Home Local ಕುಮಟಾದಲ್ಲಿ ಜೆಡಿಎಸ್ ಬ್ರಹತ್ ಮೆರವಣಿಗೆ : ಪ್ರದೀಪ ನಾಯಕರಿಗೆ ಜನ ಬೆಂಬಲ

ಕುಮಟಾದಲ್ಲಿ ಜೆಡಿಎಸ್ ಬ್ರಹತ್ ಮೆರವಣಿಗೆ : ಪ್ರದೀಪ ನಾಯಕರಿಗೆ ಜನ ಬೆಂಬಲ

SHARE

ಕುಮಟಾ: ಇಂದು ಕುಮಟಾದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರದೀಪ ನಾಯಕ ದೇವರಬಾವಿ ರೋಡ್ ಶೋ ನಡೆಸಿದರು.

ಸಾವಿರಾರು ಜನ ಕಾರ್ಯಕರ್ತರ ಜೊತೆಗಡ ಹೆಜ್ಜೆ ಹಾಕಿದ ಪ್ರದೀಪ ನಾಯಕ ಜೆಡಿಎಸ್ ಗೆಲುವು ನಿಶ್ಚಿತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಜೆಡಿಎಸ್ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸ್ಯಾಂಡಲ್ ವುಡ್ ನ ಹಲವು ನಟ, ನಟಿಯರು ಜೆಡಿಎಸ್ ಗೆ ಬೆಂಬಲವನ್ನು ನೀಡಿದ್ದಾರೆ. ಕುಮಟಾದಲ್ಲಿಯೂ ಜನರು ತಮ್ಮನ್ನು ಬೆಂಬಲಿಸಲಿದ್ದು ನಮಗೆ ಗೆಲ್ಲುವ ಭರವಸೆ ಇದೆ ಎಂದರು.

ಕರ್ನಾಟಕದ ಪರ ಇರುವ ಮತ್ತು ರೈತರ ಪರವಾಗಿರುವ ಜೆಡಿಎಸ್ ನ್ನು ಬೆಂಬಲಿಸುವಂತೆ ಅವರು ಮನವಿ ಮಾಡಿಕೊಂಡಿದ್ದು, ಕುಮಾರಸ್ವಾಮಿ ರಾಜ್ಯದ ಓರ್ವ ಉತ್ತಮ ನಾಯಕ ಎಂದು ಅವರು ಕೊಂಡಾಡಿದ್ದಾರೆ.

ಇವರ ಜೊತೆಗೆ ತೆನೆಹೊತ್ತ ಮಹಿಳೆಯೂ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಳು, ಇನ್ನುಳಿದಂತೆ ಜೆಡಿಎಸ್ ಪ್ರಮುಖರು ಹಾಗೂ ನೂರಾರು ರೈತ ಮಹಿಳೆಯರು ಪಾಲ್ಗೊಂಡು ಪ್ರದೀಪ ನಾಯಕರಿಗೆ ಬೆಂಬಲ‌ಸೂಚಿಸಿದರು.