Home Local ಸತತ ಮೂರನೇ ವರ್ಷವೂ ನೂರು ಪ್ರತಿಷತ ಅಂಕಗಳಿಸಿ ಸಾಧನೆ ಮಾಡಿದ ದಿನಕರ ಆಂಗ್ಲ ಮಾಧ್ಯಮ ಪ್ರೌಢಶಾಲೆ...

ಸತತ ಮೂರನೇ ವರ್ಷವೂ ನೂರು ಪ್ರತಿಷತ ಅಂಕಗಳಿಸಿ ಸಾಧನೆ ಮಾಡಿದ ದಿನಕರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಧಾರೇಶ್ವರ.

SHARE

ಕೆನರಾ ವೆಲ್ಹ್ ಫೆರ್ ಟ್ರಸ್ಟಿನ ದಿನಕರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಧಾರೇಶ್ವರ ನೂರು ಪ್ರತಿಶತ ಫಲಿತಾಂಶ ಸಾಧನೆ ಮಾಡಿದೆ.

2017-18 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಿನಕರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಧಾರೇಶ್ವರದ ಎಲ್ಲ ವಿದ್ಯಾರ್ಥಿಗಳು ತೇರ್ಗಡೆ ಹೊಂದುವುದರ ಮೂಲಕ ಶಾಲೆಗೆ ನೂರು ಪ್ರತಿಶತ ಫಲಿತಾಂಶವನ್ನು ನೀಡಿದ್ದಾರೆ.ಸತ‍ತ ಮೂರನೇ ವರ್ಷವೂ ನೂರು ಪ್ರತಿಶತ ಮಾಡಿ ಹ್ಯಾಟ್ರಿಕ್ ಸಾಧನೆ ಮಾಡಿದೆ .

ನಿರೋಷ ಜಿ ಭಾಗ್ವತ್ 96.96 ಅಂಕ ಪಡೆದು ಪ್ರಥಮ ಸ್ಥಾನ ಪಡೆದರೆ,ಶ್ರೀಲಕ್ಷ್ಮೀ ಎಂ ಭಟ್ಟ 93.44 ಅಂಕ ಪಡೆದು ದ್ವಿತೀಯ ಹಾಗೂ ಅಕ್ಷಯ ಜೆ ಶೇಟ್‌ 92.16 ಅಂಕ ಪಡೆದು ತ್ರತೀಯ ಸ್ಥಾನ ಪಡೆದಿದ್ದಾರೆ.

ಇವರಿಗೆ ಕೆನರಾ ವೆಲ್ಫೇರ್ ಟ್ರಸ್ಟ್ ವತಿಯಿಂದಲೂ, ಶಾಲಾಭಿವೃದ್ಧಿ ಸಮಿತಿಯ ವತಿಯಿಂದಲೂ, ಮುಖ್ಯಾಧ್ಯಾಪಕರು ಹಾಗೂ ಸಹ ಶಿಕ್ಷಕರಿಂದ ಎಲ್ಲ ವಿದ್ಯಾರ್ಥಿಗಳಿಗೂ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ