Home Important ಭಾರತ ಸೇನೆಯ ಬತ್ತಳಿಕೆ ಸೇರುತ್ತಿವೆ ಶಸ್ತ್ರಾಸ್ತ್ರಗಳು: ವೈರಿಗಳಿಗಿನ್ನು ನಡುಕ!

ಭಾರತ ಸೇನೆಯ ಬತ್ತಳಿಕೆ ಸೇರುತ್ತಿವೆ ಶಸ್ತ್ರಾಸ್ತ್ರಗಳು: ವೈರಿಗಳಿಗಿನ್ನು ನಡುಕ!

SHARE

ನವದೆಹಲಿ: 2016 ರಲ್ಲಿ ಜಮ್ಮು&ಕಾಶ್ಮಿರದ ಉರಿಯಲ್ಲಿ ನಡೆದ ಉಗ್ರರ ದಾಳಿಯಿಂದ ಕೇಂದ್ರ ಸರ್ಕಾರ ಪಾಠ ಕಲಿತಿದೆ. ಆ ಸಂದರ್ಭದಲ್ಲಿ, ಕೇಂದ್ರ ಸರ್ಕಾರಕ್ಕೆ ತೀವ್ರಸ್ವರೂಪದ ಯುದ್ಧ ನಡೆದರೆ, ಕನಿಷ್ಟ ಹತ್ತು ದಿನಗಳಿಗೆ ಆಗುವಷ್ಟು ಶಸ್ತ್ರಾಸ್ತ್ರಗಳು ಆರ್ಮಿಯ ಬತ್ತಳಿಕೆಯಲ್ಲಿ ಇಲ್ಲ ಅನ್ನೋದನ್ನು ಕಂಡುಕೊಂಡ ಸರ್ಕಾರ ಇದೀಗ ಸೇನಾ ಬತ್ತಳಿಕೆಯನ್ನ ತುಂಬಿಸಲು ಹೊರಟಿದೆ.

ಈ ಸಂಬಂಧ ಈಗಾಗಲೇ 24 ಸಾವಿರ ಕೋಟಿ ರೂಪಾಯಿಯ ಡೀಲ್​ ಅನ್ನ ರಷ್ಯಾ ಹಾಗೂ ಇಸ್ರೇಲ್​ ಜೊತೆಗೆ ಮಾಡಿಕೊಂಡಿರುವ ಸರ್ಕಾರ, ಶಸ್ತ್ರಾಸ್ತ್ರಗಳ ಬಿಡಿಭಾಗಗಳು ಹಾಗೂ ಇಂಜಿನ್​ಗಳನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. ಮತ್ತೊಂದೆಡೆ 11.740 ಕೋಟಿ ರೂಪಾಯಿ ಮೌಲ್ಯದ ಡೀಲ್​ ನಲ್ಲಿ, ಸ್ಮರ್ಚ್​ ರಾಕೆಟ್​, ಕಂಗೂರ್ಸ್​ ಌಂಟಿ ಟ್ಯಾಂಕ್​ ಗೈಡೆಡ್​ ಮಿಸೈಲ್, 125 ಎಂಎಂಎಂ ಎಪಿಎಫ್​ಎಸ್​ಡಿಎಸ್​ ಶಸ್ತ್ರಗಳನ್ನ ಉತ್ಪಾದಿಸಲು ಹೊರಟಿದೆ.

ದೇಶಿ ಉತ್ಪಾದಕ ಸಂಸ್ಥೆಗಳಿಂದ ಸರ್ಕಾರ ಈ ಮೊತ್ತದ ಶಸ್ತ್ರಾಸ್ತ್ರಗಳನ್ನು ಉತ್ಪಾದನೆ ಮಾಡಲು ಹೊರಟಿದೆ. ಇನ್ನು ಹೊಸ 15 ಸಾವಿರ ಕೋಟಿ ಮೊತ್ತದ ಯೋಜನೆಯಲ್ಲಿ ಸರ್ಕಾರ ಅಂಡರ್​ ಬ್ಯಾರಲ್​ ಗ್ರೆನೇಡ್​ ಲಾಂಚರ್ಸ್​, ಆಟೋಮ್ಯಾಟಿಕ್​ ಗ್ರೆನೇಡ್​ ಲಾಂಚರ್ಸ್​, 122 ಎಂಎಂ ಗ್ರಾಡ್​ ರಾಕೆಟ್ಸ್​, ಎಲೆಕ್ಟ್ರಾನಿಕ್​ ಫ್ಯೂಜ್ಸ್​ 30 ಎಂಎಂ ಹೈ ಎಕ್ಸ್​ಪ್ಲೋಸಿವ್​ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಲು ಉದ್ದೇಶಿಸಿದೆ.