Home Local ಕುಮಟಾದಲ್ಲಿ‌ ಮತ್ತೆ ಉದಯಿಸಿದ ದಿನಕರ! ಭಾರೀ ಅಂತರದ ಗೆಲುವು ಪಡೆದ ದಿನಕರ ಶೆಟ್ಟಿ.

ಕುಮಟಾದಲ್ಲಿ‌ ಮತ್ತೆ ಉದಯಿಸಿದ ದಿನಕರ! ಭಾರೀ ಅಂತರದ ಗೆಲುವು ಪಡೆದ ದಿನಕರ ಶೆಟ್ಟಿ.

SHARE

ಕಾರವಾರ: 10 ವರ್ಷಗಳ ಹಿಂದೆ ಮೊದಲ ಬಾರಿ ಕೇವಲ 20 ಮತಗಳ ಅಂತರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ದಿನಕರ ಶೆಟ್ಟಿ, ಈ ಬಾರಿ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಜೆಡಿಎಸ್ ನಿಂದ ಬಿಜೆಪಿಗೆ ಬಂದು ಟಿಕೆಟ್ ಪಡೆದಿದ್ದ ಇವರು ಭಾರೀ ಅಂತರದ ಗೆಲುವು ಸಾಧಿಸಿ ಜನತೆ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ.

2013ರಲ್ಲಿ ಸೋಲಿನ 420 ಮತಗಳಿಂದ ಕಾಂಗ್ರೆಸ್‌ನ ಶಾರದಾ ಶೆಟ್ಟಿ (36,756) ಅವರ ಎದುರು ಸೋತಿದ್ದರು. 2008ರಲ್ಲಿ ಜೆಡಿಎಸ್‌ನಿಂದ ದಿನಕರ ಶೆಟ್ಟಿ ಕಾಂಗ್ರೆಸ್ ಶಾಸಕ ಮೋಹನ ಶೆಟ್ಟಿ ಅವರ ವಿರುದ್ಧ ಗೆದ್ದಾಗ ಅದು ರಾಜ್ಯದ ಮಟ್ಟಿಗೆ ದಾಖಲೆಯಾಗಿತ್ತು. ಆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಲಿಲ್ಲ ಎನ್ನುವ ಕಾರಣದಿಂದ ಬಿಜೆಪಿ ಪರ ದಟ್ಟ ಅನುಕಂಪದ ಅಲೆಯಿತ್ತು. ಅದನ್ನು ಮೀರಿ ಶಾರದಾ ಶೆಟ್ಟಿ ಗೆಲುವು ಸಾಧಿಸಿದ್ದು ವಿಶೇಷವಾಗಿತ್ತು.

ರಾಮಕೃಷ್ಣ ಹೆಗಡೆ ಅವರ ಆಪ್ತ ಶಿಷ್ಯರಾಗಿದ್ದ ಆರ್.ವಿ.ದೇಶಪಾಂಡೆ 1984ರ ಹೊತ್ತಿಗಾಗಲೇ ಶಾಸಕರಾಗಿದ್ದ ಸಮಯ. ಆಗ ಜಿಲ್ಲೆಯ ರಾಜಕೀಯದಲ್ಲಿ ಆರ್‌.ವಿ.ಡಿ.ಗೆ ಹಿಡಿತವಿತ್ತು. ಅಂದು ಪುರಸಭೆ ಸದಸ್ಯರಾಗಿ ಅನುಭವ ಹೊಂದಿದ್ದ ದಿನಕರ ಶೆಟ್ಟಿಯನ್ನು ಗುರುತಿಸಿದ ಆರ್.ವಿ.ಡಿ, 1994ರ ವಿಧಾನಸಭೆ ಚುನಾವಣೆಗೆ ಕುಮಟಾ–ಹೊನ್ನಾವರ ಕ್ಷೇತ್ರದಿಂದ ಸ್ಪರ್ಧಿಸಲು ಜನತಾ ದಳದಿಂದ ಟಿಕೆಟ್ ಕೊಡಿಸಿದ್ದರು.

ಜನತಾದಳದಲ್ಲಿ ರಾಮಕೃಷ್ಣ ಹೆಗಡೆ ಹಾಗೂ ಎಚ್.ಡಿ.ದೇವೇಗೌಡ ಇಬ್ಬರೂ ಇದ್ದರು. ಆದರೂ ಬಿಜೆಪಿಯ ಡಾ.ಎಂ.ಪಿ.ಕರ್ಕಿ ಅವರ ವಿರುದ್ಧ ಅಂದುದಿನಕರ ಶೆಟ್ಟಿ ಸೋತಿದ್ದರು. ಬಳಿಕ 1999ರಲ್ಲಿ ರಾಮಕೃಷ್ಣ ಹೆಗಡೆ ಅವರ ಲೋಕಶಕ್ತಿ ಪಕ್ಷದಲ್ಲಿ ಗುರುತಿಸಿಕೊಂಡ ಅವರು, ಹೆಗಡೆಯವರ ನಿಧನಾನಂತರ ಜನತಾ ಪರಿವಾರದಲ್ಲಿ ವಿಲೀನಗೊಂಡಿದ್ದರು. 2004ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರೂ ಗೆಲುವು ಸಾಧ್ಯವಾಗಿರಲಿಲ್ಲ. ಇದರ ಬಳಿಕ 2008ರಲ್ಲಿ ಜೆಡಿಎಸ್‌ನಿಂದ ಗೆದ್ದು, 2013ರಲ್ಲಿ ಸೋತ ಬಳಿಕ ಈ ಬಾರಿ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು.

ಈ ಗೆಲುವು ನನ್ನದಲ್ಲ ಇದು ಜನತೆಯ ಗೆಲುವು ಎಂಬುದು ದಿನಕರ ಶೆಟ್ಟಿಯವರ ಮಾತಾಗಿದೆ.