Home Local ತೆನೆ ಹೊತ್ತ ಮಹಿಳೆಯ ಹೆಸರೂ ಕೂಡಾ ಕಮಲ ಹಾಗಾಗಿ ‘ಕಮಲ’ಕ್ಕೆ‌ ನಿಮ್ಮ ಮತ ನೀಡಿ :...

ತೆನೆ ಹೊತ್ತ ಮಹಿಳೆಯ ಹೆಸರೂ ಕೂಡಾ ಕಮಲ ಹಾಗಾಗಿ ‘ಕಮಲ’ಕ್ಕೆ‌ ನಿಮ್ಮ ಮತ ನೀಡಿ : ದಿನಕರ ಶೆಟ್ಟಿ ಪರ ಪ್ರಚಾರದಲ್ಲಿ ಸುಬ್ರಾಯ ವಾಳ್ಕೆ ಪಂಚ್.

SHARE

ಹೊನ್ನಾವರ: ಹೊನ್ನಾವರದ ಸಾಲೆಹಿತ್ತಲನಲ್ಲಿ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಪ್ರಚಾರ ಮಾಡಿದರು.

ಈ ಸಂದರ್ಭದಲ್ಲಿ ವಿ.ಆರ್ ಪೈ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಹೊನ್ನಾವರ ತಾಲ್ಲೂಕಿನಲ್ಲಿ ಕೆಲವು ರೈಲುಗಳು ನಿಲ್ಲದೆ ಜನರಿಗೆ ತೊಂದರೆ ಆಗುತ್ತಿರುವದನ್ನು ಮನಗಂಡು ದಿನಕರ ಶೆಟ್ಟಿ ಅವರು ಕುದ್ದಾಗಿ ರೈಲ್ವೆ ಅಧಿಕಾರಿಗಳ ಜೊತೆ ಮಾತನಾಡಿ ರೈಲು ನಿಲ್ಲಲು ಅವಕಾಶ ಕಲ್ಪಿಸಿದ್ದಾರೆ ಹಾಗೂ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದರು.

ಸುಬ್ರಾಯ ವಾಳ್ಕೆ ಅವರು ದಿನಕರ ಶೆಟ್ಟಿ ಅವರನ್ನು ಈ ಬಾರಿ ಗೆಲ್ಲಿಸಿ ಎಂದು ಹೇಳುತ್ತಾ ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ತೆನೆ ಹೊತ್ತ ಮಹಿಳೆಯ ಹೆಸರು ಕೂಡಾ ಕಮಲ ಅಂತೆ ಅದಕ್ಕೆ ಕಮಲದ ಚಿನ್ನೆಯನ್ನ ಗುರುತಿಸಿ ಮತ ನೀಡಿ ಎಂದು ಕರೆ ಕೊಟ್ಟರು. ಸುಬ್ರಾಯ ವಾಳ್ಕೆ ಅವರು ಮಾತು ಮುಂದುವರಿಸುತ್ತಾ ನಾನು ಕಳೆದ ಹಲವಾರು ವರ್ಷಗಳಿಂದ ಸಮಾಜ ಸೇವೆ ಮಾಡುತ್ತಾ ಬಂದಿದ್ದೇನೆ ನಾನು ಯಾವುದೇ ಪಲಾಪೇಕ್ಷೆ ಇಲ್ಲದೆ ಜನಪರವಾದ ಕಾಳಜಿಯಿಂದ ಕೆಲಸ ಮಾಡಿದ್ದೇನೆ ಹಾಗಾಗಿ ಕುಮಟಾ ಹೊನ್ನಾವರ ತಾಲ್ಲೂಕಿನ ನನ್ನ ಬೆಂಬಲಿಗರಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೆನೆ ಈ ಬಾರಿ ದಿನಕರ ಶೆಟ್ಟಿ ಯವರನ್ನ ಗೆಲ್ಲಿಸಿ ಹಾಗೂ ಸಿದ್ದರಾಮಯ್ಯನ ಅಹಂಕಾರದ ಸರ್ಕಾರಕ್ಕೆ ಈ ಬಾರಿ ಸೊಲಿಸುವ ಮೂಲಕ ಕಾಂಗ್ರೆಸ್‌ ಬುದ್ಧಿ ಕಲಿಸಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡರು. ಮೋದಿಯವರ ಅಭಿವೃದ್ಧಿ ಕೆಲಸಗಳನ್ನೂ ಹಾಗೂ ಬಿಜೆಪಿಯ ಸರ್ಕಾರದ ಹಲವಾರು ಜನಪರವಾದ ಯೋಜನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ದಿನಕರ ಶೆಟ್ಟಿ ಅವರು ಮಾತನಾಡುತ್ತಾ. ಕೆಲವರು ದಿನಕರ ಶೆಟ್ಟಿ ಅವರ ಚಿನ್ನೆ ತೆನೆಹೋತ್ತ ಮಹಿಳೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ನಾನು ಈಗ ಬಿಜೆಪಿ ಪಕ್ಷಕ್ಕೆ ಬಂದಿದ್ದೆನೆ ಹಾಗಾಗಿ ಯಾರು ಈ ರೀತಿಯ ಸುಳ್ಳು ಸುದ್ದಿಗಳನ್ನು ನಂಬದಿರಿ ನನ್ನ ಪಕ್ಷದ ಅಧಿಕೃತ ಚಿನ್ನೆ ಕಮಲದ ಹೂ ಹಾಗಾಗಿ ಈ ಕಮಲದ ಹೂವಿಗೆ ಮತ ನೀಡಿ ಎಂದರು.

ಚಂದಾವರದಲ್ಲಿ ಆದ ಘಟನೆಯಲ್ಲಿ ನಾನು ಮೊದಲು ಹೋಗಿ ಅಲ್ಲಿ ನಮ್ಮ ಹುಡುಗರನ್ನು ಹೊಡೆಯುವಾಗ ನಾನೆ ಎದುರು ನಿಂತು ಯಾಕೆ ನಮ್ಮ ಹುಡಗರಿಗೆ ಹೋಡಿತ್ತಿರಾ ಎಂದು ನಾನೆ ಕೇಳಿ ಅವರಿಗೆ ಹೊಡೆಯದಂತೆ ತಡೆದಿದ್ದೆನೆ. ಆಗ ಅಲ್ಲಿ ಅಪ್ಪಟ ಹಿಂದು ಕಾರ್ಯಕರ್ತರಾದ ವಿಶ್ವನಾಥ ನಾಯ್ಕ, ಪ್ರಶಾಂತ ನಾಯ್ಕ, ನವೀನ್ ನಾಯ್ಕ ಹಾಗೂ ಹಲವಾರು ಜನ ಇದ್ದರು ನಾನು ಮಾತನಾಡಿರುವ ಬಗ್ಗೆ ಪೇಸ್ಬುಕ್, ವಾಟ್ಸಾಪ್ ಗಳಲ್ಲಿ ಬಂದಿದೆ. ನಾನು ಕೂಡಾ ಹಿಂದೂ ಪರವಾಗಿ ಇದ್ದೇನೆ ಎಂದು ಒಮ್ಮೆ ನೋಡಿ.

ಕಾಂಗ್ರೆಸ್ ಸರ್ಕಾರ ಕಿತ್ತು ಹಾಕಿ ಬಿಜೆಪಿ ಸರ್ಕಾರ ತನ್ನಿ ಎಂದರು. ಕುಮಟಾ ಹೊನ್ನಾವರ ದಲ್ಲಿ ಬಿಜೆಪಿ ಅಧಿಕಾರಕ್ಕೆ ತನ್ನಿ ಹಾಗೂ ಶರಾವತಿ ನದಿಯ ನೀರನ್ನು ಬಳಸಿ ಹೊನ್ನಾವರ ತಾಲೂಕಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಯೋಜನೆ ರೂಪಿಸುತ್ತೇವೆ ಎಂದರು. ನನ್ನ ಪರವಾಗಿ ಪ್ರತಿಯೊಬ್ಬರು ಹತ್ತು ಜನರಿಗೆ ಹೇಳಿ ಬಿಜೆಪಿ ಪಕ್ಷಕ್ಕೆ ಮತ ನೀಡುವಂತೆ ಒತ್ತಾಯಿಸಿ ಮನವೊಲಿಸಿ ಎಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ರಾಜೇಶ ಸಾಲೇಹಿತ್ತಲ, ಸುರೇಶ ಶೆಟ್, ಎಸ್.ಎಮ್. ನಾಯ್ಕ, ಸಧಾನಂಧ ಭಟ್, ಗುರುರಾಜ ಶೇಟ್, ವಿಜು ಕಾಮತ್, ರಾಘವ ಬಾಳೇರಿ, ಹಾಗೂ ಹಲವಾರು ಬಿಜೆಪಿ ಬೇಂಬಲಿಗರು ಹಾಜರಿದ್ದರು.