Home Local ಶಾರದಾ ಶೆಟ್ಟಿಯವರ ಬಿರುಸಿನ‌ ಪ್ರಚಾರ: ಚುನಾವಣಾ ಕಣದಲ್ಲಿ ಗೆಲುವಿಗೆ ನಡೆದಿದೆ ಪ್ರಯತ್ನ

ಶಾರದಾ ಶೆಟ್ಟಿಯವರ ಬಿರುಸಿನ‌ ಪ್ರಚಾರ: ಚುನಾವಣಾ ಕಣದಲ್ಲಿ ಗೆಲುವಿಗೆ ನಡೆದಿದೆ ಪ್ರಯತ್ನ

SHARE

ಕುಮಟಾ: ಚುನಾವಣಾ ದಿನಾಂಕ ‌ಸಮೀಪಿಸುತ್ತಿರುವಂತೆ ಭರದ ಪ್ರಚಾರ ಕೈಗೊಂಡಿರುವ ಕುಮಟಾ ಹೊನ್ನಾವರ ಕಾಂಗ್ರೆಸ್ ಅಭ್ಯರ್ಥಿ ಶಾರದಾ ಮೋಹನ ಶೆಟ್ಟಿ ಇಂದು ಹಲವೆಡೆ ಬಿರುಸಿನ ಪ್ರಚಾರ ನಡೆಸಿದರು.

ಇಂದಿನ ಪ್ರಚಾರ ಕಾರ್ಯ

ಹಳಕಾರ ವ್ಯಾಪ್ತಿಯಲ್ಲಿ ಶಾಸಕಿ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರಿಂದ ಮತಯಾಚನೆ.. ಈ ಸಂಧರ್ಭದಲ್ಲಿ ಸ್ಥಳೀಯ ಮುಖಂಡರಾದ ಗೋವಿಂದ ಪಟಗಾರ, ವಸಂತ ಹರಿಕಂತ್ರ ಮುಂತಾದವರು ಹಾಜರಿದ್ದರು.

ಹೊಲನಗದ್ದೆ ವ್ಯಾಪ್ತಿಯ ಬಂಟುಕೇರಿಯಲ್ಲಿ ಶಾಸಕರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ವಿ ಎಲ್ ನಾಯ್ಕ, ರತ್ನಾಕರ ನಾಯ್ಕ, ಜಗ್ಗು ನಾಯ್ಕ, ರಾಘವೇಂದ್ರ ಪಟಗಾರ, ಯಶೋಧಾ ಶಾಸ್ತ್ರಿ ಮುಂತಾದವರು ಹಾಜರಿದ್ದರು.

ಕಾಗಾಲ ವ್ಯಾಪ್ತಿಯಲ್ಲಿ ಶಾಸಕರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರಿಂದ ಮತಯಾಚನೆ ನಡೆಯಿತು. ಈ ಸಂದರ್ಭದಲ್ಲಿ ವಿ ಎಲ್ ನಾಯ್ಕ, ಸುರೇಖಾ ವಾರೇಕರ,ತಾರಾ ಗೌಡ,ಮುಂತಾದವರು ಭಾಗವಹಿಸಿದರು.

ಕುಮಟಾ ತಾಲೂಕಿನ ಅಘನಾಶಿನಿ ವಿವಿಧೆಡೆ ಶಾಸಕರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಮತಯಾಚನೆ‌ ಮಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಶಶಿಕಾಂತ ನಾಯ್ಕ, ಮಾರುತಿ ಗೌಡ,ವಿ ಎಲ್ ನಾಯ್ಕ,ಸುರೇಖಾ ವಾರೇಕರ ಮುಂತಾದವರು ಹಾಜರಿದ್ದರು.