Home Important ಖಾಸಗಿ ಬಸ್‌ನಲ್ಲಿ ₹2.98 ಕೋಟಿ ಹಣ ಪತ್ತೆ.

ಖಾಸಗಿ ಬಸ್‌ನಲ್ಲಿ ₹2.98 ಕೋಟಿ ಹಣ ಪತ್ತೆ.

SHARE

ತುಮಕೂರು: ಕ್ಯಾತಸಂದ್ರ ಜಾಸ್ ಟೋಲ್ ಬಳಿ ಖಾಸಗಿ ಬಸ್‌ನಲ್ಲಿ ₹2.98 ಕೋಟಿ ಹಣ ಪತ್ತೆಯಾಗಿದೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಗಜಾನನ ಹೆಸರಿನ ಖಾಸಗಿ ಬಸ್ ತಡೆದು ಪರಿಶೀಲಿಸಿದಾಗ ₹ 2.98 ಕೋಟಿ ಪತ್ತೆಯಾಗಿದೆ.

ಸೂಕ್ತ ದಾಖಲೆಗಳಿಲ್ಲದೆ ದೊಡ್ಡಮೊತ್ತದ ಹಣ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಹಣ ವಶಕ್ಕೆ ಪಡೆಯಲಾಗಿದ್ದು, ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಮುಂದಿನ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.