Home Local ಕಾಂಗ್ರೆಸ್ ಗೆಲುವಿಗೆ ಹಿರಿಯರ ಪ್ರಚಾರ: ಕಾರ್ಯಕರ್ತರಲ್ಲಿ ಮೂಡುತ್ತಿದೆ ಗೆಲುವಿನ ಭರವಸೆ.

ಕಾಂಗ್ರೆಸ್ ಗೆಲುವಿಗೆ ಹಿರಿಯರ ಪ್ರಚಾರ: ಕಾರ್ಯಕರ್ತರಲ್ಲಿ ಮೂಡುತ್ತಿದೆ ಗೆಲುವಿನ ಭರವಸೆ.

SHARE

ಕುಮಟಾ:ಕಾಂಗ್ರೆಸ್ ಅಬ್ಬರದ ಪ್ರಚಾರ ನಡೆಸುತ್ತಿದೆ ,ಹಿರಿ ಕಿರಿಯ ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇಂದೂ ಸಹ ಪ್ರಚಾರ ಭರಾಟೆ ಜೋರಾಗಿತ್ತು.


ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರು ಮಾಜಿ ಜಿ ಪಂ ಸದಸ್ಯರು, ಮಾಜಿ ಬ್ಲಾಕ ಅಧ್ಯಕ್ಷರು ಆದ ಶ್ರೀಯುತ ಹೊನ್ನಪ್ಪ ನಾಯಕರವರು ಅಳಕೋಡ ಪಂಚಾಯತ ವ್ಯಾಪ್ತಿಯಲ್ಲಿ ಶಾಸಕರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರ ಪರವಾಗಿ ಪ್ರಚಾರ ಮಾಡಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಧುಸೂದನ ಶೆಟ್,ನಾಗೇಶ ನಾಯ್ಕ, ದೇವು ಗೌಡ, ಎಮ್ ಟಿ ನಾಯ್ಕ ಹಾಗೂ ಕೃಷ್ಣಾನಂದ ವರ್ಣೇಕರ್ ಉಪಸ್ಥಿತರಿದ್ದರು.

ಅದೇ ರೀತಿ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಬಂಕಿಕೊಡ್ಲದಲ್ಲಿ ಅಪಾರ ಜನ ಬೆಂಬಲದೊಂದಿಗೆ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಜಯಂತ ನಾಯ್ಕ, ನಾಗರಾಜ ನಾಯ್ಕ, ಹಾಗೂ ಪಂಚಾಯತ ಸದಸ್ಯರು ಭಾಗವಹಿಸಿದರು.

ಗೋಕರ್ಣ ಪಂಚಾಯತ್ ವ್ಯಾಪ್ತಿಯ ರುದ್ರಪಾದ ಹಾಗೂ ಮಾರುತಿಕಟ್ಟೆಯಲ್ಲಿ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಚುನಾವಣಾ ಪ್ರಚಾರ ಮಾಡಿ ಮತಯಾಚನೆ ಮಾಡಿದರು ಈ ಸಂದರ್ಭದಲ್ಲಿ ಗುಲಾಬಿ ಮೂಡಂಗಿ, ಮೋಹನ್ ನಾಯ್ಕ, ವಿಜಯ ಹೊಸ್ಕಟ್ಟಾ, ಮಹಾಬಲೇಶ್ವರ ಗೌಡ, ವಿನೋದ ರೇಡ್ಕರ, ಸುವರ್ಣ ಅಪ್ಟೇಕರ್ ಮುಂತಾದವರು ಭಾಗವಹಿಸಿದ್ದರು.