Home Local ಕೊಂಕಣದ ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ಸಂಸತ್ ಉದ್ಘಾಟನೆ

ಕೊಂಕಣದ ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ಸಂಸತ್ ಉದ್ಘಾಟನೆ

SHARE

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಶಾಲಾ ಸಂಸತ್‍ನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಎ. ವಿ. ಬಾಳಿಗಾ ಕಾಲೇಜಿನ ಪ್ರೊ. ಎಂ. ಜಿ. ನಾಯ್ಕ, ಸಂಸತ್ತಿನ ಐತಿಹ್ಯವನ್ನು ವಿವರಿಸಿ, ಪ್ರಜಾಪ್ರಭುತ್ವಲ್ಲಿ ಜವಾಬ್ದಾರಿ ಅರಿತು ನಡೆದಾಗ ಅದು ಯಶಸ್ಸನ್ನು ಪಡೆಯುತ್ತದೆ. ವಿದ್ಯಾರ್ಥಿಗಳು ಸಹನೆಯಿಂದ ವರ್ತಿಸಿ ಪೂರ್ಣತೆಯನ್ನು ಹೊಂದಿದರೆ ಗುರಿ ಶತಸಿದ್ಧ ಎಂದು ಕಿವಿಮಾತುಗಳನ್ನು ಹೇಳಿದರು. ಕೊಂಕಣ ಎಜ್ಯುಕೇಶನ್ ಸಂಸ್ಥೆಯ ಅಧ್ಯಕ್ಷರಾದ ಕಾಶೀನಾಥ ನಾಯಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಅಧಿಕಾರ ವಹಿಸಿಕೊಂಡ ವಿದ್ಯಾರ್ಥಿಗಳು ಅಹಂಕಾರ ಪಡದೆ, ವಿನಯದಿಂದ ವರ್ತಿಸುವ ಗುಣ ಬೆಳೆಸಿಕೊಂಡರೆ ಉತ್ತಮ ರಾಷ್ಟ ನಿರ್ಮಾಣ ಸಾಧ್ಯ ಎಂದರು. ಶೈಕ್ಷಣಿಕ ಸಲಹೆಗಾರರಾದ ಆರ್.ಎಚ್.ದೇಶಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕಿಯರಾದ ಸುಮಾ ಪ್ರಭು ಸ್ವಾಗತಿಸಿದರು, ಶಿಕ್ಷಕ ಜಯರಾಜ, ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು, ಶಿಕ್ಷಕ ಪ್ರಕಾಶ ಗಾವಡಿ ನಿರೂಪಿಸಿದರು, ಶಿಕ್ಷಕಿ ಅನಿತಾ ಪಟಗಾರ ವಂದನೆಗಳನ್ನು ಸಲ್ಲಿಸಿದರು, ವಿದ್ಯಾರ್ಥಿ ಪ್ರತಿನಿಧಿಗಳಾದ ಕುಮಾರಿ ಸಿ.ಎನ್.ಧನ್ಯಾ ಹಾಗೂ ಕುಮಾರ ಅಭಿಷೇಕ ಗಾಂವಕರ ಅನಿಸಿಕೆಯ ಮಾತುಗಳನ್ನಾಡಿದರು. ಕುಮಾರಿ ಶಿಲ್ಪಾ ಭಟ್ಟ ಸಂಗಡಿಗರು ಪ್ರಾರ್ಥಿಸಿದರು.