Home Article ಕಳೆದುಹೋದ ಎಳೆಯ ದಿನಗಳು (ಭಾಗ ೧೧)

ಕಳೆದುಹೋದ ಎಳೆಯ ದಿನಗಳು (ಭಾಗ ೧೧)

SHARE

ತಿಗಣೇಶ ಮಾಗೋಡ

ಬನ್ನಿ ..ಬಾಲ್ಯದತ್ತ ಪಯಣಿಸೋಣ..ತಿಗಣೇಶ..ನಿಮ್ಮನ್ನು ಮನತುಂಬಿ ಕರೆವೆ..

…ಆಗ ಬರೆವದೆಲ್ಲನಪಾಟಿಯ ಮೇಲೇ..ನಾಲ್ಕನೆತ್ತಿಯಲ್ಲಿ..ಶಾಯಿಪೆನ್ನು ಬಂತು..ನೀಲೀ ಶಾಯಿ..ಒಂದು ಅಶೋಕ ಬ್ಲೇಡು..ಕಿಸೆಯಲ್ಲಿ ಇರುತ್ತಿತ್ತು..ನಿಬ್ಬಿನ ಸಿಗಿದ ಭಾಗಕ್ಕೆ ಹಾಕಿ ಎಳೆಯುತಿದ್ದೆವು.
ಆಗ ಅಚ್ಚು ಹತ್ತುತ್ತಿತ್ತು..ಬಹುತೇಕ ಎಲ್ಲರ ಅಂಗಿತುದಿ..ಹಲ್ಲು ..ತೊಡಿ.ಎಲ್ಲವೂ..ನೀಲಿಯೇ..ನಮಗೆ ಮಾಸ್ತರ್ರು ಕೊಡುವ ಶಿಕ್ಷೆ..ಮಜವಾಗಿರುತ್ತಿತ್ತು..ಉಟಾಬಸ್ಸು..ನೂರುಗಟ್ಳೆ ತೆಗೆದವರು..ಬೇಂಚಿನ ಮೇಲೆ ನಿಲ್ಲಿಸುತ್ತಿದ್ದರು..ಬಗ್ಗಿ ನಿಲ್ಲಿಸುತ್ತಿದ್ದರು..ನುಕ್ಕಿ ಬರ್ಲು..ಕಿರುಪರೀಕ್ಷೆ..ಅರ್ಧವಾರ್ಷಿಕ..ಒಂಬತ್ತು ತಿಂಗಳ ಪರೀಕ್ಷೆ..ವಾರ್ಷಿಕ..ನಾಲ್ಕು ಪರೀಕ್ಷೆಗಳು..ತೋಂಡಿ ಪರೀಕ್ಷೆ ಇತ್ತು..ಎಲ್ಲದರಲ್ಲೂ ನಾವೇ ಮುಂದು..ನಾಲ್ಕನೆತ್ತಿ ಮಕ್ಕಳಿಗೆ ಹೊಡೆಯುತ್ತಿರಲಿಲ್ಲ..ಯಾಕೆಂದರೆ ಅವರು ದೊಡ್ಡ ಮಕ್ಕಳು..ಅದೇ ಕೊನೆವರ್ಷ ಆದವರೂ ಇದ್ದಾರೆ..ಅಲ್ಲಿಗೆ ಹಾಡಿ ಶಾಲೆ ಶಿಕ್ಷಣ ಮುಗೀತಿತ್ತು.

ನಾವು ಬೀಳ್ಕೋಡು ಸಮಾರಂಭ ಕಂಡವರಲ್ಲ..
ನಾನು ಇದ್ದ ಮಕ್ಕಳಲ್ಲಿ ಪಟಿಂಗ.
ಊಟ..ತಿಂಡಿ..ಆಟ ಎಲ್ಲದರಲ್ಲೂ..ನಂಬ್ರ ಮಾಡುತ್ತಿದ್ದೆ..ಅದಕ್ಕೆ ಆಯಿ ನನ್ನನ್ನು ಸುರಕಟ್ಟೆ ಶಾಲೆಗೆ ಹಾಕಿದರು.ಅಜ್ಜನ ಮನೆಲಿ ಉಳಕಂಡೆ.ಅಲ್ಲಿ ನನ್ನ ದೊಡ್ಡಮ್ಮನ ಮಗ ಸದಾನಂದಣ್ಣಯ್ಯನೂ..ಶಾಲೆಗೆ ಹೋಗಲು ಇದ್ದ.ನನ್ನ ದೊಡ್ಡಮಾವ..ಮಂಜನಾಥ ಮಾವ..ಪ್ರೇಮಚಿಕ್ಕಿ..ತಾರಚಿಕ್ಕಿ ..ಕುಟ್ಣಮಾವ..ಅಜ್ಜ..ಅಮ್ಮ..ಇದ್ದರು..ಕಣ್ಣಿಮನೆ ನನ್ನ ಅಜ್ಜನಮನೆ..ಕೆಲವರ ಹೆಸರು ಹೇಳುವೆ..ನನ್ನ ಜೊತೆ ಐದನೆತ್ತಿಲಿ ಕಲಿತವರದ್ದು..ದೇವರಣ್ಣನ ಮಗ ಮಾಣಿ..ಗುಂಡಬಟ್ರ ಮನೆ ಗಪ್ಪತಿ..(ಯಕ್ಷಗಾನದಲ್ಲಿ ಮಿಂಚಿ ಮರೆಯಾದ ಕಣ್ಣಿ ಬಟ್ಟ. ಗಪ್ಪತಿ) ಗುಡ್ಗೆಮನೆ ಭಾರತಿ..(ಕುಳ್ಳಿ) ಮೀಸೆಮನೆ ಗೀತಾ.ಪರಮೆಗಡೆಮನೆ..ಶಾಂತಿ.ಪಟೇಲರಮನೆ ಶೀಯಣ್ಣನ ಮಗ ಗಾಜು..ನಗರೆಗಡೆಮನೆ ಗಂಗಾಧರ..ಇವರೆಲ್ಲ ನನ್ನ ಕ್ಲಾಸ ಮೇಟ್ಸ..ಸುರಕಟ್ಟೆ ಶಾಲೆಯಲ್ಲಿ ಕಳ್ಳ ಮಕ್ಕಳು ಜಾಸ್ತಿ ಇದ್ದರು..ಒಂದಕ್ಕೆ ಬಿಟ್ಟಾಗ..ಪೆನ್ನು ಪಟ್ಟಿ..ಕಳುತ್ತಿದ್ದರು..ದಿನಾ ನನ್ನ ಪೆನ್ನು ಮಾಯ..ಒಂದಿನ ದೊಡ್ಡಮಾವ ಬಂದು ಕರ್ಕಿಮಾಸ್ತರಿಗೆ ಜೋರ ಮಾಡಿ ಹೋದ..ಮರುದಿನವೇ ನನ್ನ ಕಳೆದುಹೋದ ಸುಮಾರು ಮೂವತ್ತು ಪೆನ್ನು ಹತ್ತನ್ನೆರಡು ಪಟ್ಟಿ..ಶಾಲೆ ಹಿಂದಿನ ಕಿಡಕಿ ಹಿಂದೆ ಬಂದು ಬಿದ್ದವು..ಪೆನ್ನಿಗೆ ನಿಬ್ಬಿರಲಿಲ್ಲ..ಪಟ್ಟಿಯಲ್ಲಿ ಹಾಳಿರಲಿಲ್ಲ.ನಾನು ಗಾಜು ಪರಮ ದೋಸ್ತರು.ಗಪ್ಪತಿ..ಮಾಣಿ..ಇವರೂ ನನ್ನ ದೋಸ್ತರೇ..ನಾವು ಮಾಡದ ಭಾನಗಡಿಗಳೇ ಇಲ್ಲ.ಹತ್ತದ ಸುರಿಗೆ ಮರಗಳಿಲ್ಲ.

ಕುರಡಂಕನ ಮರಹತ್ತಿ ಕಣ್ಣು ಬೀಗಿಸಿಕೊಂಡವರು..ಅಜ್ಜನ ಮನೆಲಿ ಇದ್ದದ್ದು ಒಂದೇ ವರ್ಷವಾದರೂ..ಎಲ್ಲ ನೆನಪಿಡುವ ಭಾನಗಡಿಗಳೇ..ಬೆಳಕುಬಿಡುವವರೆಗೆ..ಗೊಟಾರಿ ಹಿಡದು..ಮಾವಿನಮರದಕೆಳಗೆ.ಆರ್ಮೆಯಲ್ಲಿದ್ದ..ಜೀರಗೆವಾಸ್ನೆ ಮರ.ಕೆರೆಮೇಲನ ಇಶಾಡಮರ. ವೆಂಟ್ರೊಣಶಟ್ಟಿಮನೆ ಕತ್ತದಮರ.ಹೀಗೆ ಎಲ್ಲ ಮರದಡಿಗೆ ಉರುತ್ತಿದ್ದೆವು..ಆರೇಳು ಜನ ಹಣ್ಣು ಬಿದ್ದಕೂಡಲೇ ಓಡುವವರು.ಒಂದು ಹಣ್ಣಿಗೆ ನಾಲ್ಲಾರು ಕೈಗಳು ಸಿಕ್ಕಿದವರು..ಮೊದಲು ಹಣ್ಣಿಗೆ ಎಂಜಲು ತೂಪಿ..ತಮ್ಮದು ಮಾಡಿಕೊಳ್ಳುತ್ತಿದ್ದರು.ಮಾಯ್ನಣ್ಣತಂಬಳಿ..ಹುಳಿ ಈಗಲೂ ಪ್ರೀತಿಯೇ.ಹುಳಸಂಪಗೆ ಮರ..ಮುಳ್ಳಾದರೂ..ನಮಗೆ ಕ್ಯಾರೇಇಲ್ಲ..ತೊಡೆ ಸಿಗಿದರೂ..ತಿಳಿಯುತ್ತಿರಲಿಲ್ಲ..ಮರುದಿನ ಅಮ್ಮ ಮೀಸಿಕೊಡುವಾಗ..ಬಿಸಿನೀರು ಹಾಕಿದರೂ ತಿಳಿಯಬಾರದೆಂದು ಉರಿ ತಡೆದುಕೊಳ್ಳುತ್ತಿರಲಿಲ್ಲ..ಆಗೆಲ್ಲ..ಒಂದೇ ಓರಿಯಲ್ಲಿ ಮಲಗುವುದು..ಚಿಕ್ಕಿ ಮಾವ..ದಿನಕ್ಕೊಬ್ಬರ ಮಗ್ಗುಲಲ್ಲಿ ಮಲಗಿದವರು.ಅವರು ಹೇಳುವ ಕಾಕಣ್ಣ. ಗುಬ್ಬಣ್ಣ ಕತೆ.
ಬಟ್ಟ..ಬಡ್ತಿ ದೋಸೆಕತೆ ಇವೇ ನಮ್ಮ ಮನರಂಜನೆ.ದೊಡ್ಡಮಾವ ಚಂದಮಾಮ..ಬೊಂಬೆಮನೆ ಕತೆಪುಸ್ತಕ ತರುತ್ತಿದ್ದರು..ಅಮ್ಮನಿಗೆ ದಿನಾಲೂ ಸಂಜೆ ಪ್ರೇಮಚಿಕ್ಕಿ ಒಂದು ಕತೆ ಓದಿಹೇಳಬೇಕಿತ್ತು..ನಾವೆಲ್ಲಾ ಸುತ್ತು ಕುಳಿತು ಕೇಳಿದವರು..

ಅಂದು ಕತೆಗಳು..ನಮ್ಮನ್ನು ತಿದ್ದಿದ್ದವು..ಇಂದು ಕತೆಗಳಿಲ್ಲ..ಇದ್ದರೂ ಓದುವ..ಕುಳಿತುಕೇಳುವ ಮಕ್ಕಳಿಲ್ಲ..ಪ್ರೀತಿ ಹಂಚುವ..ಚಿಕ್ಕಿ..ಮಾವ..ಅಜ್ಜಿಯರಿಲ್ಲ..ಅಂಥ ಅಜ್ಜನ ಮನೆಗಳೇ ಇಲ್ಲವಾಗಿದೆ..
ನೀವು ನಿಮ್ಮಜ್ಜನ ಮನೆ..ಮೆಲುಕುಹಾಕಿ..ಬರುವೆ..ನಮಸ್ಕಾರ..