Home Local ಹೊನ್ನಾವರದಲ್ಲಿ ಬ್ಲಾಕ್ ಕಾಂಗ್ರೆಸ್ ಸಭೆ: ಚುನಾವಣೆ ಕುರಿತಾಗಿ ಕಾರ್ಯತಂತ್ರ ರಚನೆ

ಹೊನ್ನಾವರದಲ್ಲಿ ಬ್ಲಾಕ್ ಕಾಂಗ್ರೆಸ್ ಸಭೆ: ಚುನಾವಣೆ ಕುರಿತಾಗಿ ಕಾರ್ಯತಂತ್ರ ರಚನೆ

SHARE

ಹೊನ್ನಾವರ:ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್.ತೆಂಗೇರಿಯವರ ನೇತ್ರತ್ವದಲ್ಲಿ ಹೊನ್ನಾವರ ಪಟ್ಟಣ ಪಂಚಾಯತನ ಅಧ್ಯಕ್ಷ ಶ್ರೀಮತಿ ರಾಜಶ್ರೀ ನಾಯ್ಕ,ಉಪಾಧ್ಯಕ್ಷ ಶ್ರೀಮತಿ ಶರಾವತಿ ಮೇಸ್ತ, ಸದಸ್ಯರಾದ ರವೀಂದ್ರ ನಾಯ್ಕ,ಜೈನಾಬಿ ಶೇಖ,ಜಮೀಲಾ ಬಾಯಿ,ಸುರೇಶ ಮೇಸ್ತ, ತುಳಸಿದಾಸ ಪಾವಸ್ಕರ,ಬೂತ್ ಸಮಿತಿ ಅಧ್ಯಕ್ಷರು,ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಸಭೆಯನ್ನು ನಡೆಸಲಾಯಿತು.

ನಗರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶ್ರೀಮತಿ ಶಾರದಾ ಶೆಟ್ಟಿಯವರ ಪರ ಪ್ರಚಾರ ಸಭೆ ನಡೆಸುವ ಕುರಿತು ರೂಪುರೇಷೆ ಸಿದ್ಧಪಡಿಸಲಾಯಿತು.ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷ ಕೇಶವ ಮೇಸ್ತ,ಶ್ರೀಕಾಂತ್ ಮೇಸ್ತ,ಆಗ್ನೇಲ್ ಡಯಾಸ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.