Home Local ಕುಮಟಾದಲ್ಲಿ ಸೂರಜ್ ನಾಯ್ಕ ಸೋನಿ ಪ್ರಚಾರದ ಅಬ್ಬರ: ಮೆರವಣಿಗೆಗೆ ಸಾತ್ ನೀಡಿದ ಸ್ವಾಮೀಜಿ

ಕುಮಟಾದಲ್ಲಿ ಸೂರಜ್ ನಾಯ್ಕ ಸೋನಿ ಪ್ರಚಾರದ ಅಬ್ಬರ: ಮೆರವಣಿಗೆಗೆ ಸಾತ್ ನೀಡಿದ ಸ್ವಾಮೀಜಿ

SHARE

ಕುಮಟಾ: ಕುಮಟಾ ಹೊನ್ನಾವರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸೂರಜ್ ನಾಯ್ಕ ಸೋನಿಯವರು ಇಂದು ಅಬ್ಬರದ ಪ್ರಚಾರ ಕಾರ್ಯದಲ್ಲಿ ತೊಡಗಿದರು. ಇಂದು ಕುಮಟಾದಲ್ಲಿ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿ ಮತ ಯಾಚಿಸಿದ ಸೋನಿ ತಮ್ಮ ಶಕ್ತಿ ಪ್ರದರ್ಶನ ನಡೆಸಿದರು. ಸಂಜೆಯ ಸಮಯದಲ್ಲಿ ಎಲ್ಲೆಲ್ಲೂ ಕೇಸರಿ ಶಾಲು ಹೊದ್ದ ಹಿಂದುತ್ವದ ಪ್ರತಿನಿಧಿಗಳು ಕುಮಟಾದಲ್ಲಿ ಓಡಾಡುತ್ತಿದ್ದರು. ಸುರಜ್ ನಾಯ್ಕ ಅವರ ಜೊತೆ ಹೃಶಿಕುಮಾರ ಸ್ವಾಮಿಜಿ ಕೂಡಾ ಹೆಜ್ಜೆ ಹಾಕಿದರು.

ಗೆಲುವಿಗೆ ಬಲ ತುಂಬಲು ಹೃಷಿಕುಮಾರ ಸ್ವಾಮಿಜಿ ಪ್ರಬಲ ಹಿಂದುತ್ವವಾದಿ ಹಾಗೂ ಗೋ ರಕ್ಷಕ‌ಸೂರಜ್ ನಾಯ್ಕ ಅವರನ್ನು ಬೆಂಬಲಿಸಿ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು ಎನ್ನಲಾಗಿದೆ.

ಇಷ್ಟು ವರ್ಷಗಳ‌ ಕಾಲ‌ ಹೋರಾಟ ನಡೆಸಿದ ನಮಗೆ ಹೋರಾಟವೇ ಬದುಕಾಗಿದೆ. ನನ್ನದೇ ತತ್ವ ಹಾಗೂ ಸಿದ್ಧಾಂತಗಳನ್ನು ನಾನು ರೂಢಿಸಿಕೊಂಡಿದ್ದು ದೇಶ ಸೇವೆಗಾಗಿ ನಾನು ದುಡಿಯುತ್ತಿದ್ದೇನೆ ಎಂದ ಸೂರಜ್ ನಾಯ್ಕ, ನನಗೆ ಮತದಾನ ಮಾಡುವಂತೆ ಜನತೆಗೆ ಮನವಿ ಮಾಡಿಕೊಂಡರು.

ಆಟೋ ರಿಕ್ಷಾವನ್ನು ಗೆಲುವಿನೆಡೆಗೆ ಕೊಂಡೊಯ್ಯಲು ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸುತ್ತಿದ್ದರೆ ಎನ್ನಲಾಗಿದೆ.

ಯುವ ಪಡೆಯೊಂದಿಗೆ ತಮ್ಮ ಕ್ಚೇತ್ರದಲ್ಲಿ ಪ್ರಚಾರ ಕಾರ್ಯ ನಡೆಸುತ್ತಿರುವ ಸೂರಜ್ ‌ನಾಯ್ಕ ಸೋನಿಯವರಿಗೆ ಜನತೆ ಉತ್ತಮ‌ ಸ್ಪಂದನೆ‌ ನೀಡುತ್ತಿದ್ದಾರೆ. ಆಟೋ ರಿಕ್ಷಾದಲ್ಲಿಯೇ ತೆರಳಿ ಪ್ರಚಾರ ನಡೆಸಲಾಗುತ್ತಿತ್ತು. ಇಂದು ನಡೆದ ಮೆರವಣಿಗೆ ಭರ್ಜರೀ ಬೆಂಬಲ‌ಸೂಚಿಸಿತು.

ಇಂದು ಕುಮಟಾದ ಪಟ್ಟಣ ಹಾಗೂ ಸುತ್ತಲ ಪ್ರದೇಶದ ಭಾಗದಲ್ಲಿ ಸೂರಜ್ ನಾಯ್ಕ ಸೋನಿಯವರ ಕುರಿತಾಗಿ ಭರದ ಪ್ರಚಾರ ನಡೆಸಲಾಯಿತು. ಕಾರ್ಯಕರ್ತರು ತಂಡ ತಂಡಗಳಲ್ಲಿ ತೆರಳಿ ಚುನಾವಣಾ ಪ್ರಚಾರ ಕಾರ್ಯ ನಡೆಸಿದರು.ಜೊತೆಗೆ ಬ್ರಹತ್ ಮೆರವಣಿಗೆ ಕೂಡಾ ಸೂರಜ್ ಜನ ಬೆಂಬಲಕ್ಕೆ ಸಾಕ್ಷಿಯಾಯಿತು.

ಈ ಬಾರಿ ಶತಾಯ ಗತಾಯ ಪ್ರಯತ್ನ‌ಮಾಡಿ ಸೂರಜ್ ನಾಯ್ಕ ಅವರನ್ನು ಗೆಲ್ಲಿಸಲೇ ಬೇಕೆಂದು ಕಾರ್ಯಕರ್ತರು ಶ್ರಮ ವಹಿಸಿದ್ದಾರೆ.

ಸೂರಜ್ ನಾಯ್ಕ ಸೋನಿಯವರು ಹಿಂದುತ್ವಕ್ಕೆ ಹಾಗೂ ಗೋ ರಕ್ಷಣೆಯ ಕುರಿತಾಗಿ ಹೋರಾಟ ಮಾಡಿದ್ದು ಅವರನ್ನು ನಾವು ಬೆಂಬಲಿಸುವುದಾಗಿ ಅನೇಕ ಕಾರ್ಯಕರ್ತರು ತಿಳಿಸಿದ್ದಾರೆ. ಸೋನಿಯವರ ಹೋರಾಟ ಪ್ರವೃತ್ತಿಯೇ ಅವರಿಗೆ ಬಲ ಎಂಬುದಾದರೂ ಜನತೆಯ ಮನ‌ ತೂಗಲು ಚುನಾವಣಾ ಪರಿಣಾಮವೇ ಬರಬೇಕಾಗಿದೆ.