Home Local ಅಂಕೋಲಾದಲ್ಲಿ ರೂಪಾಲಿ ನಾಯ್ಕ ಗೆ ಅದ್ಧೂರಿ ಸ್ವಾಗತ: ಅಭಿಮಾನಿಗಳಿಗೆ ಧನ್ಯವಾದ ಹೇಳಿದ ರೂಪಾಲಿ

ಅಂಕೋಲಾದಲ್ಲಿ ರೂಪಾಲಿ ನಾಯ್ಕ ಗೆ ಅದ್ಧೂರಿ ಸ್ವಾಗತ: ಅಭಿಮಾನಿಗಳಿಗೆ ಧನ್ಯವಾದ ಹೇಳಿದ ರೂಪಾಲಿ

SHARE

ಅಂಕೋಲಾ: ಕುಮಟಾದಲ್ಲಿ ಮತ ಎಣಿಕೆಯ ನಂತರ ವಿಜಯದ ಮಾಲೆ ಧರಿಸಿ ಅಂಕೋಲಾಗೆ ಬಂದ ರೂಪಾಲಿ ನಾಯ್ಕ ಅವರನ್ನು ಅಭಿಮಾನಿಗಳು ಹಾಗೂ ಕಾರ್ಯಕರ್ತರು ವಿಜೃಂಭಣೆಯಿಂದ ಸ್ವಾಗತಿಸಿದರು.

ರೂಪಾಲಿ ನಾಯ್ಕ ಗೆ ಜೈ ಎಂದು ಜೈಕಾರ ಹಾಕುತ್ತಾ ಜೊತೆಗೆ ಬಂದ ಅಭಿಮಾನಿಗಳ ಜೊತೆ ಶಾಂತ ದುರ್ಗಾ ದೇವಸ್ಥಾನದ ತನಕ ಪಾದಯಾತ್ರೆಯನ್ನು ಮಾಡಿ ದೇವಿಯ ದರ್ಶನವನ್ನು ಪಡೆದ ರೂಪಾಲಿ ನಾಯ್ಕ ದೇವಿಯ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿದ್ದ ಮಹಿಳಾ ಅಭಿಮಾನಿಗಳಿಗಂತೂ ಖುಷಿಯೋ ಖುಷಿ, ಅಂಕೋಲಾದ ಜನತೆಗೆ, ಕಾರ್ಯಕರ್ತರಿಗೆ, ಆಭಿಮಾನಿಗಳಿಗೆ ರೂಪಾಲಿ ನಾಯ್ಕ ಅವರು ದನ್ಯವಾದ ಸಮರ್ಪಿಸಿದರು.

ವರದಿ : ನಿತೇಶ ಖೇಣಿ