Home Local ರಾತ್ರಿಯಾದರೂ ಪ್ರಚಾರ ಸಭೆಗೆ ಕಿಕ್ಕಿರಿದು ಸೇರುತ್ತಿರುವ ಜನ ಹೆಚ್ಚುತ್ತಿದೆ ಬಿಜೆಪಿಗರಲ್ಲಿ ಹುಮ್ಮಸ್ಸು

ರಾತ್ರಿಯಾದರೂ ಪ್ರಚಾರ ಸಭೆಗೆ ಕಿಕ್ಕಿರಿದು ಸೇರುತ್ತಿರುವ ಜನ ಹೆಚ್ಚುತ್ತಿದೆ ಬಿಜೆಪಿಗರಲ್ಲಿ ಹುಮ್ಮಸ್ಸು

SHARE

ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಚಾರ ಭರಾಟೆ ಹೆಚ್ಚುತ್ತಿದ್ದು .ಈ ಬಾರಿ ಕುಮಟಾದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರ ಪ್ರಚಾರ ಸಭೆಗೆ ಮಹಿಳೆಯರು ಯುವಕರು ಸೇರಿದಂತೆ ಮತದಾರರ ಉತ್ತಮ ಸ್ಪಂದನ ಉಂಟಾಗುತ್ತಿದ್ದು ಬಿಜೆಪಿ ಕಾರ್ಯಕರ್ತರಲ್ಲಿ ಗೆಲುವಿನ ಭರವಸೆ ಹೆಚ್ಚಿಸಿದ್ದು ಹುಮ್ಮಸ್ಸಿನಿಂದ ಪ್ರಚಾರ ಕೈಗೊಂಡಿದ್ದಾರೆ.

ಹೆಚ್ಚಿನ ಟಿಕೇಟ್ ಆಕಾಂಕ್ಷಿಗಳಿದ್ದು ಕೈ ತಪ್ಪಿದವರು ಅತೃಪ್ತರಾಗಿ ಪ್ರಚಾರದಿಂದ ದೂರ ಇರಬಹುದು ಎಂಬ ಲೆಕ್ಕಾಚಾರ ತಲೆಕೆಳಗಾಗಿದ್ದು ಡಾ,ಜಿಜಿಹೆಗಡೆ,ನಾಗರಾಜ ನಾಯಕ, ವೆಂಕಟರಮಣ ಹೆಗಡೆ, ಸುಬ್ರಾಯ ವಾಳ್ಕೆ ,ಎಂಜಿ ಭಟ್ಟ,ಸುಧಾಗೌಡ ,ಕೆ ಜಿ ಭಟ್, ಕುಮಾರ ಮಾರ್ಕಂಡೆ, ಶ್ರೀಕಲಾ ಶಾಸ್ತ್ರಿ, ಮೊದಲಾದವರು ದಿನಕರ ಶೆಟ್ಟಿ ಅವರ ಪ್ರಚಾರದಲ್ಲಿ ತೊಡಗಿರುವುದರಿಂದ ಮತದಾರರೂ ಕೂಡ ಈ ಬಾರಿ ಬಿಜೆಪಿ ಗೆಲುವಿನ ಭರವಸೆ ಹೊಂದಿ ಬೆಂಬಲನೀಡುತ್ತಿರುವ ಸನ್ನಿವೇಶ ಕ್ಷೇತ್ರದಲ್ಲಿ ಕಂಡುಬರುತ್ತಿದೆ.