Home Local ಕುಮಟಾದಲ್ಲಿ ಕಮಲ ಕಲರವ: ದಿನಕರ ಶೆಟ್ಟಿಯವರಿಗೆ ‘ಯೋಗಿ’ ಬಲ

ಕುಮಟಾದಲ್ಲಿ ಕಮಲ ಕಲರವ: ದಿನಕರ ಶೆಟ್ಟಿಯವರಿಗೆ ‘ಯೋಗಿ’ ಬಲ

SHARE

ಕುಮಟಾ: ಕುಮಟಾದಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರ ಚುನಾವಣಾ ಪ್ರಚಾರ ಕಾರ್ಯಕ್ರಮ ದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾಗವಹಿಸಿ ಕುಮಟಾದಲ್ಲಿ ಕಮಲ ಕಲರವಕ್ಕೆ ಕಾರಣರಾದರು.

ಗೋಕರ್ಣದ ಮಹಾಬಲೇಶ್ವರನ ಪಾವನ ಭೂಮಿಗೆ ಹಾಗೂ ಗೋಕರ್ಣ ಪರಂಪರೆಗೆ ನಮನ ಸಲ್ಲಿಸಿ ಮಾತು ಪ್ರಾರಂಭಿಸಿದ ಯೋಗಿ ಆದಿತ್ಯನಾಥರವರು ಕೇಂದ್ರ ಸರಕಾರದ ಮಟ್ಟದಲ್ಲಿ ಆಗುತ್ತಿರುವ ಅಭಿವೃದ್ಧಿ, ಕರ್ನಾಟಕದಲ್ಲಿ ಆಗುತ್ತಿಲ್ಲ , ಅದು ಕೈಗಾರಿಕೆ,ರೈತಾಪಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಆಗುತ್ತಿಲ್ಲ ಎಂದರು. ಕರ್ನಾಟಕದ ಸರಕಾರದಲ್ಲಿ ಅಧಿಕಾರದಲ್ಲಿರುವ ಸಿದ್ಧರಾಮಯ್ಯ ಕೇವಲ ದೊಡ್ಡ ದೊಡ್ಡ ಭಾಷಣ ಅಷ್ಟೇ ಮಾಡುತ್ತಿದ್ದಾರೆ ರೈತರ ಗೋಳು ಕೇಳುವವರೇ ಇಲ್ಲವಾಗಿದೆ. ರೈತರ ಆತ್ಮಹತ್ಯೆ ಯಾಕಾಗುತ್ತಿದೆ‌ ಎಂಬುದನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ.ಕಳೆದ ಒಂದು ವರ್ಷದಿಂದ ಈಚೆಗೆ ಉತ್ತರ ಪ್ರದೇಶದಲ್ಲಿ ಅಧಿಕಾರಪಡೆದ ಬಿಜೆಪಿ 86 ಲಕ್ಷ ಬಡ ರೈತರ 1ಲಕ್ಷದ ವರೆಗಿನ ಸಾಲ ಮನ್ನಾ ಮಾಡಿತು, ಉತ್ತರ ಪ್ರದೇಶದಲ್ಲಿ ಜಿಹಾದಿಗಳಿಗೆ ಅಂಕುಶ ಹಾಕಲಾಗಿದೆ, ಜಿಹಾದಿಗಳನ್ನು ತಡೆಯಲಾಗುತ್ತಿದೆ, ಭೂಗತ ಪಾತಕಿಗಳನ್ನು ಉತ್ತರ ಪ್ರದೇಶದಲ್ಲಿ ಮಟ್ಟ ಹಾಕಲಾಗಿದೆ ಎಂದರೆ ಕರ್ನಾಟಕದಲ್ಲಿ ಇವೆಲ್ಲವೂ ಯಾಕೆ ಸಾಧ್ಯವಿಲ್ಲ ಎಂದು ಸವಾಲೆಸೆದರು.

ಪರೇಶ ಮೇಸ್ತನೆಂಬ ಕಾರ್ಯಕರ್ತನ ಹತ್ಯೆಯಾದರೂ ಆ ಪ್ರಕರ್ಣವನ್ನು ಸಿ.ಬಿ.ಐ ಗೆ ಕೊಡಲೂ ಈ ಸರಕಾರಕ್ಕೆ ಪುರುಸೊತ್ತಿಲ್ಲ, ಕೇವಲ ಮತ ಬ್ಯಾಂಕ್ ಆಗಿ ಜನರನ್ನು ನೋಡುತ್ತಿರುವುದು ಕಂಡುಬರುತ್ತದೆ, ಸಮಾಜ ಘಾತಕರ ತುಷ್ಟೀಕರಣ ನೀತಿ ಸಾರಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದರು.

ಕರ್ನಾಟಕ ಹಾಗೂ ಉತ್ತರಪ್ರದೇಶದ ಸಂಬಂಧ ಬಹು ಹಿಂದಿನದು ಶ್ರೀ ರಾಮ ಹುಟ್ಟಿದ್ದು ಉತ್ತರ ಪ್ರದೇಶದಲ್ಲಿ ಹಾಗೂ ಅವನ ಸೇವಕ ಹಾಗೂ ಆತ್ಮೀಯ ಅಂಜನಿಪುತ್ರ ಹನುಮನು ದೊರೆತಿದ್ದು ಕರ್ನಾಟಕದಲ್ಲಿ ಹೀಗಾಗಿ ನಮ್ಮದು ಅವಿನಾಭಾವ ಸಂಬಂಧ ಇದೂ ರಾಮರಾಜ್ಯ ಆಗಬೇಕು ಎಂದು ಅಭಿಪ್ರಾಯಪಟ್ಟ ಅವರು. ನಮ್ಮ ಉತ್ತರ ಪ್ರದೇಶದಂತೆ ಕರ್ನಾಟಕವೂ ಆದರೆ ಭಾರತವನ್ನೇ ರಾಮ‌ರಾಜ್ಯ ಮಾಡಬಹುದು ಎಂದರು. ಗೋರಕನಾಥ ದೇವರನ್ನು ಧರ್ಮಸ್ಥಳದ ಮಂಜುನಾಥನೆಂಬರು ಕಾಳೀಯ ಕಾಲ ಭೈರವೇಶ್ವರನನ್ನು ಆದಿಚುಂಚನಗಿರಿಯಲ್ಲಿ ಕಾಣಬಹುದೆಂದು ಅವಿನಾಭಾವ ಸಂಬಂಧ ತೆರೆದಿಟ್ಟರು.

ಕೇವಲ ರಾಜಕೀಯ ದೃಷ್ಟಿಯಿಂದ ಅಖಂಡ ಭಾರತಕ್ಕೆ ಕಾಂಗ್ರೆಸ್ ಧಕ್ಕೆಯನ್ನು ಉಂಟು ಮಾಡುತ್ತಿದೆ. ಜಾತಿ,ಮತ,ಪಂಥ ಹಾಗೂ ಇತರೇ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದೆ. ಬರುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಬೇಕು, ಭಾರತೀಯ ಜನತಾ ಪಾರ್ಟಿ ಕರ್ನಾಟಕದಲ್ಲಿ ಜನತೆಯ ರಕ್ಷಣೆಯ ಜವಾಬ್ದಾರಿ ಹೊಂದಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ಬಹು ದೀರ್ಘ ಭಾರತದ ಯೋಜನೆಗಳು ದೇಶಕ್ಕೆ ಬಲ ತುಂಬುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಬಂದರೆ ಖಂಡಿತವಾಗಿ ರೈತರ ಆತ್ಮಹತ್ಯೆ ನಿಲ್ಲಲಿದೆ ಎಂದು ಸಾರಿದರು. ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಮೋದಿಜೀಯವರ ಕೇಂದ್ರದ ಯೋಜನೆಗಳನ್ನು ಉಲ್ಲೇಖಿಸಿದ ಅವರು ದೇಶದ ಅಭಿವೃದ್ಧಿ ಹಾಗೂ ಜನತೆಯ ಸುರಕ್ಷೆಯಬಗ್ಗೆ ಯೋಜನೆ‌ಗಳನ್ನು ನೀಡಲಾಗುತ್ತದೆ ಎಂದರು.

ಸಿದ್ಧರಾಮಯ್ಯ ಸರಕಾರ ಕೇಂದ್ರದ ಯೋಜನೆಗಳನ್ನು ತನ್ನದೆಂದು ಹೇಳುತ್ತಿದೆ ಎಂದು ಕಾಂಗ್ರೆಸ್ ಸರಕಾರದ ವಿರುದ್ಧವಾಗಿ ಹರಿ ಹಾಯ್ದರು.
ಯಾವುದೇ ಅಭಿವೃದ್ಧಿ ಯೋಜನೆ ಸಿದ್ಧರಾಮಯ್ಯ ಸರಕಾರದಲ್ಲಿ ಇಲ್ಲ. ಅಭಿವೃದ್ಧಿ ವಿರೋಧಿ ಸರಕಾರ ಕಾಂಗ್ರೆಸ್ ಸರಕಾರ ಎಂದ ಅವರು ,ಕೇಂದ್ರ ಹಾಗೂ ಕರ್ನಾಟಕದ ಸರಕಾರ ಎರಡೂ ಬಿಜೆಪಿಯಾದರೆ ಅಭಿವೃದ್ಧಿ ಪೂರ್ಣವಾಗಲಿದೆ ಎಂದರು.

ಡಾ. ಜಿ.ಜಿ ಹೆಗಡೆ ಪ್ರಸ್ಥಾವಿಕವಾಗಿ ಮಾತನಾಡಿದರು. ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಮಾತನಾಡಿ ನನಗೆ ಬಾಜಪಾ ಟಿಕೆಟ್ ಸಿಕ್ಕಿರುವುದು ನಮ್ಮ ಸೌಭಾಗ್ಯ, ಜನತೆ ನನಗೆ ಮತ ನೀಡಿ ಜನ ಸೇವೆಗೆ ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ ನಾಯ್ಕ ಮಾತನಾಡಿ ಹಿಂದಿನ ನೋವುಗಳನ್ನು ನೆನಪಿಸಿ ನಮ್ಮದೇ ಸರಕಾರ ಇದ್ದಿದ್ದರೆ ಆ ರೀತಿಯ ಸ್ಥಿತಿಯನ್ನು ನಿರ್ಮಾಣ ಆಗುತ್ತಿರಲಿಲ್ಲ. ನಮ್ಮದೇ ಶಾಸಕರು ಕ್ಷೇತ್ರದಲ್ಲಿ ಇದ್ದಿದ್ದರೆ ನಮಗೆ ಸ್ಥಿತಿ ಬರುತಿರಲಿಲ್ಲ ಎಂದರು. ಹಾಗಾಗಿ ಈ ಬಾರಿ ಬಿಜೆಪಿ ಬೆಂಬಲಿಸಲು ವಿನಂತಿಸಿದರು.

ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಪ್ರಮುಖ ಡಾ ಹರೇಂದ್ರ ಸಿಂಗ್ ,ಶ್ರೀಕಲಾ ಶಾಸ್ರಿ,ಕುಮಾರ ಮಾರ್ಕಂಡೆ,ಎಂ.ಜಿ ನಾಯ್ಕ,ವೆಂಕಟೇಶ ನಾಯಕ ಹಾಗೂ ಇನ್ನಿತರ ಪ್ರಮುಖರು ವೇದಿಕೆಯಲ್ಲಿ ಹಾಜರಿದ್ದರು. ಸುಧಾ ಗೌಡ ಕಾರ್ಯಕ್ರಮ ನಿರೂಪಿಸಿರು. ಕಾರ್ಯಕ್ರಮಕ್ಕೆ ಅಪಾರ ಬಿಜೆಪಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.

ವರದಿ : ಸತ್ವಾಧಾರ ನ್ಯೂಸ್
ಸಹಕಾರ: ಜಯದೇವ ಬಳಗಂಡಿ,ಕುಮಟಾ