Home Health ಪದೇ ಪದೇ ಬಾಯಿ ಒಣಗುತ್ತಿದೆಯೇ? ಹಾಗಾದರೆ ಹೀಗೆ ಮಾಡಿ.

ಪದೇ ಪದೇ ಬಾಯಿ ಒಣಗುತ್ತಿದೆಯೇ? ಹಾಗಾದರೆ ಹೀಗೆ ಮಾಡಿ.

SHARE

ಬಾಯಿಯಲ್ಲಿ ಸಾಕಷ್ಟು ಪ್ರಮಾಣದ ಲಾಲಾ ರಸದ ಕೊರತೆ ಉಂಟಾದಾಗ ಅಥವಾ ಕಡಿಮೆ ಉಸಿರಾಟದ ಹರಿವು ಇದ್ದಾಗ ಡ್ರೈ ಮೌತ್​ ಸಮಸ್ಯೆ ಎದುರಾಗುತ್ತೆ. ಇದನ್ನು ಜೀರೋಸ್ಟೋಮಿಯಾ ಎಂತಲೂ ಕರೆಯುತ್ತಾರೆ. ಯಾರತ್ರಾದ್ರೂ ಮಾತಾಡ್ಬೇಕು ಅನ್ನಿಸಿದ್ರೂ ಕೂಡ ಗಂಟಲು ಕಟ್ಟಿ ಕೆಮ್ಮು ಬರುತ್ತೆ. ಗಂಟಳೊಳಗಡೆ ಕಿಚ್​ಕಿಚ್​ ಅನುಭವವಾಗುತ್ತದೆ. ಎಷ್ಟು ನೀರ್​ ಕುಡಿದ್ರೂ ಏನು ಪ್ರಯೋಜನ ಆಗ್ತಾ ಇಲ್ಲ ಅಂತಾ ತಲೆ ಕೆಡಿಸಿಕೊಳ್ತಾ ಇದ್ದೀರಾ. ಹಾಗಾದ್ರೆ ಇಲ್ಲಿದೆ ಸುಲಭ ಉಪಾಯ. ಮನೆಯಲ್ಲೇ ಸಿಗೋ ಇನ್​ಗ್ರಿಡಿಯೆಂಟ್​ ಉಪಯೋಗಿಸಿ ಡ್ರೈ ಮೌತ್​ನಿಂದ ಮುಕ್ತಿ ಪಡಿಬಹುದು.

1. ದ್ರವ ರೂಪದ ಆಹಾರ ಸೇವಿಸಿ
ಬಾಯಿ ಒಣಗಲು ಮುಖ್ಯ ಕಾರಣ ನಿರ್ಜಲೀಕರಣ.(ಡೀಹೈಡ್ರೇಷನ್​) ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಹೆಚ್ಚಾಗಿ ದ್ರವ್ಯಯುಕ್ತ ಪದಾರ್ಥಗಳನ್ನು ಸೇವಿಸಿ. ಇದು ನಿಮ್ಮ ದೇಹದಲ್ಲಿ ಲಾಲಾರಸವನ್ನು ಉತ್ಪತ್ತಿ ಮಾಡಲು ಸಹಾಯಕವಾಗುತ್ತದೆ. ಸಾಕಷ್ಟು ಪ್ರಮಾಣದ ನೀರು, ಹಣ್ಣಿನ ರಸ, ಫ್ರುಟ್​ ಸ್ಮೂತೀಸ್​, ತೆಂಗಿನ ಕಾಯಿ ನೀರು, ಹರ್ಬಲ್​ ಟೀ ಮತ್ತು ಸೂಪ್​ಗಳನ್ನು ಸೇವಿಸಿ. ಆಲ್ಕೊಹಾಲ್, ಕೆಫೀನ್ ಮತ್ತು ಸೋಡಾಗಳ ಸೇವನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಏಕೆಂದರೆ ಇದು ನಿರ್ಜಲೀಕರಣದ ಅಪಾಯವನ್ನು ಹೆಚ್ಚು ಮಾಡುತ್ತೆ.

2. ಸಯೆನ್ನೆ ಪೆಪರ್
ಸಯೆನ್ನೆ ಪೆಪರ್.​ ಇದು ಉಸಿರಾಟದ ಉತ್ಪಾದನೆ ಹೆಚ್ಚಿಸುತ್ತೆ. ಇದೊಂದು ಟೆಸ್ಟ್​ ಬೂಸ್ಟರ್​ ಆಗಿದೆ. ಹುಳಿ, ಸಿಹಿ, ಕಹಿ ಮತ್ತು ಉಪ್ಪು ರುಚಿಗಳ ನಡುವಿನ ವ್ಯತ್ಯಾಸ ತಿಳಿಸುತ್ತದೆ. ಸ್ವಲ್ಪ ಪ್ರಮಾಣದ ಕೇನ್​ ಪೆಪರ್​ ತೆಗೆದುಕೊಂಡು ನಿಮ್ಮ ನಾಲಗೆಯ ಸುತ್ತ ಹಚ್ಚಿಕೊಳ್ಳಿ. ಆ ಕ್ಷಣಕ್ಕೆ ಸುಡುವ ಸಂವೇಧನೆಯಾದರೂ ಒಣ ಬಾಯಿಗೆ ಚಿಕಿತ್ಸೆ ನೀಡಲು ಇದು ಪರಿಣಾಮಕಾರಿಯಾಗಿರುತ್ತೆ.

3. ಫೆನ್ನೆಲ್ ಬೀಜಗಳು
ಫೆನ್ನೆಲ್ ಬೀಜಗಳಲ್ಲಿ ಫ್ಲೇವೊನೈಡ್​ ಕಂ​ಟೆಂಟ್​ ಇರುತ್ತೆ. ಇದು ಉಸಿರಾಟವನ್ನ ಉತ್ತೇಜಿಸುತ್ತೆ. ಜೊತೆಗೆ ಇದು ನಿಮ್ಮ ಬಾಯಿಯ ಪರಿಮಳವನ್ನು ಹೆಚ್ಚಿಸುತ್ತೆೆ ಮತ್ತು ಕೆಟ್ಟ ವಾಸನೆಯನ್ನು ಹೋಗಲಾಡಿಸುತ್ತೆ. ಊಟದ ನಂತರ ಅಥವಾ ನಿಮಗೆ ಅನುಕೂಲವಾದಾಗ ಈ ಬೀಜ ಸೇವಿಸಿದರೆ ಉತ್ತಮ.

4. ನೈಸರ್ಗಿಕ ತೈಲಗಳು
ಇದು ನಿಮ್ಮ ಬಾಯಿ ಒಣಗುವುದನ್ನು ತಡೆಯುತ್ತೆ. ಈ ದೈಹಿಕ ಅಭ್ಯಾಸವು ನಿಮ್ಮ ಮೌಖಿಕ ಆರೋಗ್ಯಕ್ಕೆ ಸಹಕಾರಿಯಾಗುತ್ತೆ. ಕೆಟ್ಟ ಉಸಿರಾಟದ ಕ್ರಮವನ್ನು ಇದು ತಡೆಗಟ್ಟುತ್ತೆ. ಇದನ್ನು ತೆಂಗಿನ ಎಣ್ಣೆ, ಎಳ್ಳಿನ ಎಣ್ಣೆ ಮತ್ತು ವೆಜಿಟೇಬಲ್​ ಎಣ್ಣೆಯಿಂದ ಮಾಡಬಹುದಾಗಿದೆ. ಒಂದು ಟೀ ಸ್ಪೂನ್​ ಎಣ್ಣೆಯನ್ನು ತೆಗೆದುಕೊಂಡು ಬಾಯಿಯೊಳಗೆ ಹಾಕಿ 15 ನಿಮಿಷಗಳ ಕಾಲ ತಿರುಗಿಸಿ ನಂತರ ಉಗುಳಿ. ಎಂದಿನಂತೆ ಹಲ್ಲುಗಳನ್ನು ಬ್ರಷ್ ಮಾಡಿ.

5. ಅಲೋವೆರಾ
ಅಲೋವೆರಾ ಬಹಳ ಹಿಂದಿನ ಕಾಲದಿಂದಲೂ ಅನೇಕ ರೋಗಗಳಿಗೆ ಬಳಸುವ ಮನೆ ಮದ್ದಾಗಿದೆ. ಬಾಯಿಯಲ್ಲಿರುವ ಸೂಕ್ಷ್ಮ ಅಂಗಾಂಶವನ್ನು ರಕ್ಷಿಸುತ್ತೆ ಜೊತೆಗೆ ಇದು ಒಣ ಬಾಯಿ ಚಿಕಿತ್ಸೆಗೆ ಉತ್ತಮ ಪರಿಹಾರವಾಗಿದೆ. ಪ್ರತಿನಿತ್ಯ ಅಲೋ ವೆರಾ ರಸವನ್ನು ಅರ್ಧ ಕಪ್ ಕುಡಿಯುವುದರಿಂದ ಡ್ರೈ ಮೌತ್​ ಸಮಸ್ಯೆಯನ್ನು ಹೋಗಲಾಡಿಸಬಹುದು.

6. ನಿಂಬೆ
ನಿಂಬೆ ಹಣ್ಣೆನಲ್ಲಿ ಆಮ್ಲೀಯ ಗುಣವಿದ್ದು, ಅದು ನಿಮ್ಮ ಬಾಯಿಯನ್ನು ಶುದ್ಧೀಕರಿಸುತ್ತದೆ ಮತ್ತು ಕೆಟ್ಟ ಉಸಿರಾಟದ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಪ್ರತಿನಿತ್ಯ ಒಂದು ಲೋಟ ನೀರಿಗೆ ಸ್ವಲ್ಪ ಜೇನು ತುಪ್ಪ ಮತ್ತು ನಿಂಬೆ ಹಣ್ಣಿನ ರಸ ಸೇರಿಸಿ ಕುಡಿಯುವುದರಿಂದ ಒಣ ಬಾಯಿ ಸಮಸ್ಯೆ ಕಡಿಮೆಯಾಗುತ್ತದೆ. ಜೊತೆಗೆ ನಿಂಬೆ ಹಣ್ಣನ್ನು ಕತ್ತರಿಸಿ ಅದಕ್ಕೆ ಉಪ್ಪನ್ನು ಸವರಿ ನಾಲಗೆಯ ಮೇಲೆ ಉಜ್ಜುವುದರಿಂದ ಡ್ರೈ ಮೌತ್​ ಸಮಸ್ಯೆ ಪರಿಹಾರವಾಗುತ್ತದೆ.

7. ಏಲಕ್ಕಿ
ಏಲಕ್ಕಿ ಕೂಡ ಡ್ರೈ ಮೌತ್​ ಸಮಸ್ಯೆಗೆ ಉತ್ತಮ ಮನೆಮದ್ದಾಗಿದೆ. ಊಟದ ನಂತರ ಏಲಕ್ಕಿ ಬೀಜವನ್ನು ಬಾಯಿಯಲ್ಲಿ ಹಾಕಿಕೊಳ್ಳಬೇಕು ಅಥವಾ ಚಹಾದೊಂದಿಗೆ ಏಲಕ್ಕಿ ಬೀಜ ಸೇರಿಸೋದ್ರಿಂದ ಒಣ ಬಾಯಿ ಸಮಸ್ಯೆ ಪರಿಹಾರವಾಗುತ್ತೆ.

8. ಶುಂಠಿ
ಶುಂಠಿ ಉತ್ತಮ ಮನೆಮದ್ದಾಗಿದೆ. ಇದನ್ನ ಸೇವಿಸೋದ್ರಿಂದ ನಿಮ್ಮ ಬಾಯಿಯಲ್ಲಿ ಲಾಲಾರಸದ ಉತ್ಪಾದನೆ ಹೆಚ್ಚಾಗುತ್ತೆ ಜೊತೆಗೆ ಇಡೀ ದಿನ ಬಾಯಿಯನ್ನ ಫ್ರೆಶ್​ ಆಗಿಡಲು ಇದು ಸಹಕಾರಿಯಾಗಿದೆ. ಸಣ್ಣ ತುಂಡು ಶುಂಠಿಯನ್ನ ಸೇವಿಸಿ ಅಥವಾ ಟೀ ಜೊತೆಗೆ ಶುಂಠಿಯನ್ನ ಸೇರಿಸಿದ್ರೆ ಒಣಬಾಯಿ ಸಮಸ್ಯೆ ದೂರವಾಗುತ್ತೆ.