Home Local ಗೆಲುವಿನ ಸಂತಸದಲ್ಲಿರುವ ಬಿಜೆಪಿ ಅಭ್ಯರ್ಥಿಗಳಿಗೆ ಅಭಿನಂದಿಸಿದ ಶಾಸ್ತ್ರಿ ದಂಪತಿ.

ಗೆಲುವಿನ ಸಂತಸದಲ್ಲಿರುವ ಬಿಜೆಪಿ ಅಭ್ಯರ್ಥಿಗಳಿಗೆ ಅಭಿನಂದಿಸಿದ ಶಾಸ್ತ್ರಿ ದಂಪತಿ.

SHARE

ಹೊನ್ನಾವರ : ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ಗೆಲವು ಪಡೆದ ದಿನಕರ ಶೆಟ್ಟಿಯವರಿಗೆ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಅಪಾರ ಜನ ಬೆಂಬಲ ಪಡೆದ ಭಟ್ಕಳ ಹೊನ್ನಾವರ ಕ್ಷೇತ್ರದ ಅಭ್ಯರ್ಥಿ ಸುನಿಲ್‌ ನಾಯ್ಕ ಅವರಿಗೆ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಕಲಾ ಶಾಸ್ತ್ರಿ ಹಾಗೂ ಉದ್ಯಮಿ ಸುಬ್ರಹ್ಮಣ್ಯ ಶಾಸ್ತ್ರಿ ಯವರು ಅಭಿನಂದನೆ ಸಲ್ಲಿಸಿದ್ದಾರೆ. 32 ಸಾವಿರಕ್ಕೂ ಅಧಿಕ ಮತಗಳ ಭಾರೀ ಅಂತರದ ಗೆಲುವು ಪಡೆದ ಬಗ್ಗೆ ಸಂತಸ ವ್ಯಕ್ರಪಡಿಸಿದ ಅವರು, ಭಟ್ಕಳದಲ್ಲಿ ಬಿಜೆಪಿ ಗೆಲ್ಲಿಸಿದ ಸಮಸ್ತ ಜನತೆಗೆ ಅಭಿವಂದನೆ ಸಲ್ಲಿಸಿದರು.

ದಿನಕರ ಶೆಟ್ಟಿಯವರ ಜೊತೆಗೆ ಹಾಗೂ ಸುನಿಲ್ ನಾಯ್ಕ ಅವರ ಜೊತೆ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿ ಅವರಿಗೆ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಕಲಾ ಶಾಸ್ರಿ ಮತ್ತು ಅವರ ಪತಿ ಉದ್ಯಮಿ ಸುಬ್ರಹ್ಮಣ್ಯ ಶಾಸ್ತ್ರಿ ಬೆಂಬಲ ನೀಡಿದ್ದರು. ದಿನಕರ ಶೆಟ್ಟಿ ಟಿಕೆಟ್ ಪಡೆಯುವಾಗ ಸಂದರ್ಭದಿಂದಲೇ ಅವರ ಜೊತೆಗಿದ್ದು ಬೆಂಬಲ‌ ಸೂಚಿಸಿದ್ದ ಸುಬ್ರಹ್ಮಣ್ಯ ಶಾಸ್ತ್ರಿ ದಿನಕರ ಶೆಟ್ಟಿಯವರು ಬಿ.ಫಾರಂ ಪಡೆಯುವಾಗಲೂ ಜೊತೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

ತಮ್ಮ ಕ್ಷೇತ್ರದಲ್ಲಿ ದಿನಕರ ಶೆಟ್ಟಿಯವರ ಪರವಾಗಿ ಹಾಗೂ ಸುನಿಲ್ ನಾಯ್ಕ ಪರವಾಗಿ ಶ್ರೀಕಲಾ ಶಾಸ್ತ್ರಿಯವರು ಪ್ರಚಾರ ನಡೆಸಿ ಹೆಚ್ಚಿನ ಮತಗಳಿಕೆಗೆ ಸಹಕರಿಸಿದ್ದರು. ಉಷಾ ದಿನಕರ ಶೆಟ್ಟಿಯವರ ಜೊತೆ ಮುಗ್ವಾ ಹಾಗೂ ಹೊಸಾಕುಳಿ ಭಾಗದಲ್ಲಿ ಪ್ರಚಾರ ಕಾರ್ಯದಲ್ಲಿ ಇವರು ತೊಡಗಿಸಿಕೊಂಡಿದ್ದರು.ಸುನಿಲ್ ನಾಯ್ಕ ಪರ ಅಬ್ಬರದ ಪ್ರಚಾರಕ್ಕೂ ತೆರಳಿದ್ದರು. ಅದಷ್ಟೇ ಅಲ್ಲದೇ ಅನೇಕ ಕಡೆಗಳಲ್ಲಿ ಬಿಜೆಪಿ ಅಭ್ಯರ್ಥಿಪರ ಹಗಲಿರುಳೆನ್ನದೆ ಪ್ರಚಾರದಲ್ಲಿ ತೊಡಗಿದ್ದರು. ಬಿಜೆಪಿ ಪಕ್ಷದ ಜನಪರ ಯೋಜನೆ ಹಾಗೂ ಮೋದಿಯವರ ಆಡಳಿತದ ಬಗ್ಗೆ ಜನ ಮಾನಸಕ್ಕೆ ವಿಷಯ ತಲುಪಿಸುವ ಕಾರ್ಯದಲ್ಲಿ ಅವರು ನಿರತರಾಗಿ ತೊಡಗಿಸಿಕೊಂಡಿದ್ದರು.

ಬಿಜೆಪಿಯಲ್ಲಿ ತಮ್ಮನ್ನು ಗುರುತಿಸಿಕೊಂಡು ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿ ಜನತೆಯ ಜೊತೆ ಸದಾ ಸಾಮಾಜಿಕ‌ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಶ್ರೀಕಲಾ ಶಾಸ್ತ್ರಿಯವರು ದಿನಕರ ಶೆಟ್ಟಿಯವರ ಪ್ರಚಾರ ಕಾರ್ಯದಲ್ಲಿ ತೊಡಗಿ ಬಿಜೆಪಿಯ ಬಲ ಹೆಚ್ಚಿಸಿದ್ದರು. ಅವರ ಜೊತೆಗೆ ಉದ್ಯಮಿ ಸುಬ್ರಹ್ಮಣ್ಯ ಶಾಸ್ತ್ರಿಯವರು ಬಿಜೆಪಿಗೆ ಬಲ‌ ತುಂಬಿದ್ದರು.