Home Local ಕಾಗೇರಿಯ ಪರ ಪ್ರಚಾರಕ್ಕೆ ಬಂದ ರಾಕಿಂಗ್​​​ ಸ್ಟಾರ್​​ ಯಶ್​​! ಶಿರಸಿಯ ಜನತೆ ಫುಲ್ ಫಿದ್ದಾ..

ಕಾಗೇರಿಯ ಪರ ಪ್ರಚಾರಕ್ಕೆ ಬಂದ ರಾಕಿಂಗ್​​​ ಸ್ಟಾರ್​​ ಯಶ್​​! ಶಿರಸಿಯ ಜನತೆ ಫುಲ್ ಫಿದ್ದಾ..

SHARE

ಉತ್ತರಕನ್ನಡ: ರಾಕಿಂಗ್​​​ ಸ್ಟಾರ್​​ ಯಶ್​​ ಇಂದು ಸಿದ್ದಾಪುರದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ರೋಡ್ ಶೋ ನಡೆಸಿ ಮತಯಾಚಿಸಿದರು. ಚಂದ್ರಘಟಗಿ ಪಟಾಂಗಣದಿಂದ ಆರಂಭವಾದ ರೋಡ್​​ ಶೋ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಿಮ್ಮಪ್ಪ ನಾಯಕ ವೃತ್ತದಲ್ಲಿ ಮುಕ್ತಾಯವಾಗಿದೆ.

ರೋಡ್​​ ಶೋ ಮುಕ್ತಾಯ ಮಾಡಿ ಮಾತನಾಡಿದ ಯಶ್​​, ರಾಮಚಾರಿ ಚಿತ್ರದ ಡೈಲಾಗ್​​​​ ಹೇಳಿ ಅಭಿಮಾನಿಗಳನ್ನ ಹುರಿದುಂಬಿಸಿದರಂತೆ. ಸಮಾಜ, ರಾಜಕಾರಣಿಗಳು ಹಾಗೂ ನಾವು ಸೇರಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಅದಕ್ಕೆ ನಿಮ್ಮೂರೇ ನನಗೆ ಸ್ಫೂರ್ತಿ. ಇಲ್ಲಿಯ ಶಿವಾನಂದ ಕಳವೆ ಅವರ ಕೆಲಸಗಳು ನನಗೆ ಸ್ಫೂರ್ತಿ ಕೊಟ್ಟಿದೆ ಎಂದರು.

ಶಿಲೆ ನಮ್ಮೂರಲ್ಲೇ ಇದ್ದರೂ ನಮಗೆ ಕಾಣುವುದಿಲ್ಲ. ಅದೇ ರೀತಿ ಕಾಗೇರಿ ಅವರ ವ್ಯಕ್ತಿತ್ವ. ಆದ್ದರಿಂದ ಕಾಗೇರಿಯವರಿಗೆ ಮತನೀಡಿ ಗೆಲ್ಲಿಸಿ ಕಳುಹಿಸಿ. ಕಾಗೇರಿ ಅವರ ಮುಖಾಂತರ ನಾನು ಇಲ್ಲಿಗೆ ಬಂದು ಮುಂದಿನ ದಿನಗಳಲ್ಲಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಇಲ್ಲಿಯ ಜನಗಳಿಗೋಸ್ಕರ ನಾನು ಬಂದೆ. ನಾನು ಉತ್ತಮ ಅಭ್ಯರ್ಥಿಗಳ ಪರ ಮಾತ್ರ ಪ್ರಚಾರ ಮಾಡುತ್ತಿದ್ದೇನೆ.ಅದರಲ್ಲಿ ಕಾಗೇರಿಯವರು ಒಬ್ಬರು. ನಿಮ್ಮೂರಿನ ಈ ಉತ್ತಮ ಶಿಲೆಯನ್ನ ಮತ್ತೊಮ್ಮೆ ಆರಿಸಿ ಕಳುಹಿಸಿ ಎಂದು ಮನವಿ ಮಾಡಿದರು. ಯಶ್ ಜೊತೆ ರೋಡ್ ಶೋ ನಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಬಿಜೆಪಿ ಪ್ರಮುಖ ನಾಯಕರು, ಯಶ್​​ ಅಭಿಮಾನಿಗಳು, ಬಿಜೆಪಿ ಕಾರ್ಯರ್ತರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.