Home Local ಸೂರಜ್ ನಾಯ್ಕ ಸೋನಿ ಪರ ಕಾರ್ಯಕರ್ತರ ಪ್ರಚಾರ: ಈ ಬಾರಿಯ ಚುನಾವಣಾ ಗೆಲುವಿಗಾಗಿ ನಡೆದಿದೆ ಪ್ರಯತ್ನ

ಸೂರಜ್ ನಾಯ್ಕ ಸೋನಿ ಪರ ಕಾರ್ಯಕರ್ತರ ಪ್ರಚಾರ: ಈ ಬಾರಿಯ ಚುನಾವಣಾ ಗೆಲುವಿಗಾಗಿ ನಡೆದಿದೆ ಪ್ರಯತ್ನ

SHARE

ಕುಮಟಾ: ಕುಮಟಾ ಹೊನ್ನಾವರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸೂರಜ್ ನಾಯ್ಕ ಸೋನಿಯವರು ಇಂದು ಅಬ್ಬರದ ಪ್ರಚಾರ ಕಾರ್ಯದಲ್ಲಿ ತೊಡಗಿದರು.

ಯುವ ಪಡೆಯೊಂದಿಗೆ ತಮ್ಮ ಕ್ಚೇತ್ರದಲ್ಲಿ ಪ್ರಚಾರ ಕಾರ್ಯ ನಡೆಸುತ್ತಿರುವ ಸೂರಜ್ ‌ನಾಯ್ಕ ಸೋನಿಯವರಿಗೆ ಜನತೆ ಉತ್ತಮ‌ ಸ್ಪಂದನೆ‌ ನೀಡುತ್ತಿದ್ದಾರೆ.

ಇಂದು ಹಳದೀಪುರ,ಕರ್ಕಿ,ರಾಮೇಶ್ವರ ಕಂಬಿ ಭಾಗದಲ್ಲಿ ಸೂರಜ್ ನಾಯ್ಕ ಸೋನಿಯವರ ಕುರಿತಾಗಿ ಭರದ ಪ್ರಚಾರ ನಡೆಸಲಾಯಿತು. ಕಾರ್ಯಕರ್ತರು ತಂಡ ತಂಡಗಳಲ್ಲಿ ತೆರಳಿ ಚುನಾವಣಾ ಪ್ರಚಾರ ಕಾರ್ಯ ನಡೆಸಿದರು.

ಈ ಬಾರಿ ಶತಾಯ ಗತಾಯ ಪ್ರಯತ್ನ‌ಮಾಡಿ ಸೂರಜ್ ನಾಯ್ಕ ಅವರನ್ನು ಗೆಲ್ಲಿಸಲೇ ಬೇಕೆಂದು ಕಾರ್ಯಕರ್ತರು ಶ್ರಮ ವಹಿಸಿದ್ದಾರೆ.

ಸೂರಜ್ ನಾಯ್ಕ ಸೋನಿಯವರು ಹಿಂದುತ್ವಕ್ಕೆ ಹಾಗೂ ಗೋ ರಕ್ಷಣೆಯ ಕುರಿತಾಗಿ ಹೋರಾಟ ಮಾಡಿದ್ದು ಅವರನ್ನು ನಾವು ಬೆಂಬಲಿಸುವುದಾಗಿ ಅನೇಕ ಕಾರ್ಯಕರ್ತರು ತಿಳಿಸಿದ್ದಾರೆ ಎನ್ನಲಾಗಿದೆ.