Home Local ಹೊನ್ನಾವರ ಭಾಗದಲ್ಲಿ ಶಾರದಾ ಶೆಟ್ಟಿಯವರ ಪ್ರಚಾರ ಚುರುಕು: ಗೆಲುವಿಗಾಗಿ ನಡೆದಿದೆ ಮತ ಬೇಟೆ.

ಹೊನ್ನಾವರ ಭಾಗದಲ್ಲಿ ಶಾರದಾ ಶೆಟ್ಟಿಯವರ ಪ್ರಚಾರ ಚುರುಕು: ಗೆಲುವಿಗಾಗಿ ನಡೆದಿದೆ ಮತ ಬೇಟೆ.

SHARE

ಹೊನ್ನಾವರ : ತಾಲೂಕಿನ ಬಂದರು ಮತ್ತು ತಾರೀಬಾಗೀಲು ಪ್ರದೇಶದಲ್ಲಿ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಭರ್ಜರಿ ಪ್ರಚಾರ ಮಾಡಿದರು. ಚುಮಾವಣೆ ಸಮೀಪಿಸುತ್ತಿದ್ದು ಇಂದು ಹೊನ್ನಾವರದ ಭಾಗದಲ್ಲಿ‌ ಶಾರದಾ ಶೆಟ್ಟಿಯವರು ಪ್ರಚಾರ ಕಾರ್ಯ ನಡೆಸಲಿದ್ದಾರೆ.

ಪ್ರಚಾರದ ಸಮಯದಲ್ಲಿ ತಮ್ಮ ಶಾಸಕತ್ವದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ಮತಯಾಚನೆ ಮಾಡಿದರು. ಜನತೆಗೆ ಅಗತ್ಯವಿರುವ ಎಲ್ಲ ಕೆಲಸ‌ಮಾಡಿದ್ದೇನೆ. ನಿಮ್ಮ ಆಶೀರ್ವಾದ ನನ್ನ ಮೇಲೆ ಇರಬೇಕು ಎಂದರು.

ಈ ಸಂದರ್ಭದಲ್ಲಿ ಜಗದೀಪ ತೆಂಗೇರಿ, ಜೈನಾಬಿ ಶೇಖ್, ಶರಾವತಿ ಮೇಸ್ತ್,ಜಯಶ್ರೀ ಬಿ ನಾಯ್ಕ ಹಾಗೂ ಜಮೀಲಾಬಿ ಮುಂತಾದವರು ಉಪಸ್ಥಿತರಿದ್ದರು.