Home Local ಬಹಿರಂಗ ಉಪಾಸನೆಗಿಂತ ಧ್ಯಾನ – ಸಮಾಧಿಯ ಅಂತರಂಗ ಸೇವೆ ಹೆಚ್ಚಿನ ಮಹತ್ವದ್ದು

ಬಹಿರಂಗ ಉಪಾಸನೆಗಿಂತ ಧ್ಯಾನ – ಸಮಾಧಿಯ ಅಂತರಂಗ ಸೇವೆ ಹೆಚ್ಚಿನ ಮಹತ್ವದ್ದು

SHARE

ಏನಾದರೂ ಹೇಳಬೇಕೆಂದಿದ್ದರೆ ನೀನು ಇದ್ದಲ್ಲೇ ಹೇಳಿದರೂ ಅದು ನನಗೆ ತಲುಪುತ್ತದೆ….. ಈ ಬಹಿರಂಗ ಉಪಾಸನೆಗಿಂತ ಧ್ಯಾನ – ಸಮಾಧಿಯ ಅಂತರಂಗ ಸೇವೆ ಹೆಚ್ಚಿನ ಮಹತ್ವದ್ದು.

(ಇಸವಿ ಸನ ೧೯೬೧ರಲ್ಲಿ ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರ)

—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

                                  || ಶ್ರೀರಾಮ ಸಮರ್ಥ ||

                                                             ಅಷ್ಟಮಿ, ಜ್ಯೇಷ್ಠ, ಕೃ, ಶ ೧೮೮೩

                                                              ೦೭-೦೬-೧೯೬೧

ಚಿ.ಪಂಡಿತನಿಗೆ ಆಶೀರ್ವಾದ,

ಮಗಾ! ಪಾದುಕೆಯ ದರ್ಶನ ತೆಗೆದುಕೊಂಡು ಹೋದೆಯೆಂದರೆ ಸಾಕು. ರಾತ್ರಿ ಇಲ್ಲಿ ನಿನ್ನ ಬಹಳ ವೇಳೆ ಹೋಗುತ್ತಿದೆ. ಏನಾದರೂ ಹೇಳಬೇಕೆಂದಿದ್ದರೆ ನೀನು ಇದ್ದಲ್ಲೇ ಹೇಳಿದರೂ ಅದು ನನಗೆ ತಲುಪುತ್ತದೆ. ಹೆಚ್ಚಿನ ವೇಳೆ ಅಭ್ಯಾಸದಲ್ಲಿ ಹಾಕು. ಈ ಬಹಿರಂಗ ಉಪಾಸನೆಗಿಂತ ಧ್ಯಾನ – ಸಮಾಧಿಯ ಅಂತರಂಗ ಸೇವೆ ಹೆಚ್ಚಿನ ಮಹತ್ವದ್ದು. ಬೆಳಿಗ್ಗೆ ಹಸಿವೆಯಾದರೆ ಹಾಲು-ಅವಲಕ್ಕಿ ತಿಂದು, ತಿಂದ ಮೇಲೆ ಆಚಮನ ಮಾಡಿದೆ ಅಂದರೆ ಆಯಿತು. ಹಸಿದ ಹೊಟ್ಟೆ ಕಾಯಿಸಬೇಡ. ಹಾಲು ಹೆಚ್ಚು ಬೇಕಾದರೆ ‘ಕೊಡು’ ಎಂದು ಲಕ್ಷ್ಮೀನಾರಾಯಣನಿಗೆ ಹೇಳಿ ಇಟ್ಟಿದ್ದೇನೆ. ಈಗ ನಮಸ್ಕಾರ ಮಾಡಿ ಹೋಗು.

                                                 ಶ್ರೀಧರ