Home Local ದಿನದಿಂದ ದಿನಕ್ಕೆ ಜನಪ್ರಿಯತೆ ಗಳಿಸುತ್ತಿರುವ  ಸುನೀಲ್

ದಿನದಿಂದ ದಿನಕ್ಕೆ ಜನಪ್ರಿಯತೆ ಗಳಿಸುತ್ತಿರುವ  ಸುನೀಲ್

SHARE

@ಎಮ್ ಎಸ್ ಶೋಭಿತ್ ಮೂಡ್ಕಣಿ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೇವಲ 5 ದಿನಗಳಿದ್ದು ಅಭ್ಯರ್ಥಿಗಳು ಜನಪ್ರಿಯತೆ ಗಳಿಸುತ್ತಿದ್ದಾರೆ.ಅಂತವರ ಸಾಲಿಗೆ ಮತ್ತೊಂದು ಸೇರ್ಪಡೆಯೇ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ. ಪ್ರತಿದಿನ ನಡೆಯುತ್ತಿರುವ ಚುನಾವಣಾ ಪ್ರಚಾರವೇ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.

ಬೆನ್ನಿಗೆ ನಿಂತ ಯುವಪಡೆ :- 

ಹೌದು, ಸುನೀಲ್ ನಾಯ್ಕ ಕಡೆ ಆಕರ್ಷಕರಾಗಿರುವ ಯುವಪಡೆಗಳು ಅವರ ಬೆನ್ನೆಲುಬಾಗಿ ನಿಂತಿದೆ. ಹೋದಲ್ಲಿ ಬಂದಲ್ಲೆಲ್ಲಾ ಅವರ ತಮ್ಮ ಅಭಿಮಾನಿಗಳನ್ನು ಹೊಂದಿದ್ದಾರೆ. ಚುನಾವಣಾ ಪ್ರಚಾರದಲ್ಲೂ ಸಹ ಯುವಕರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.

ಕ್ಯಾಂಪೇನರ್ ಗಳಾದ ಶಾಸ್ತ್ರಿ ದಂಪತಿ :- 

ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯು ಗೆಲ್ಲಬೇಕೆಂಬ ಶತಾಯುಗತ ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಸುನೀಲ್ ನಾಯ್ಕ ಜೊತೆ ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಕಲಾ ಶಾಸ್ತ್ರಿ ಮತ್ತು ಸುಬ್ರಹ್ಮಣ್ಯ ಶಾಸ್ತ್ರಿ ದಂಪತಿಗಳು ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.

ಬಹುತೇಕ ಪ್ರಚಾರ ಕಾರ್ಯ ಪೂರ್ಣ:- 

ಸರಿಸುಮಾರು 120 ಕಿ.ಮೀ. ವ್ಯಾಪ್ತಿಯನ್ನು ಹೊಂದಿರುವ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಅಭಿಮಾನಿಗಳು ಹಾಗೂ ಸುನೀಲ್ ನಾಯ್ಕ ಈಗಾಗಲೇ ಅನೇಕ ಕಡೆ ತಮ್ಮ ಪ್ರಚಾರ ಕಾರ್ಯಗಳನ್ನು ಮುಗಿಸಿದ್ದಾರೆ.

ಕೊಡುಗೈ ದಾನಿ :- 

ಅನೇಕ ಸಂಘ-ಸಂಸ್ಥೆಗಳಿಗೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ಅಶಕ್ತರಿಗೆ, ಬಡವರಿಗೆ ತನ್ನ ಕೈಲಾದ ಸಹಾಯವನ್ನು ಮಾಡುವ ಮೂಲಕ ಕೊಡುಗೈ ದಾನಿಯಾಗಿ ಗುರುತಿಸಿಕೊಂಡಿದ್ದಾರೆ. ಈ ಎಲ್ಲಾ ಸಾಧನೆಗಳನ್ನು ಗುರುತಿಸಿ ಮಹಿಳೆಯರು ಕೂಡ ಇವರ ಗೆಲುವಿಗೆ ಶ್ರಮಿಸುತ್ತಿದ್ದಾರೆ.

ಕ್ಷೇತ್ರದ ಜಾತೀವಾರು ಲೆಕ್ಕಾಚಾರ:- 

ಕ್ಷೇತ್ರದ 2 ಲಕ್ಷ 12 ಸಾವಿರ ಮತದಾರರಲ್ಲಿ 68 ಸಾವಿರದಷ್ಟು ನಾಮಧಾರಿ ಸಮಾಜದ ಮತದಾರರಿದ್ದು ಈವರೆಗೂ ಪ್ರಥಮ ಬಹುಸಂಖ್ಯಾತ ಮತದಾರರೆಂದು ಗುರುತಿಸಲ್ಪಟ್ಟಿದ್ದಾರೆ. ಕ್ಷೇತ್ರದಲ್ಲಿರುವ ನಾಮಧಾರಿಗಳು, ಮುಸ್ಲಿಂ, ಕ್ರೈಸ್ತ, ಹವ್ಯಕ ಬ್ರಾಹ್ಮಣ, ಒಕ್ಕಲಿಗರು, ಹಾಲಕ್ಕಿಗಳು ಮುಂತಾದ ಅನೇಕ ವರ್ಗದ ಜನರುಗಳ ಬೆಂಬಲ ಇವರಿಗೆ ಇರುವುದರಿಂದ ಇವರೇ ಗೆಲ್ಲುತ್ತಾರೆ ಎಂಬುದು ಕ್ಷೇತ್ರದ ಜನತೆಯ ಮಾತಾಗಿದೆ.

ಏನೇ ಆಗಲಿ ಯಾರು ಗೆಲ್ಲುತ್ತಾರೆ ಯಾರು ಸೋಲುತ್ತಾರೆ ಎಂಬುದನ್ನು ಮೇ 15 ರ ತನಕ ಕಾದುನೋಡಬೇಕಾಗಿದೆ.