Home Local ದಿನಕರ‌ ಶೆಟ್ಟಿಯವರ ಪರ‌ ಪ್ರಚಾರ ಬಿರುಸು: ಕಮಲ ಪಾಳಯದಲ್ಲಿ ಉತ್ಸಾಹ

ದಿನಕರ‌ ಶೆಟ್ಟಿಯವರ ಪರ‌ ಪ್ರಚಾರ ಬಿರುಸು: ಕಮಲ ಪಾಳಯದಲ್ಲಿ ಉತ್ಸಾಹ

SHARE

ಕುಮಟಾ: ಇಂದು ಕೊಡ್ಕಣಿ ಯಲ್ಲಿ ನಡೆದ ದಿನಕರ ಶೆಟ್ಟಿಯವರ ಪ್ರಚಾರ ಕಾರ್ಯಕ್ರಮ ದಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ನಾಗರಾಜ ನಾಯಕ ತೊರ್ಕೇ, ಶ್ರೀ ಸುಬ್ರಾಯ ವಾಳ್ಕೆ, ಶ್ರೀ ವಿನೋದ್ ಪ್ರಭು, ಶ್ರೀ ವೆಕಂಟರಮಣ ಕವರಿ,ಶ್ರೀ ಚಿದಾನಂದ ಭಂಡಾರಿ, ಶ್ರೀ ಕುಮಾರ್ ಕವರಿ, ಪುರಸಭೆ ಮಾಜಿ ಅಧ್ಯಕ್ಷರಾದ ಶ್ರೀ ಸಂತೋಷ ನಾಯ್ಕ, ಸದಸ್ಯ ರಾದ ಶ್ರೀ ಪ್ರಶಾಂತ್ ನಾಯ್ಕ, ಶ್ರೀ ನಾಗರಾಜ ಹರಿಕಾಂತ್ ಹಾಗೂ ಶ್ರೀ ಶೇಖರ್ ಹರಿಕಾಂತ್, ನಾರಾಯಣ ಹರಿಕಾಂತ್, ಗಣೇಶ್ ಅಂಬಿಗ, ಅಣ್ಣಪ್ಪ ನಾಯ್ಕ, ಮಹಾದೇವ ಪಟಗಾರ, ಶಂಕರ ಅಂಬಿಗ, ಸುರೇಶ್ ನಾಯ್ಕ, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

ಅದೇ ರೀತಿ ಇಂದು ಹೊನ್ನಾವರ ತಾಲ್ಲೂಕಿನ ತುಳಸಿನಗರ ಶಕ್ತಿ ಕೇಂದ್ರ ದಲ್ಲಿ ಬಿಜೆಪಿಯ ಪರ ಪರೇಶ್ ಮೇಸ್ತಾ ಅವರ ತಂದೆ ಕಮಲಾಕರ ಮೇಸ್ತಾ ಪ್ರಚಾರ ಮಾಡಿದರು. ಯಾವುದೇ ಹೆತ್ತ ತಂದೆ ತಾಯಿಗೆ ಆಗಲಿ ನನ್ನ ಮಗನ ಸಾವಿನಿಂದ ಆದ ನೋವಿನ ರೀತಿಯ ನೋವು ಬಾರದಿರಲಿ. ತಂದೆ ತಾಯಿಯ ಎದುರಲ್ಲೇ ಬಾಳಿ ಬದುಕಬೇಕಾದ ಮಗನ ಕಳೆದುಕೊಂಡ ನೋವು ಒಂದೆಡೆ ಆದರೆ ಈ ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿ ಕುಮಟಾಕ್ಕೆ ಬರ್ತಾರೆ ಅಂತಾ ನನ್ನ ಮಗನನ್ನು ಮತಾಂಧರು ಚಿತ್ರಹಿಂಸೆ ನೀಡಿ ಕೊಂದರು ವಿಷಯವನ್ನು ಮುಚ್ಚಿಟ್ಟು ಸಹಜ ಸಾವು ಎಂದು ನನ್ನ ಮಗನ ಸಾವಿಗೆ ಕಾರಣರಾದವರನ್ನು ರಕ್ಷಣೆ ಮಾಡಿ ನನಗೆ ಅನ್ಯಾಯ ಮಾಡಿದ್ದಾರೆ… ನನ್ನ ಮಗನ ಸಾವು ಆದ ಹಾಗೆ ಇನ್ನಾರ ಮನೆಯಲ್ಲೂ ಆಗಬಾರದು ಎಂದರೆ ಈ ನಮ್ಮ ಹೊನ್ನಾವರದ ಜನರೆಲ್ಲಾ ನನ್ನ ಮುಖ ನೊಡಿ ಈ ಬರಿ ಬಿಜೆಪಿಗೆ ಮತ ನೀಡಿ ಎಂದರು.