Home Local ಪೂ ಶ್ರೀ ಶ್ರೀ ವಾಸುದೇವಾನಂದ ಬ್ರಹ್ಮಾನಂದ ಭೂತಿ ಮಹಾಸ್ವಾಮೀಜಿಯವರಿಗೆ ಗೋಕರ್ಣ ಗೌರವ

ಪೂ ಶ್ರೀ ಶ್ರೀ ವಾಸುದೇವಾನಂದ ಬ್ರಹ್ಮಾನಂದ ಭೂತಿ ಮಹಾಸ್ವಾಮೀಜಿಯವರಿಗೆ ಗೋಕರ್ಣ ಗೌರವ

SHARE

ಗೋಕರ್ಣ: ಪ ಪೂ ಶ್ರೀ ಶ್ರೀ ವಾಸುದೇವಾನಂದ ಬ್ರಹ್ಮಾನಂದ ಭೂತಿ ಮಹಾಸ್ವಾಮೀಜಿ , ತೆಕ್ಕೆ ಮಧಮ್ , ಕೇರಳ ಪ ಪೂ ಶ್ರೀ ಶ್ರೀ ಈರಯ್ಯ ಸ್ವಾಮೀಜಿ , ಚನ್ನಗಿರಿ ಯೋಗಾಶ್ರಮ, ಬಾಗಲಕೋಟ
ಪ ಪೂ ಶ್ರೀ ಶ್ರೀ ವಿಜಯಾನಂದ ಸ್ವಾಮೀಜಿ , ಶ್ರೀ ಗುರುಲಿಂಗ ದೇವರ ಮಠ, ಬಳ್ಳಾರಿ
ಈ ಮೂವರು ಪೂಜ್ಯ ಸ್ವಾಮೀಜಿಗಳು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 482ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

ಹುಬ್ಬಳ್ಳಿಯ ಉದ್ಯಮಿ ಶ್ರೀ ಬಿ ಎಂ ದೊಡ್ಮನಿ ಇವರು ಶ್ರೀ ದೇವಾಲಯದ ಪರವಾಗಿ ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಮತ್ತು ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ ರಾಮಚಂದ್ರ ಜಂಭೆ ಪೂಜಾ ಕೈಂಕರ್ಯ ನೆರವೇರಿಸಿದರು .