Home Local ಮತ್ತೆ ಅಪಘಾತಕ್ಕೀಡಾಯ್ತು ಅನಂತ್ ಕುಮಾರ್ ಹೆಗಡೆ ಕಾರು!

ಮತ್ತೆ ಅಪಘಾತಕ್ಕೀಡಾಯ್ತು ಅನಂತ್ ಕುಮಾರ್ ಹೆಗಡೆ ಕಾರು!

SHARE

ಕುಮಟಾ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರ ಕಾರು ಮತ್ತೆ ಅಪಘಾತಕ್ಕೀಡಾಗಿದೆ. ಕುಮಟಾದ ಕತಗಾಲ ಯಾಣ ಕ್ರಾಸ್ ಬಳಿ ಅವರ ಕಾರು ಅಪಘಾತಕ್ಕೀಡಾಗಿದ್ದು ಯಾವುದೇ ದೊಡ್ಡ ಪ್ರಮಾಣದ ಅವಘಡ ಸಂಭವಿಸಿಲ್ಲ.

ಸಚಿವ ಅನಂತ್ ಕುಮಾರ್ ಹೆಗಡೆ ಶಿರಸಿಯಿಂದ ಕುಮಟಾಕ್ಕೆ ತೆರಳುತ್ತಿದ್ದರು. ಈ ಸಂದರ್ಭ ಇನ್ನೋವಾ ಕಾರೊಂದು ಅನಂತ ಕುಮಾರ ಹೆಗಡೆಯವರ ಬೆಂಗಾವಲು ವಾಹನಕ್ಕೆ ಅಡ್ಡ ಬಂದಿದೆ. ಇದರಿಂದಾಗಿ ಬೆಂಗಾವಲು ವಾಹನದ ಚಾಲಕ ಒಂದೇ ಸಮನೆ ಬ್ರೇಕ್ ಹಾಕಿದ್ದಾನೆ.

ಈ ವೇಳೆ ಅನಂತಕುಮಾರ ಹೆಗಡೆಯವರ ವಾಹನ ಮುಂದೆ ಚಲಿಸುತ್ತಿದ್ದ ಅವರ ಬೆಂಗಾವಲು ವಾಹನಕ್ಕೆ ಡಿಕ್ಕಿಯಾಗಿದೆ. ಆದರೆ ಯಾವುದೇ ಗಂಭೀರ ಅವಘಡ ನಡೆದಿಲ್ಲ.

ಕೆಲವು ದಿನಗಳ ಹಿಂದೆ ಇದೇ ರೀತಿ ಅವರ ಬೆಂಗಾವಲು ವಾಹನಕ್ಕೆ ಲಾರಿಯೊಂದು ಡಿಕ್ಕಿಯಾಗಿತ್ತು. ಇದಾದ ಬೆನ್ನಿಗೆ ಅನಂತ್ ಕುಮಾರ್ ಹೆಗಡೆ ತಮ್ಮ ಮೇಲೆ ಹತ್ಯೆ ಯತ್ನ ನಡೆದಿದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಕೊನೆಗೆ ಅದು ಬಿಜೆಪಿ ನಾಯಕರ ಆಪ್ತರಿಗೆ ಸೇರಿದ ಲಾರಿ ಎಂದು ಗೊತ್ತಾಗಿತ್ತು.