Home Local ಹೊನ್ನಾವರದಲ್ಲಿ ಸೋನಿಯವರ ರೋಡ್ ಶೋ! ಹೋರಾಟಗಾರನ ಜೊತೆ ಹೆಜ್ಜೆ ಹಾಕಿದ ಕಾಳೀ ಸ್ವಾಮಿ.

ಹೊನ್ನಾವರದಲ್ಲಿ ಸೋನಿಯವರ ರೋಡ್ ಶೋ! ಹೋರಾಟಗಾರನ ಜೊತೆ ಹೆಜ್ಜೆ ಹಾಕಿದ ಕಾಳೀ ಸ್ವಾಮಿ.

SHARE

ಹೊನ್ನಾವರ: ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸೂರಜ್ ಸೋನಿ ಹಾಗೂ ಕಾಳಿ ಮಠದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಋಷಿಕುಮಾರ ಸ್ವಾಮೀಜಿಯವರ ನೇತ್ರತ್ವದಲ್ಲಿ ನಡೆದ ರೋಡ್ ಶೋ ನಲ್ಲಿ ನಿರೀಕ್ಷೆಗೂ ಮೀರಿ ಸಾವಿರಾರೂ ಕಾರ್ಯಕರ್ತರು ಭಾಗಿಯಾಗಿ ಸಿಡಿಲಬ್ಬರದ ಪ್ರಚಾರ ನಡೆಸಿದರು.

ಹೊನ್ನವರ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಚರಿಸಿ ರೋಡ್ ಶೋ ಸಮಾರೋಪಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಸೂರಜ್ ಸೋನಿ ಅವರು ” ಗೋರಕ್ಷಣೆಗಾಗಿ ಹೋರಾಡಿದ ನನ್ನನ್ನು ರಾಜಕೀಯವಾಗಿ ಮುಗಿಸಲು ಕೆಲ ಕಿಡಿಗೇಡಿ ರಾಜಕಾರಣಿಗಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದರು. ತತ್ವ ಸಿದ್ದಾಂತಡಿ ಹೋರಾಡಿದ ನನಗೆ ಪಕ್ಷವೂ ಮೋಸಮಾಡಿತು. ಆದ್ದರಿಂದ ನನ್ನ ಅಭಿಮಾನಿಗಳ ಒತ್ತಾಸೆಯ ಮೇರೆಗೆ ಪಕ್ಷೇತರನಾಗಿ ಸ್ಪರ್ಧಿಸಿದ್ದೇನೆ ದಯವಿಟ್ಟು ಧರ್ಮ ಗೆಲ್ಲಿಸಿ ಅಂದಕ್ಕಾಗಿ ನನಗೆ ಮತ ನೀಡಿ ಎಂದು ವಿನಂತಿಸಿದರು “.

ಬಳಿಕ ಕಾಂಳೀ ಮಠದ ಋಷಿಕುಮಾರ ಸ್ವಾಮೀಜಿ ಮಾತನಾಡಿ ” ಕುಮಟಾ ಹೊನ್ನಾವರದಲ್ಲಿ ದಲ್ಲಿ ಅಧರ್ಮ ತಾಂಡವವಾಡುತ್ತಿದೆ. ಧರ್ಮ ರಕ್ಷಣೆ ಮಾಡುವ ಜವಾಬ್ಧಾರಿ ನಮ್ಮ ಮೇಲಿದೆ. ಆದ್ದರಿಂದ ಈ ಭಾಗದ ಗೋರಕ್ಷ ಸೂರಜ್ ಸೋನಿಗೆ ಮತ ನೀಡಿ ಹಿಂದುಗಳ ಶಕ್ತಿ ಪ್ರದರ್ಶನ ಮಾಡಿ ” ಎಂದು ಕಾರ್ಯಕರ್ತರಿಗೆ ಕರೆನೀಡಿದರು.

ಸಾವಿರಾರು ಜನ ಕಾರ್ಯಕರ್ತರು ಸೂರಜ್ ನಾಯ್ಕ ಜೊತೆ ಹೆಜ್ಜೆ ಹಾಕಿ ಶಕ್ತಿ ಪ್ರದರ್ಶನ ನಡೆಸಿದರು.