Home Local ಸಿದ್ದಾಪುರದಲ್ಲಿ ಬೆಂಕಿ ಅವಘಡ: ವಿದ್ಯುತ್ ತಂತಿ ತಗುಲಿ ಕರಕಲಾಯ್ತು ಹುಲ್ಲು

ಸಿದ್ದಾಪುರದಲ್ಲಿ ಬೆಂಕಿ ಅವಘಡ: ವಿದ್ಯುತ್ ತಂತಿ ತಗುಲಿ ಕರಕಲಾಯ್ತು ಹುಲ್ಲು

SHARE

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಹೊನ್ನೆಹದ್ದದಲ್ಲಿ ಬಿಳೆ ಹುಲ್ಲು ತುಂಬಿಕೊಂಡು ಹೋಗುತ್ತಿದ್ದ ಮಹೇಂದ್ರಾ ಪಿಕ್‍ಅಫ್ ವಾಹನಕ್ಕೆ ಜೋತಾಡುತ್ತಿದ್ದ ವಿದ್ಯುತ್ ತಂತಿ ತಗುಲಿ ಹುಲ್ಲು ಸಂಪೂರ್ಣ ಸುಟ್ಟು ಹೋಗಿದ್ದು ವಾಹನಕ್ಕೆ ಭಾಗಶಃ ಹಾನಿ ಸಂಭವಿಸಿದೆ.

ಲಕ್ಷ್ಮೀಚಂದ್ರಶೇಖರ ನಾಯ್ಕ ಅರಶೀನಗೋಡ ಎನ್ನುವವರಿಗೆ ಸೇರಿದ ವಾಹನ ಇದಾಗಿದೆ. ಸ್ಥಳೀಯರ ಮುಂಜಾಗೃತೆಯಿಂದಾಗಿ ಆಗಬಹುದಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಬಸವನ ಗೌಡ, ಹೆಸ್ಕಾಂ ಅಧಿಕಾರಿ ಪರಮೇಶ್ವರ ಎನ್.ಮಡಿವಾಳ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಅಂದಾಜು 38ಸಾವಿರ ರೂಗಳಷ್ಟು ಹಾನಿ ಸಂಭವಿಸಿದೆ ಎಂದು ಪಂಚನಾಮೆ ಮಾಡಿದ್ದಾರೆ.