಾರ ಕಾರ್ಯ

SHARE

ಕುಮಟಾ: ಚುನಾವಣಾ ದಿನಾಂಕ ‌ಸಮೀಪಿಸುತ್ತಿರುವಂತೆ ಭರದ ಪ್ರಚಾರ ಕೈಗೊಂಡಿರುವ ಕುಮಟಾ ಹೊನ್ನಾವರ ಕಾಂಗ್ರೆಸ್ ಅಭ್ಯರ್ಥಿ ಶಾರದಾ ಮೋಹನ ಶೆಟ್ಟಿ ಇಂದು ಹಲವೆಡೆ ಬಿರುಸಿನ ಪ್ರಚಾರ ನಡೆಸಿದರು.

ಇಂದಿನ ಪ್ರಚಾರ ಕಾರ್ಯ

ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಕಡ್ಲೆ ಅಂಬಿಗರಕೇರಿಯಲ್ಲಿ ಬಿರುಸಿನ ಪ್ರಚಾರಗೈದು ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಗೋವಿಂದ ಅಂಬಿಗ, ರತ್ನಾಕರ ನಾಯ್ಕ ಹಾಗೂ ರಾಘವೇಂದ್ರ ಪಟಗಾರ ಉಪಸ್ಥಿತರಿದ್ದರು.

ಅದೇ ರೀತಿ ಕುಮಟಾದ ಹಳ್ಕಾರದಲ್ಲಿ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರಿಂದ ಬಿರುಸಿನ ಪ್ರಚಾರ ನಡೆಯಿತು.ಈ ಸಂಧರ್ಭದಲ್ಲಿ ಸಂತೋಷ ಕರ್ಕಡ, ಅನಿಲ ಮಡಿವಾಳ, ರಾಘು ಗುನಗಾ, ಸುಶೀಲಾ ಹರಿಕಂತ್ರ, ಗಣೇಶ ಮಡಿವಾಳ, ಉದಯ ಮುಕ್ರಿ, ರಾಘವೇಂದ್ರ ಪಟಗಾರ, ಅಧ್ಯಕ್ಷ ಜಗನ್ನಾಥ ನಾಯ್ಕ,ಮುಂತಾದವರು ಭಾಗವಹಿಸಿದರು.