Home Local ಬಿಜೆಪಿ ತೊರೆದು ಜೆಡಿಎಸ್ ಗೆ ಸೇರಿದ ಹೆಗಡೆಕಟ್ಟಾ ಪಂಚಾಯತ ಸದಸ್ಯ ಗಣಪತಿ ಗೌಡ.

ಬಿಜೆಪಿ ತೊರೆದು ಜೆಡಿಎಸ್ ಗೆ ಸೇರಿದ ಹೆಗಡೆಕಟ್ಟಾ ಪಂಚಾಯತ ಸದಸ್ಯ ಗಣಪತಿ ಗೌಡ.

SHARE

ಶಿರಸಿ:ದಿನಾಂಕ 06-05-2018 ರಂದು ಹೆಗಡೆಕಟ್ಟಾ ಪಂಚಾಯತ ಸದಸ್ಯ ಗಣಪತಿ ಗೌಡ ಅವರು ಬಿಜೆಪಿಯನ್ನು ತೊರೆದು ಶಶಿಭೂಷಣ ಹೆಗಡೆಯವರ ನಾಯಕತ್ವವನ್ನು ಮೆಚ್ಚಿ , ಕುಮಾರಸ್ವಾಮಿ ಯವರನ್ನು ಮತ್ತೊಮ್ಮೆ ಕರ್ನಾಟಕದ ಮುಖ್ಯಮಂತ್ರಿ ಯನ್ನಾಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಜಾತ್ಯತೀತ ಜನತಾದಳವನ್ನು ಸೇರ್ಪಡೆ ಯಾದರು.

ಶಿರಸಿ ಸಿದ್ದಾಪುರದ ಅಭ್ಯರ್ಥಿ ಶಶಿಭೂಷಣ ಹೆಗಡೆಯವರ ಗೆಲ್ಲಿಸುವ ಹೊಣಗಾರಿಕೆ ಕಾರ್ಯಕರ್ತರದ್ದು ಎಂದರು , ಅವರನ್ನು ಈ ಸಂದರ್ಭದಲ್ಲಿ ಅರುಣ ಗೌಡ ಜಿಲ್ಲಾ ಕಾರ್ಯದರ್ಶಿ ಅವರು ಪಕ್ಷದ ಶಾಲನ್ನು ಹೊದೆಸಿ ಪಕ್ಷಕ್ಕೆ ಬರಮಾಡಿಕೊಂಡರು, ಈ ಸಂದರ್ಭದಲ್ಲಿ ಮುಖಂಡರಾದ ಕರಿಯಪ್ಪ ಗೌಡ, ಮಂಜು ಮರಾಠಿ ಹಾಗೂ ಮಂಜುನಾಥ ಗೌಡ, ಯಂಕು ಗೌಡ,ಶಿವು ಗೌಡ, ಲಕ್ಷ್ಮಣ ಮರಾಠಿ, ತಿಮ್ಮ ಗೌಡ, ಸಚ್ಚು ಗೌಡ, ಪುರಂದರ ಗೌಡ, ನಾಗರಾಜ ಗೌಡ, ವೆಂಕಟರಮಣ ಗೌಡ, ಮಹಾಬಲೇಶ್ವರ ಗೌಡ, ಮಹಾಬಲೇಶ್ವರ ಮರಾಠಿ ಅವರುಗಳು ಪಾಲ್ಗೊಂಡಿದ್ದರು,