Home Local ಹಿಂದೂ ಹೋರಾಟಗಾರ ಶಂಕರ ನಾಯ್ಕ ಬಿಡುಗಡೆ: ಅಭಿಮಾನಿಗಳಲ್ಲಿ ಸಂತಸ

ಹಿಂದೂ ಹೋರಾಟಗಾರ ಶಂಕರ ನಾಯ್ಕ ಬಿಡುಗಡೆ: ಅಭಿಮಾನಿಗಳಲ್ಲಿ ಸಂತಸ

SHARE

ಕಾರವಾರ : ಹಿಂದೂಪರ ಹೋರಾಟಗಾರ, ಗೋ ರಕ್ಷಕ ಶಂಕರ ನಾಯ್ಕ ಅವರಿಗೆ ಇದೀಗ ಬಿಡುಗಡೆ ಭಾಗ್ಯ ಸಿಕ್ಕಿದೆ.

ಡಿಸೆಂಬರ್ ತಿಂಗಳಲ್ಲಿ ನಡೆದ ಪರೇಶ ಮೇಸ್ತಾ ಸಾವಿರ ಪ್ರಕರಣಕ್ಕೆ ನಡೆದ ಹೋರಾಟದಲ್ಲಿ ಭಟ್ಕಳದ ಶಂಕರ ನಾಯ್ಕ ಸೇರಿ ನೂರಾರು ಜನರನ್ನು ಬಂಧಿಸಲಾಗಿತ್ತು. ಆದರೆ ಉಳಿದವರಿಗೆಲ್ಲಾ ಈ ಮೊದಲೆ ಜಾಮೀನಿನ ಮೇಲೆ ಬಿಡುಗಡೆಯಾಗಿದರು. ಆದರೆ ಶಂಕರ ನಾಯ್ಕ 107 ದಿನಗಳ ಕಾಲ ಕಾರವಾರದ ಜಿಲ್ಲಾ ಕೇಂದ್ರದಲ್ಲೆ ದಿನ ಕಳೆಯುವಂತಾಗಿತ್ತು.

ಆದರೆ ಇದೀಗ ಶಂಕರ ನಾಯ್ಕ ಅವರಿಗೆ ಜೈಲಿನಿಂದ ಬಿಡುಗಡೆ ಸಿಕ್ಕಿದ್ದು ಅವರ ಅಭಿಮಾನಿಗಳಿಗೆ ಒಂದಿಷ್ಟು ಖುಷಿ ನೀಡಿದೆ.