Home Local ಸಮೀಪಿಸುತ್ತಿದೆ ಚುನಾವಣೆ,ಕಾಂಗ್ರೆಸ್ ಅಭ್ಯರ್ಥಿ ಶಾರದಾ ಮೋಹನ ಶೆಟ್ಟಿಯವರಿಂದ ಭರ್ಜರಿ ಪ್ರಚಾರ ಕಾರ್ಯ

ಸಮೀಪಿಸುತ್ತಿದೆ ಚುನಾವಣೆ,ಕಾಂಗ್ರೆಸ್ ಅಭ್ಯರ್ಥಿ ಶಾರದಾ ಮೋಹನ ಶೆಟ್ಟಿಯವರಿಂದ ಭರ್ಜರಿ ಪ್ರಚಾರ ಕಾರ್ಯ

SHARE

ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಕ್ಷೇತ್ರವ್ಯಾಪ್ತಿ ಬಿರುಸಿನ ಪ್ರಚಾರ ಕೈಗೊಂಡರು. ಪ್ರಾರಂಭದಲ್ಲಿ ವಾಲಗಳ್ಳಿ ಮತ್ತು ಕೂಜಳ್ಳಿಯಲ್ಲಿ ಪ್ರಚಾರ ಗೈದ ಶಾಸಕರು ನಂತರದಲ್ಲಿ ಕೋನಳ್ಳಿಯ ನಾಡಗನಕೇರಿಯಲ್ಲಿ ಪ್ರಚಾರ ನಡೆಸಿದರು. ಈ ನಡುವೆ ಅವರು ಕೋನಳ್ಳಿಯ ಸೋನಾರವಾಡದ ಶ್ರೀ ಮಹಾಲಸಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಅಲ್ಲಿಂದ ಮುಂದೆ ಸಾಗೀದ ಶಾಸಕರು ಕೋನಳ್ಳಿಯ ಶ್ರೀ ರಾಘವೇಂದ್ರ ಕ್ಯಾಶ್ಯೂ ಇಂಡಸ್ಟ್ರೀ ಚಂದಾವರದ ಮಾ ಗಾರ್ಮೆಂಟ್ಸ ದಲ್ಲಿ ಕಾರ್ಮಿಕರನ್ನು ಭೆಟ್ಟಿಯಾಗಿ ಅವರ ಆರೋಗ್ಯ ಕ್ಷೇಮವನ್ನು ವಿಚಾರಿಸಿ ಮತಯಾಚನೆ ಮಾಡಿದರು.ಹಾಗೆ ಮುಂದುವರೆದ ಅವರು ಚಂದಾವರದ ಸಾಗವಾನಿ ಹಿತ್ಲದಲ್ಲಿ ಪ್ರಚಾರ ನಡೆಸಿದರು.ಆ ನಂತರದಲ್ಲಿ ಅಳ್ವೇಕೋಡಿಯ ಗುಡಿಗಾರ ಜಟಕೇಶ್ವರ ದೇವಸ್ಥಾನದ ಪ್ರತಿಷ್ಟಾಪನಾ ಮಹೋತ್ಸವದಲ್ಲಿ ಭಾಗವಹಿಸಿ ಅಳ್ವೇದಂಡಿಯ ಗಾಬೀತರಕೇರಿ, ಕುಮಟಾದ ಹಂದೀಗೋಣ, ಕುಮಟಾದ ಕಡೇಕೋಡಿ, ನಾಗತೀರ್ಥದ(ಎಸ್ ಸಿ ಕೇರಿ) ಕುಮಟಾ ತಾಲೂಕಿನ ಧಾರೇಶ್ವರ ಬೀಚ್ ನಲ್ಲಿ, ಹರನೀರ, ಹೊರಭಾಗದ ಪಟಗಾರಕೇರಿ,ಹರಿಕಂತ್ರಕೇರಿ,ಹೊಳೆಗದ್ದೆ ಎಸ್ ಸಿ ಕೇರಿಯಲ್ಲಿ ಪ್ರಚಾರ ನಡೆಸಿ ಕೊನೆಯದಾಗಿ ಹೆಗಡೆಯಲ್ಲಿ ಪ್ರಚಾರವನ್ನು ಅಂತ್ಯಗೊಳಿಸಲಾಯಿತು.

ಈ ಸಂದರ್ಭದಲ್ಲಿ ಗಜು ನಾಯ್ಕ, ಸುಕ್ರು ಮುಕ್ರಿ, ಜಿ ಎಲ್ ನಾಯ್ಕ, ಜಿ ಐ ಹೆಗಡೆ, ಕಮಲಾಕರ ಗಾವಡಿ,ಚೇತನ್ ಗಾವಡಿ,ಶಂಕರ ಚೋಡನ್ಕರ್,ತಿಮ್ಮು ಮುಕ್ತಿ, ರವಿ ಅಂಬಿಗ, ದೇವರಾಯ ದುರ್ಗೇಕರ್, ಗುರು ಅಂಬಿಗ, ನವೀನ್ ನಾಯ್ಕ,ಅನಂತ ನಾಯ್ಕ, ರಾಯ ಶೆಟ್ಟಿ, ಜಟ್ಟು ಗೌಡ,ಲಕ್ಷ್ಮಣ ಗೌಡ, ನಾಗೇಶ ಮುಕ್ತಿ, ಹಾಗೂ ಗಣೇಶ ಶೇಟ್ ಉಪಸ್ಥಿತರಿದ್ದರು.